ಡೈಮಂಡ್ ಲೀಗ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ…
ಟೋಕಿಯೋ ಒಲಂಪಿಕ್ ನ ಚಿನ್ನದ ಹಡುಗ, ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಮೊದಲ ಬಾರಿಗೆ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 88. 44 ಮೀಟರ್ ಜಾವೆಲಿನ್ ಎಸೆತದ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ನೀರಜ್ 2017 ಮತ್ತು 2018 ರಲ್ಲಿಯೂ ಫೈನಲ್‌ಗೆ ಅರ್ಹತೆ ಪಡೆದಿದ್ದರಾದರೂ, ಏಳು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.
ಡೈಮಂಡ್ ಲೀಗ್ ನ ಪೈನಲ್ಲಿ ನೀರಜ್ ಮೊದಲ ಎಸೆತದಲ್ಲೇ ಕೆಟ್ಟ ಆರಂಭವನ್ನ ಪಡೆದಿದ್ದರು. ಅವರ ಮೊದಲ ಎಸೆತವು ಫೌಲ್ ಆಗಿತ್ತು. ನಂತರ ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ದೂರ ಎಸೆಯುವ ಮೂಲಕ ಇತರ ಪ್ರತಿಸ್ಪರ್ಧಿಗಳಿಂತ ಮುನ್ನಡೆ ಸಾಧಿಸಿದರು. ಮೂರನೇ ಪ್ರಯತ್ನದಲ್ಲಿ 88.00 ಮೀಟರ್, ನಾಲ್ಕನೇಯಲ್ಲಿ 86.11 ಮೀಟರ್, ಐದನೇಯಲ್ಲಿ 87.00 ಮೀಟರ್ ಮತ್ತು ಆರನೇ ಪ್ರಯತ್ನದಲ್ಲಿ 83.60 ಮೀಟರ್ ಎಸೆದರು.
ಜಾಕೋಬ್ ವಾಡ್ಲೆಚ್ ಎರಡನೇ ಸ್ಥಾನ
ಜೆಕ್ ಗಣರಾಜ್ಯದ ಜಾಕೋಬ್ ವಾಡ್ಲೆಚ್ 86.94 ಮೀಟರ್ ಎಸೆದು ಎರಡನೇ ಮತ್ತು ಜರ್ಮನಿಯ ಜೂಲಿಯನ್ ವೆಬರ್ (83.73) ಮೂರನೇ ಸ್ಥಾನ ಪಡೆದಿದ್ದಾರೆ.