ಟಿ-20 ವಿಶ್ವಕಪ್ – ಸಂಭಾವಣೆ ಪಡೆಯದ ಟೀಮ್ ಇಂಡಿಯಾದ ಮೆಂಟರ್ ಧೋನಿ..!

1 min read

ಟಿ-20 ವಿಶ್ವಕಪ್ – ಸಂಭಾವಣೆ ಪಡೆಯದ ಟೀಮ್ ಇಂಡಿಯಾದ ಮೆಂಟರ್ ಧೋನಿ..!

ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿರಾಟ್ ಬಳಗಕ್ಕೆ ಮೆಂಟರ್ ಅಗಿ ಆಯ್ಕೆಯಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಈ ನಡುವೆ ರವಿಶಾಸ್ತಿç ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವುದರಿಂದ ಮಹೇಂದ್ರ ಸಿಂಗ್ ಧೋನಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಬೇಕಿತ್ತಾ ಅನ್ನೋ ಪ್ರಶ್ನೆಗಳು ಇವೆ.

ಆದ್ರೆ ಬಿಸಿಸಿಐ ಲೆಕ್ಕಚಾರವೇ ಬೇರೆಯೇ ಆಗಿದೆ. ಧೋನಿ ಅನುಭವ ಟೀಮ್ ಇಂಡಿಯಾಗೆ ಸಹಕಾರಿಯಾಗಲಿದೆ.

ಜೊತೆಗೆ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಮತ್ತು 2011 ವಿಶ್ವಕಪ್ ಗೆದ್ದ ತಂಡದ ನಾಯಕನಾಗಿರುವುದರ ಜೊತೆಗೆ ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಯೂ ಧೋನಿಯ ಹೆಸರಿನಲ್ಲಿದೆ.

ಹೀಗಾಗಿ ವಿರಾಟ್ ಬಳಗಕ್ಕೆ ಧೋನಿ ಮೆಂಟರ್ ಆಗಿ ಬಿಸಿಸಿಐ ನೇಮಕ ಮಾಡಿದೆ.

ಹಾಗೇ ಇನ್ನೊಂದು ಖುಷಿಯ ವಿಚಾರ ಅಂದ್ರೆ, ಮಹೇಂದ್ರ ಸಿಂಗ್ ಧೋನಿ ಅವರು ಟೀಮ್ ಇಂಡಿಯಾದ ಮೆಂಟರ್ ಆಗಿದ್ರೂ ಕೂಡ ಯಾವುದೇ ರೀತಿಯ ಸಂಭಾವಣೆಯನ್ನು ಪಡೆದುಕೊಳ್ಳುತ್ತಿಲ್ಲ.

ಈ ವಿಚಾರವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರು ಹೇಳಿದ್ದಾರೆ.

Dhoni saaksha tv

ಮಹೇಂದ್ರ ಸಿಂಗ್ ಧೋನಿ ಅವರು ತಂಡದ ಮೆಂಟರ್ ಆಗಿ ಯಾವುದೇ ರೀತಿಯ ಸಂಭಾವಣೆಯನ್ನು ಪಡೆಯುತ್ತಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

2019ರ ವಿಶ್ವಕಪ್ ನ ಸೆಮಿಪೈನಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಟ್ಟ ಕಡೆಯ ಅಂತಾರಾಷ್ಟಿçÃಯ ಪಂದ್ಯವನ್ನು ಆಡಿದ್ದರು. ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಬಹುದಾಗಿದ್ದ ಪಂದ್ಯದಲ್ಲಿ ಧೋನಿ ರನೌಟ್ ಆಗಿ ನಿರಾಸೆಯಿಂದಲೇ ಪೆವಿಲಿಯನ್‌ಗೆ ಹಿಂತಿರುಗಿದ್ದರು.

ಆದಾದ ನಂತರ ಧೋನಿ ಟಿ-20 ವಿಶ್ವಕಪ್ ನಲ್ಲಿ ಆಡುವ ಮೂಲಕ ಅಂತಾರಾಷ್ಟಿçÃಯ ಕ್ರಿಕೆಟ್ ಗೆ ವಿದಾಯ ಹೇಳ್ತಾರೆ ಅಂತ ಎಲ್ಲರೂ ಅಂದುಕೊAಡಿದ್ರು. ಆದ್ರೆ ಕೋವಿಡ್ ನಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಲಾಗಿತ್ತು. ಕೊನೆಗೆ 2020 ಆಗಸ್ಟ್ 15ರಂದು ಧೋನಿ ಅಂತಾರಾಷ್ಟಿçÃಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

ಇದೀಗ 2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಿಂದ ಶುರುವಾಗಲಿದೆ. ಧೋನಿ ಟೀಮ್ ಇಂಡಿಯಾದ ಮೆಂಟರ್ ಆಗುವ ಮೂಲಕ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಭಾಗಿಯಾಗಲಿದ್ದಾರೆ.

ಸದ್ಯ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಅಲ್ಲದೆ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ಹಂತಕ್ಕೂ ತಲುಪಿಸಿದ್ದಾರೆ. ಧೋನಿ ಅನುಭವ, ಚಾಣಕ್ಷತನ, ತಂಡವನ್ನು ಹುರಿದುಂಬಿಸುವ ಕೌಶಲ್ಯತೆ ಟೀಮ್ ಇಂಡಿಯಾಗಿದೆ. ಇದು ವಿರಾಟ್ ಕೊಹ್ಲಿಗೂ ವರದಾನವಾಗಬಹುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd