ಧೋನಿಯ ಕಾಲಿಗೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿದ ಅಭಿಮಾನಿ
ಚೆನ್ನೈ ಎಂ.ಎ.ಚಿದಂಬರಂ ಮೈದಾನದಲ್ಲಿ ಅಭಿಮಾನಿಯ ಹುಚ್ಚು ಅಭಿಮಾನ
ಐಪಿಎಲ್‍ಗೆ ಸಕತ್ತು ಸಿದ್ಧತೆ ಮಾಡಿಕೊಳ್ಳುತ್ತಿರುವ ಸಿಎಸ್‍ಕೆ
ಇದು ನಿಜವಾದ ಅಭಿಮಾನವೂ… ಹುಚ್ಚು ಅಭಿಮಾನವೋ.. ಗೊತ್ತಿಲ್ಲ. .ಬಹುಶ: ಆತ ತನ್ನ ಅಪ್ಪ – ಅಮ್ಮನ ಕಾಲಿಗೆ ಬಿದ್ದಿದ್ದಾನೋ.. ಕಲಿಸಿದ ಗುರುವಿಗೆ ಪಾದ ಮುಟ್ಟಿ ನಮಸ್ಕರಿದ್ದಾನೋ… ಹಿರಿಯರ ಕಾಲಿಗೆ ಪೂಜೆ ಮಾಡಿದ್ದಾನೋ ಅದು ಕೂಡ ಗೊತ್ತಿಲ್ಲ…ಆದ್ರೆ ತನ್ನ ಪ್ರೀತಿಯ ಆರಾಧ್ಯ ದೈವ, ನೆಚ್ಚಿನ ಕ್ರಿಕೆಟಿಗನ ಕಾಲಿಗೆ ಬಿದ್ದು ತನ್ನ ಜನ್ಮ ಸಾರ್ಥಕವಾಯ್ತು ಅಂತ ಅಂದುಕೊಂಡಿದ್ದಾನೆ.
ಹೌದು, ಇದು ನಡೆದಿದ್ದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬರುವ ಐಪಿಎಲ್ ಟೂರ್ನಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಿಎಸ್‍ಕೆ ತಂಡದ ಆಟಗಾರರು ಗಂಭೀರವಾಗಿಯೇ ತಾಲೀಮು ನಡೆಸುತ್ತಿದ್ದಾರೆ. ನಾಯಕ ಮಹೇಂದ್ರ ಸಿಂಗ್ ತನ್ನ ಕಾಯಕ ವಿಕೆಟ್ ಕೀಪಿಂಗ್ ಮಾಡುತ್ತಿದ್ದರು.
ಈ ವೇಳೆ ಅಭಿಮಾನಿಯೊಬ್ಬ ಧೋನಿಯ ಬಳಿ ಓಡೋಡಿ ಬಂದುಬಿಟ್ಟಿದ್ದಾನೆ. ಭದ್ರತಾ ಸಿಬ್ಬಂದಿಗಳು ಕೂಡ ಅಭಿಮಾನಿಯನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದರು. ಆದ್ರೆ ಹುಚ್ಚು ಅಭಿಮಾನಿ ಭದ್ರತಾ ಸಿಬ್ಬಂದಿಗಳಿಗಿಂತ ವೇಗವಾಗಿ ಓಡ್ಕೊಂಡು ಬಂದು ಧೋನಿ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾನೆ.
ಆದ್ರೆ ಧೋನಿಗೆ ಇದೆಲ್ಲಾ ಮಾಮೂಲಿ ಎಂಬಂತೆ ತನ್ನ ಪಾಡಿಗೆ ಅಭ್ಯಾಸದತ್ತ ಗಮನ ಹರಿಸಿದ್ರು. ಯಾಕಂದ್ರೆ ಅಭಿಮಾನಿಗಳು ಈ ರೀತಿ ಮೈದಾನಕ್ಕೆ ಓಡ್ಕೊಂಡು ಬಂದು ಕಾಲಿಗೆ ಬೀಳುವುದು ಹೊಸದೇನಲ್ಲ. ಇಂತಹ ಘಟನೆಗಳು ಈ ಹಿಂದೆ ಹಲವು ಬಾರಿ ನಡೆದಿದೆ.
ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಐಪಿಎಲ್ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಐಪಿಎಲ್‍ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ 2020ಯ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಆಡಿ ತಮ್ಮ ಕ್ರಿಕೆಟ್ ಬದುಕಿಗೆ ಅರ್ಥಪೂರ್ಣ ವಿದಾಯ ಹೇಳುವ ಯೋಚನೆಯಲ್ಲಿದ್ದಾರೆ. ಆದ್ರೆ ಆಯ್ಕೆ ಸಮಿತಿ ಧೋನಿಯ ಲೆಕ್ಕಚಾರಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಅನ್ನೋದನ್ನು ಕಾದುನೋಡಬೇಕು