DHFWS Gadag Recruitment 2025 – ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಡಿಯಲ್ಲಿ PM-ABHEEM ಯೋಜನೆಯಡಿ ಖಾಲಿ ಇರುವ ಲ್ಯಾಬೊರೇಟರಿ ಟೆಕ್ನೀಷಿಯನ್ / ಕಿರಿಯ ದರ್ಜೆ ಸಹಾಯಕ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಹುದ್ದೆ ಹೆಸರು:
ಲ್ಯಾಬೊರೇಟರಿ ಟೆಕ್ನೀಷಿಯನ್ / ಕಿರಿಯ ದರ್ಜೆ ಸಹಾಯಕ – 11 ಹುದ್ದೆಗಳು
ನರ್ಸಿಂಗ್ ಆಫೀಸರ್ – 11 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: 22
ಕೆಲಸದ ಸ್ಥಳ: ಗದಗ ಜಿಲ್ಲೆ, ಕರ್ನಾಟಕ
ವಿದ್ಯಾರ್ಹತೆ:
1. ಲ್ಯಾಬೊರೇಟರಿ ಟೆಕ್ನೀಷಿಯನ್ / ಕಿರಿಯ ದರ್ಜೆ ಸಹಾಯಕ:
SSLC ಉತ್ತೀರ್ಣರಾಗಿರಬೇಕು ಹಾಗೂ
ಲ್ಯಾಬೊರೇಟರಿ ಟೆಕ್ನಾಲಾಜಿಯಲ್ಲಿ 3 ವರ್ಷಗಳ ಡಿಪ್ಲೊಮಾ ಕೋರ್ಸ್ ಅಥವಾ
2ನೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿದ್ದು, 2 ವರ್ಷಗಳ ಲ್ಯಾಬ್ ಟೆಕ್ನೀಷಿಯನ್ ತರಬೇತಿ ಪಡೆದಿರಬೇಕು.
2. ನರ್ಸಿಂಗ್ ಆಫೀಸರ್:
B.Sc ನರ್ಸಿಂಗ್
B.Sc ನರ್ಸಿಂಗ್ ಅಥವಾ ಡಿಪ್ಲೊಮಾ ಇನ್ ನರ್ಸಿಂಗ್
ವಯೋಮಿತಿ:
ಗರಿಷ್ಠ ವಯಸ್ಸು: 45 ವರ್ಷ
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ರೋಸ್ಟರ್ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಯಾವುದೇ ಪರೀಕ್ಷೆ ಅಥವಾ ಸಂದರ್ಶನದ ಕುರಿತು ಅಧಿಸೂಚನೆಯಲ್ಲಿ ಪ್ರತ್ಯೇಕವಾಗಿ ಮಾಹಿತಿ ನೀಡಲಾಗಬಹುದು.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ. ಎಲ್ಲಾ ಅಭ್ಯರ್ಥಿಗಳಿಗೂ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸುವ ವಿಧಾನ:
ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ – ಶೈಕ್ಷಣಿಕ ದಾಖಲೆ, ಗುರುತಿನ ಪಡಿತರ ಚೀಟಿ, ಮೊಬೈಲ್ ಸಂಖ್ಯೆ ಇತ್ಯಾದಿ.
ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿಗಳನ್ನು ನಮೂದಿಸಿ.
ಪ್ರಮಾಣಪತ್ರಗಳನ್ನು ಸ್ಕಾನ್ ಮಾಡಿ ಅಪ್‌ಲೋಡ್ ಮಾಡಿ
ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ದಿನಾಂಕಗಳು:
ಅರ್ಜಿಯ ಆರಂಭ ದಿನಾಂಕ: 20 ಮೇ 2025
ಅರ್ಜಿಯ ಕೊನೆಯ ದಿನಾಂಕ: 30 ಮೇ 2025
Website: https://sevasindhuservices.karnataka.gov.in/renderApplicationForm.do;jsessionid=6F2B3246314403C19FA0D18FDAEDF24B?serviceId=24280009&UUID=4cff8e2e-66f6-4cc2-8ffd-5589d818e526&directService=true&tempId=9637&serviceNameToDisplay=Recruitment+For+the+Staff+Nurse+and+Lab+Tech+Officer+%2F+LDC+Posts+Under+PM-ABHIM+Gadag-24-2025&grievDefined=0&serviceLinkRequired=No&userLoggedIn=N&source=CTZN&OWASP_CSRFTOKEN=L2R0-HTAF-X859-2J45-2DRK-5CRH-AROG-KL4H








