ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯ (Renukaswamy) ಕೊಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾಗೌಡ ಅವರ ಕೈವಾಡ ಚಾರ್ಜ್ ಶೀಟ್ ಮೂಲಕ ಬಹಿರಂಗವಾಗಿದೆ.
ಅಪಹರಣ ಹಾಗೂ ಕೊಲೆ ಎರಡರಲ್ಲೂ ಪವಿತ್ರಾಗೌಡ (Pavithra Gowda) ನೇರ ಕೈವಾಡ ಚಾರ್ಜ್ ಶೀಟ್ ನಲ್ಲಿ (Chargesheet) ಬಯಲಾಗಿದೆ. ರೇಣುಕಾಸ್ವಾಮಿ ಅಪಹರಿಸಿ ಕರೆತರುತ್ತಿದ್ದಂತೆ ಪವಿತ್ರಾಗೌಡ, ಚಪ್ಪಲಿಯಿಂದ ಥಳಿಸಿದ್ದಳು ಎನ್ನಲಾಗಿದೆ.
ನಿನ್ನ ಮುಗಿಸಲು ಕಾಯ್ತಾ ಇದ್ದೆ. ನನಗೇ ಅಶ್ಲೀಲ ಮೆಸೇಜ್ ಕಳಿಸ್ತೀಯಾ? ಬೆತ್ತಲೆ ಫೋಟೋ ಕಳಿಸಿ ಮುಜುಗರ ಮಾಡ್ತೀಯಾ? ದುಡ್ಡು ಕೊಟ್ಟು ಸಾಕ್ತೇನಿ ಅಂತೀಯಾ ಅಂತ ಹೇಳಿ ಚಪ್ಪಲಿಯಿಂದ ಹೊಡೆದಿದ್ದಾರೆ. ಆಗ ಪವಿತ್ರಾ ಕಾಲಿಗೆ ಬಿದ್ದ ರೇಣುಕಾಸ್ವಾಮಿ ತಪ್ಪಾಯಿತು ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ ಎನ್ನಲಾಗಿದೆ.
ಇವನನ್ನು ಉಳಿಸಬೇಡಿ ಕೊಂದು ಎಸೆದು ಬಿಡಿ ಎಂದು ಅಲ್ಲಿದ್ದವರಿಗೆ ಹೇಳಿದ್ದಳು ಎನ್ನಲಾಗಿದೆ. ಹೀಗಾಗಿ ಪವಿತ್ರಾ ಪ್ರಚೋದನೆಯಿಂದಲೇ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.