ಭಾರತದ ಮೇಲಿನ ದಾಳಿಗಾಗಿ ಚೀನಾದ ಪಿಜಾ ಡೆಲಿವರಿ ಡ್ರೋಣ್ ಖರೀದಿಸಿತಾ ಪಾಕಿಸ್ತಾನ..?
ಭಾರತದ ಜೊತೆಗೆ ಪದೇ ಪದೇ ಕಾಲು ಕೆರೆದುಕೊಂಡು ಯುದ್ಧಕ್ಕೆ ಬರೋ ಪಾಕ್ ಪದೇ ಪದೇ ಮುಖಭಂಗ ಅನುಭವಿಸಿದ್ರು.. ತೃಪ್ತಿ ಆಗಿರುವಂತೆ ಕಾಣಿಸುತ್ತಿಲ್ಲ.. ಒಂದಲ್ಲಾ ಒಂದು ತಕರಾರು ತೆಗೆಯದೇ ಹೋದ್ರೆ ಸಮಾದಾನವಿಲ್ಲ,.. ಆದ್ರೆ ಆ ದೇಶದ ಆರ್ಥಿಕ ಪರಿಸ್ಥಿತಿ ಇಂದು ಯಾವ ಮಟ್ಟಕ್ಕೆ ಕುಸಿದಿದೆ ಅನ್ನೋ ವಿಚಾರವೂ ಎಲ್ರಿಗೂ ಗೊತ್ತೇ ಇದೆ..
ಕತ್ತೆಗಳನ್ನ ಹರಾಜು ಹಾಕುವ ಪರಿಸ್ಥಿತಿಗೆ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ತಲುಪಿದ್ರು ಅನ್ನೋದನ್ನ ಮರೆಯೋಹಾಕಿಲ್ಲ.. ಅಂದ್ಹಾಗೆ ಉಗ್ರರ ನೆಲೆ ಬೀಡು ಪಾಕಿಸ್ತಾನಕ್ಕೆ ಭಾರತದ ಮತ್ತೊಂದು ವೈರಿ ರಾಷ್ಟ್ರವಾಗಿ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಳ್ತಿರುವ ಚೀನಾ ಅಷ್ಟೋ ಇಷ್ಟೋ ಸಹಾಯ ಮಾಡುತ್ತಾ ಪಾಕಿಸ್ತಾನವನ್ನ ತನ್ನ ಗುಲಾಮ ದೇಶವನ್ನಾಗಿಸಿಕೊಮಡಿದೆ.. ಚೈನಾ ಏನೇ ಹೇಳುದ್ರೂ ಎದುರು ಮಾತನಾಡದೇ ಒಪ್ಪಿಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಬoದಿದೆ..
ಇದೀಗ ಭಾರತದ ಮೇಲೆ ದಾಳಿ ನಡೆಸಲು ಚೀನಾದಲ್ಲಿ ಪಿಜಾ ಡೆಲಿವರಿಗೆ ಬಳಸುವ ಡ್ರೋಣ್ ಗಳನ್ನು ಭಾರೀ ಪ್ರಮಾಣದಲ್ಲಿ ಪಾಕಿಸ್ತಾನ ಖರೀದಿಸಿದೆ ಎಂದು ಜಮ್ಮು ಕಾಶ್ಮೀರದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಭದ್ರತಾ ಪಡೆ ಅಧಿಕಾರಿಗಳು ಜಮ್ಮು ಕಾಶ್ಮೀರದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ಹಂತದ ತನಿಖೆ ವೇಳೆ ಪಾಕಿಸ್ತಾನ ಮೂಲದ ಲಷ್ಕರೆ ಇ-ತೋಯ್ಬಾ ಸಂಘಟನೆ ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ.
ಜಮ್ಮು ಕಾಶ್ಮೀರದ ವಾಯುನೆಲೆಯಲ್ಲಿ 5 ನಿಮಿಷಗಳ ಅಂತರದಲ್ಲಿ 2 ಸ್ಫೋಟಗಳು ಸಂಭವಿಸಿದ್ದು, ಇದು ಹೆಲಿಕಾಫ್ಟರ್ ಗಳನ್ನು ಗುರಿಯಾಗಿಸಿ ಡ್ರೋಣ್ ಮೂಲಕ ದಾಳಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ. ಮೊದಲ ದಾಳಿಯಲ್ಲಿ ಕಟ್ಟಡವನ್ನು ಗುರಿಯಾಗಿಸಿ ದಾಳಿ ನಡೆದರೆ, ಎರಡನೇ ದಾಳಿ ಖಾಲಿ ಮೈದಾನದಲ್ಲಿ ನಡೆದಿತ್ತು.