ಬೆಂಗಳೂರು: ಆರ್.ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್, ಬಿಜೆಪಿ ಪಕ್ಷಗಳ ಅನೇಕರು ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, `ಕುಸುಮಾ ಅವರು ತಮ್ಮ ಜೀವನ ನೆನೆಸಿಕೊಂಡು, ತಮಗಾದ ನಷ್ಟ, ನೋವುಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆದರೆ, ಮುನಿರತ್ನ ಅವರು ತಮಗೆ ಇಂತಾ ಸ್ಥಿತಿ ತಂದುಕೊಂಡನಲ್ಲಾ ಅಂತಾ ಕಣ್ಣೀರು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನನ್ನ ಉಸಿರು, ನನ್ನ ರಕ್ತ ಅಂತಾ ಹೇಳಿದ್ದ ಮುನಿರತ್ನ ಈಗ ಬಿಜೆಪಿಯಲ್ಲಿ ಮತ ಕೇಳುತ್ತಿದ್ದೇನಲ್ಲಾ ಅಂತಾ ನೆನೆಸಿಕೊಂಡು ಅತ್ತಿದ್ದಾರೆ. ಮುನಿರತ್ನ ಉತ್ತಮ ಡೈರೆಕ್ಟರ್, ಪೆÇ್ರಡ್ಯುಸರ್ ಅಲ್ವಾ ? ಜನರು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ ಕಣ್ಣೀರು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧ ಭಾಷಣ ಮಾಡಿದ್ದರು, ಈಗ ಅವರ ಪಕ್ಷ ಸೇರಿಕೊಂಡು ಚುನಾವಣೆ ಎದುರಿಸಬೇಕಾಗಿದೆಯಲ್ಲ ಅಂತಾ ಕಣ್ಣೀರು ಹಾಕಿರಬಹುದು ಎಂದು ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.
ಹಿಂದೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಿದ್ದರು, ಈಗ ಡಿ.ಕೆ ಶಿವಕುಮಾರ್ ಅವರ ಹಿಂದೆ ಯಾರೂ ಇಲ್ಲ ಅಂತಾ ಹೇಳಿದ್ದಾರೆ. ಒಟ್ಟಾರೆ ಅವರು ಪರಿಸ್ಥಿತಿಗೆ ತಕ್ಕಂತೆ ಅಭಿನಯಿಸುವ ಉತ್ತಮ ನಟ.
ಇದನ್ನೆಲ್ಲಾ ನೋಡುತ್ತಿರುವ ಜನ ದಡ್ಡರಲ್ಲ. ನಾನು ಕಣ್ಣೀರು ಹಾಕಿದರೂ ಬೇರೆಯವರು ಹಾಕಿದರೂ ಏನು ಆಗುವುದಿಲ್ಲ. ಈಗ ಕಣ್ಣೀರು ಹಾಕಿ ಪ್ರಯೋಜನ ಇಲ್ಲ ಎಂದರು.
ಇಂದು ದೇವಾಲಯಕ್ಕೆ ಹೋಗಿ ದೇವರ ಆಶೀರ್ವಾದ ಪಡೆದಿದ್ದೇನೆ, ಹಾಗೆಯೇ ಚರ್ಚ್‍ಗೆ ಭೇಟಿ ಕೊಟ್ಟು ಪಾದ್ರಿಗಳನ್ನು ಭೇಟಿ ಮಾಡಿದೆ. ನೀವು ಆಶೀರ್ವಾದ ಮಾಡಿದರೂ ತೆಗೆದುಕೊಳ್ಳುತ್ತೇನೆ ಎಂದು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ.
ನ.3ರ ನಂತರ ಧರ್ಮದ ವಿಚಾರ..
ಕಪಾಲಿ ಬೆಟ್ಟದ ವಿಚಾರವಾಗಿ ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ನ.3ರಂದು ನಡೆಯುವ ಚುನಾವಣೆ ಆಗಲಿ, ಆಮೇಲೆ ಧರ್ಮದ ವಿಚಾರವಾಗಿ ಮಾತನಾಡೋಣ’ ಎಂದರು.
ಈ ಹಿಂದೆ ಆಡಿದ ಮಾತಿಗೆ ಬದ್ಧರಾ..?
`ಮುನಿರತ್ನ ಅವರ ವಿರುದ್ಧ ಮೋದಿ ಅವರು, ಸದಾನಂದಗೌಡ, ಯಡಿಯೂರಪ್ಪ ಅವರು ಆಡಿದ ಮಾತಿಗೆ ಈಗಲೂ ಬದ್ಧರಾಗಿದ್ದಾರಾ ಇಲ್ಲವಾ ? ಎಂಬುದನ್ನು ಕೇಳಿ’ ಎಂದ ಡಿ.ಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಜಮೀರ್ ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel