Dharwad | ನೆಹರು ಹೆಸರು ಕೈ ಬಿಟ್ಟ ವಿಚಾರಕ್ಕೆ ಹಾಲಪ್ಪ ಆಚಾರ್ ಹೇಳಿದ್ದೇನು ?
ಧಾರವಾಡ : ನೆಹರೂ ಅವರು ಗಾಂಧಿಯವರ ಜೊತೆ ಕೆಲಸ ಮಾಡಿದ್ದಾರೆ. ಎಲ್ಲರ ಹೆಸರನ್ನೂ ಎಲ್ಲ ಕಡೆ ಹೇಳಲು ಆಗುವುದಿಲ್ಲ. ಗಾಂಧಿ ಹೆಸರು ಹೇಳಿದರೆ ಅಲ್ಲಿ ಎಲ್ಲರೂ ಬರುತ್ತಾರೆ. ಎಲ್ಲರ ಹೆಸರನ್ನೂ ಬೆರಳು ಮಾಡಿ ಹೇಳಲು ಆಗುವುದಿಲ್ಲ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಸರ್ಕಾರದ ಜಾಹೀರಾತಿನಲ್ಲಿ ನೆಹರು ಫೋಟೋ, ಹೆಸರು ಕೈ ಬಿಟ್ಟ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದರು.
ಈ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಹಾಲಪ್ಪ ಆಚಾರ್, ನೆಹರೂ ಅವರು ಗಾಂಧಿಯವರ ಜೊತೆ ಕೆಲಸ ಮಾಡಿದ್ದಾರೆ. ಎಲ್ಲರ ಹೆಸರನ್ನೂ ಎಲ್ಲ ಕಡೆ ಹೇಳಲು ಆಗುವುದಿಲ್ಲ. ಗಾಂಧಿ ಹೆಸರು ಹೇಳಿದರೆ ಅಲ್ಲಿ ಎಲ್ಲರೂ ಬರುತ್ತಾರೆ. ಎಲ್ಲರ ಹೆಸರನ್ನೂ ಬೆರಳು ಮಾಡಿ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಉದ್ದೇಶಪೂರ್ವಕವಾಗಿ ನೆಹರು ಹೆಸರು ಬಿಟ್ಟಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್, ಹಾಗೆ ಮಾತನಾಡುವವರು ಮಾತನಾಡುತ್ತಲೇ ಇರುತ್ತಾರೆ. ಅದಕ್ಕೇನು ಮಾಡಲು ಆಗುವುದಿಲ್ಲ. ವೈಯಕ್ತಿಕವಾಗಿ ಒಬ್ಬೊಬ್ಬರನ್ನು ಅಳೆಯಲು ಆಗುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲರೂ ಮಹನೀಯರು, ಎಲ್ಲರ ಹೆಸರು ಪಡೆಯಲು ಆಗುವುದಿಲ್ಲ. ಒಬ್ಬೊಬ್ಬರನ್ನೇ ಗುರುತಿಸಿ ಆ ಪಕ್ಷದವರು ಈ ಪಕ್ಷದವರು ಅಂತಾ ಗುರುತಿಸಲು ಆಗೋದಿಲ್ಲ ಎಂದು ಹೇಳಿದ್ದಾರೆ.