ಸಖತ್ ‘ಡೈಲಾಗ್’ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಡೈಲಾಗ್ ಕಿಂಗ್ ಧ್ರುವಾ..!
ಬೆಂಗಳೂರು : ಮಾಸ್ ಲುಕ್ , ಮಾಸ್ ರೇಂಜ್ ಫ್ಯಾನ್ಸ್ ಹೊಂದಿದ್ದರೂ ತಮ್ಮ ಡೈಲಾಗ್ ನಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಯಾಂಡಲ್ ವುಡ್ ಡೈಲಾಗ್ ಕಿಂಗ್ ಧ್ರುವ ಸರ್ಜಾ ಇದೀಗ ಕೊರೊನಾ ಜಾಗೃತಿ ಮೂಡಿಸಿದ್ಧಾರೆ. ಅದು ಕೂಡ ತಮ್ಮದೇ ಶೈಲಿಯ ಡೈಲಾಗ್ ಮೂಲಕ… ಹೌದು.. ಕೊರೊನಾ ಸಂಕಷ್ಟದ ಪರಿಸ್ಥಿಯಲ್ಲಿ ಜನ ಆತಂಕ್ಕೆ ಒಳಗಾಗಿದ್ದು, ಅಂತಹವಿರಿಗೆ ಧರ್ಯ ತುಂಬವ ಕಾರ್ಯವನ್ನಕೆಲ ಸೆಲೆಬ್ರಿಟಿಗಳು ಮಾಡ್ತಿದ್ದಾರೆ. ಇದೀಗ ಧ್ರುವ ಕೂಡ ಈ ಲಿಸ್ಟ್ ಗೆ ಸೇರಿದ್ದಾರೆ.
‘ಅಪ್ಪ-ಅಮ್ಮ ಕೊಟ್ಟಿರುವ ಅದ್ದೂರಿ ಬದುಕನ್ನು ಟಚ್ ಮಾಡೋಕೆ ಜವರಾಯನ ಏಜೆಂಟ್ ಕೊರೊನಾ ನಮ್ಮತ್ರಾನೆ ಐಸ್ ಪೈಸ್ ಆಟ ಆಡುತ್ತಿದೆ. ಆದರೆ ಅದಕ್ಕೆ ಗೊತ್ತಿಲ್ಲ, ನಾವು ಮಾಸ್ಕ್ ಹಾಕಿಕೊಂಡು ಅದಕ್ಕೆ ದಿನ ನಾಳೆ ಬಾ ನಾಳೆ ಬಾ ಅಂತ ಚೆಟ್ ಇಟ್ಟಿದ್ದೀವಿ ಅಂತ. ಅಣ್ಣಂದಿರ ಅಕ್ಕಂದಿರ ಭೂಮಿ ಮೇಲೆ ಹುಟ್ಟೋದೆ ಭಾಗ್ಯ ಅದರಲ್ಲೂ ಮನುಷ್ಯನ ಜನ್ಮ ಸಿಗುವುದು ಸೌಭಾಗ್ಯ ಸಿಕ್ಕಿದನ್ನು ಇವತ್ತು ಕಾಪಾಡಿಕೊಳ್ಳಬೇಕು ಎಂದರೆ ಉಳಿಕೊಳ್ಳಬೇಕು ನಮ್ಮ ಆರೋಗ್ಯ’ ಎಂದು ಡೈಲಾಗ್ ಹೊಡೆದು ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದ್ರೆ ಫೆಬ್ರವರಿಯಲ್ಲಿ ಅವರ ನಟನೆಯ ಬಹುನಿರೀಕ್ಷೆಯ ಪೊಗರು ಸಿನಿಮಾ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದೆ. ಸೂಪರ್ ಹಿಟ್ ಆಗಿದ್ದು, ಈಗಾಗಲೇ ಟಿವಿಯಲ್ಲೂ ರಿಲೀಸ್ ಆಗಿ ಒಳ್ಲೆ ರೆಸ್ಪಾನ್ಸ್ ಪಡೆದುಕೊಂಡಿದೆ. ಇದಾದ ನಂತರ ಧ್ರುವ ಮತ್ತೊಮ್ಮೆ ನಂದಕಿಸೋರ್ ಅವರ ಸಿನಿಮಾದಲ್ಲಿ ನಡಿಸಬೇಕಾಗಿತ್ತು. ದುಬಾರಿ ಸಿನಿಮಾದ ಸ್ಕ್ರಿಪ್ಟ್ ಪೂಜೆಯೂ ಈಗಾಗಲೇ ನೆರವೇರಿದೆ. ಆದ್ರೆ ಧ್ರುವ ಸರ್ಜಾ ಅವರು ತಾತ್ಕಾಲಿಕವಾಗಿ ಈ ಸಿನಿಮಾದ ಶೂಟಿಂಗ್ ನಿಂದ ಹಿಂದೆ ಸರಿದಿದ್ದಾರೆ.