‘ವಿಕ್ರಾಂತ್ ರೋಣ’ ಪೋಸ್ಟರ್ ಕಾಪಿ ಮಾಡಿದ್ರಾ ಬಾಲಿವುಡ್ ನ ‘ಭೂತ್ ಪೊಲೀಸ್’…?
ಕಿಚ್ಚ ಸುದೀಪ್ ಅಭಿನಯದಲ್ಲಿ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ಸದ್ಯ ಪೋಸ್ಟರ್ , ಟೀಸರ್ ನಿಂದಲೇ ಬಾರೀ ಚರ್ಚೆಯಲ್ಲಿದೆ.. ಅಅದ್ರಲ್ಲೂ ವಿಭಿನ್ನ ಲುಕ್ ನಲ್ಲಿ ಕಿಚ್ಚನ ದರ್ಶನವಾಗಿದ್ದು, ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ ಇರೋದು ಸ್ಪಷ್ಟವಾಗಿ ಗೊತ್ತಾಘ್ತಿದೆ..
ಈ ನಡುವೆ ‘ವಿಕ್ರಾಂತ್ ರೋಣ’ ಸಿನಿಮಾ ಡಬ್ಬಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದೀಗ, ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್ ನ್ನು ಬಾಲಿವುಡ್ ಚಿತ್ರತಂಡವೊಂದು ಕದ್ದು ಮಾಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಹೌದು .. ಮೊದಲೇ ಸೌತ್ ಇಂಡಿಯಾ ಸಿನಿಮಾಗಳನ್ನ ಕಾಪಿ ಮಾಡ್ತಿರುವ ಬಾಲಿವುಡ್ ಇದೀಗ ಕನ್ನಡದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ಕಾಪಿ ಮಾಡಿದೆ ಎನ್ನಲಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದೆ.
ಪವನ್ ಕೃಪಲಾನಿ ನಿರ್ದೇಶನದಲ್ಲಿ ತಯಾರಾಗಿರುವ ಸೈಫ್ ಅಲಿಖಾನ್ ಅಭಿನಯದ ‘ಭೂತ್ ಪೊಲೀಸ್’ ಚಿತ್ರದ ಪೋಸ್ಟರ್ಗಳು ಇತ್ತೀಚಿಗಷ್ಟೆ ರಿಲೀಸ್ ಆಗಿವೆ. ರಿಲೀಸ್ ದಿನಾಂಕ ಘೋಷಿಸಿದ ಚಿತ್ರತಂಡ ಹೊಸ ಪೋಸ್ಟರ್ಗಳನ್ನು ಅನಾವರಣಗೊಳಿಸಿತ್ತು. ಇದರಲ್ಲಿ ಯಾಮಿ ಗೌತಮ್ ಮತ್ತು ಜಾಕ್ವಲೀನ್ ಫರ್ನಾಂಡೀಸ್ ಪೋಸ್ಟರ್ ನಕಲು ಎಂದು ಹೇಳಲಾಗುತ್ತಿದೆ. ಈ ಪೋಸ್ಟರ್ಗಳು ಕನ್ನಡದ ‘ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ಗಳನ್ನು ನೆನೆಪಿಸುತ್ತಿದೆ.
ಶಿವರಾಜ್ ಕುಮಾರ್ ನಟನೆಯ 123ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್..!
ಹೌದು ಗುಹೆಯೊಂದರಲ್ಲಿ ಕಿಚ್ಚ ಸುದೀಪ್ ಬಲಗೈಯಲ್ಲಿ ಪಂಜು ಹಿಡಿದು ಎಡಗೈಯಲ್ಲಿ ಚಾಟಿ ಹಿಡಿದಿರುವ ವಿಕ್ರಾಂತ್ ಪೋಸ್ಟರ್ ಬಹಳ ತಿಂಗಳ ಹಿಂದೆಯೇ ತೆರೆಕಂಡಿತ್ತು. ಈಗ ರಿಲೀಸ್ ಆಗಿರುವ ಭೂತ್ ಪೊಲೀಸ್ ಪೋಸ್ಟರ್ನಲ್ಲಿ ಯಾಮಿ ಗೌತಮ್ ಸಹ ಬಲಗೈಯಲ್ಲಿ ಪಂಜು ಹಿಡಿದು ಗುಹೆಯಲ್ಲಿ ಒಳ ಪ್ರವೇಶಿಸುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಈ ಎರಡು ಪೋಸ್ಟರ್ಗಳಲ್ಲಿನ ಶೀರ್ಷಿಕೆ ವಿನ್ಯಾಸ, ಬಣ್ಣದಲ್ಲಿ ಸಾಮ್ಯತೆ ಇದೆ. ಹಾಗಾಗಿ, ಇದು ವಿಕ್ರಾಂತ್ ರೋಣ ಪೋಸ್ಟರ್ ನಕಲು ಎಂದು ಸುಲಭವಾಗಿ ಹೇಳಬಹುದು.
ಅದು ಅಲ್ದೇ ಪೋಸ್ಟರ್ ರಿಲೀಸ್ ಆದ ತಕ್ಷಣವೇ ಈ ಪೋಸ್ಟರ್ ವಿವಾದ ಹುಟ್ಟುಹಾಕಿತ್ತು.. ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸೈಫ್ ಅಲಿಖಾನ್ ಟ್ರೋಲಿಂಗ್ ಸ್ಟಾರ್ ಆಗಿದ್ರೂ ಹಿಂದೂಗಳು ಸೈಫ್ ವಿರುದ್ಧ ಮುಗಿಬಿದ್ದಿದ್ದರು..
ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಸನ್ನಿ
ಸೈಫ್ ಪೋಸ್ಟರ್ನಲ್ಲಿ ಹಿಂದೂ ಸಂತರ ಬಗ್ಗೆ ಅವಹೇಳನ ಮಾಡುವ ರೀತಿ ಬಳಕೆ ಮಾಡಲಾಗಿದೆ, ಇದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹದ್ದು ಎಂಬ ಆರೋಪ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೇ ಮತ್ತೊಂದು ಟೀಕೆಗೆ ಸಿನಿಮಾದ ಪೋಸ್ಟರ್ ಗುರಿಯಾಗಿದೆ.
ಅಂದ್ಹಾಗೆ ಸಿನಿಮಾ ಒಟಿಟಿಯಲ್ಲಿ ತೆರೆಕಾಣಲಿದೆ. ಹಾರರ್ ಓರಿಂಟೆಡ್ ಸಿನಿಮಾವಾಗಿರುವ ‘ಭೂತ್ ಪೊಲೀಸ್’ ಸೆಪ್ಟೆಂಬರ್ 17ಕ್ಕೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ.