ಧ್ರುವ ಫ್ಯಾನ್ಸ್ ಗೆ ಗುಡ್ ನ್ಯೂಸ್.. ಆಗಸ್ಟ್ 24ಕ್ಕೆ 6ನೇ ಸಿನಿಮಾ ಘೋಷಣೆ : ಡೈರೆಕ್ಟರ್ ಯಾರ್ ಗೊತ್ತಾ..?
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ 5ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದ್ಧೂರಿ ನಿರ್ದೇಶಕ ಎಪಿ ಅರ್ಜುನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.. ಅಂದ್ಹಾಗೆ ಇದಕ್ಕೂ ಮುನ್ನ ಧ್ರುವ ನಂದ ಕಿಸೋರ್ ಜೊತೆಗೆ ದುಬಾರಿ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗ್ತಿತ್ತು.. ಪೊಗರು ಸಿನಿಮಾ ರಿಲೀಸ್ ಗೂ ಮುನ್ನವೇ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ನೆರವೇರಿತ್ತು.. ಆದ್ರೆ ಇದ್ದಕ್ಕಿದ್ದಂತೆ ಆ ಸಿನಿಮಾ ಪಕ್ಕಕ್ಕಿಟ್ಟ ಧ್ರುವ ‘ಮಾರ್ಟಿನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಮಾರ್ಟಿನ್ ಚಿತ್ರದ ಟೈಟಲ್ ಟೀಸರ್ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು, ಚಿತ್ರೀಕರಣ ಸಹ ಶುರುವಾಗಿದೆ. ಈ ನಡುವೆ ಧ್ರುವ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗ್ತಿದೆ.. ಈ ಸುದ್ದಿ ಕೇಳಿ ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 6ನೇ ಚಿತ್ರ ಓಕೆ ಮಾಡಿದ್ದು, ಈಗ ಅಧಿಕೃತವಾಗಿ ಪ್ರಕಟಿಸುತ್ತಿದ್ದಾರೆ. ಧ್ರುವ ಸರ್ಜಾ 6ನೇ ಸಿನಿಮಾದ ಹೆಸರು ಮತ್ತು ನಿರ್ದೇಶಕ ಯಾರು ಎಂದು ಆಗಸ್ಟ್ 24 ರಂದು ಪ್ರಕಟಿಸಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ನಿರ್ದೇಶಕ ಯಾರೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ..
ಕಾಂಚನಾ-3 ಸಿನಿಮಾದ ನಟಿ ಅಲೆಕ್ಸಾಂಡ್ರಾ ಶವ ಪತ್ತೆ
ಅನೇಕರ ಹೆಸರುಗಳು ಚರ್ಚೆಯಾಗ್ತಿದೆ.. ಆದ್ರೆ ಜೋಗಿ ಪ್ರೇಮ್ ಅವರ ಹೆಸರು ಮುನ್ನೆಲೆಯಲ್ಲಿದೆ.. ಇದಕ್ಕೆ ಕಾರಣವೂ ಇದೆ.. ಏಕ್ ಲವ್ ಸಿನಿಮಾದಲ್ಲಿ ಬ್ಯುಸಿಯಿರುವ ಪ್ರೇಮ್ ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಹೀರೋ ಬಗ್ಗೆ ಸಸ್ಪೆನ್ಸ್ ಬಿಟ್ಟುಕೊಟ್ಟಿಲ್ಲ.. ಟೈಟಲ್ ಕೂಡ ಹೇಳಿಲ್ಲ. ಹೀಗಾಗಿ ಅನೇಕರು ಪ್ರೇಮ್ ಅವರೇ ಧ್ರುವ ಮುಂದಿನ ಸಿನಿಮಾಗೆ ಡೈರೆಕ್ಟರ್ ಎಂದು ಹೇಳುತ್ತಿದ್ದಾರೆ.
ಅಲ್ಲದೇ ಪ್ರೇಮ್ ಆಗಸ್ಟ್ 24ರಂದೇ ಹೊಸ ಸಿನಿಮಾ ಪ್ರಕಟಿಸುವ ಸಾಧ್ಯತೆ ಇದೆ ಎಂದಿದ್ದರು.. ಹೀಗಾಗಿ ಪಕ್ಕಾ ಧ್ರುವ ಹಾಗೂ ಪ್ರೇಮ್ ಅವರೇ ಮುಂದಿನ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗ್ತಿದೆ. ಪ್ರೇಮ್ ಅವರು ಆಗಸ್ಟ್ 9 ರಂದು ತಮ್ಮ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದರು. ಇದು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ 9ನೇ ಚಿತ್ರವಾಗಿದ್ದು, ಹೆಚ್ಚಿನ ವಿವರವನ್ನು ಆಗಸ್ಟ್ ತಿಂಗಳ ಅಂತ್ಯದಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದರು.