ಕೊತ್ತಂಬರಿ ಮತ್ತು ಮೆಂತೆ ನಡುವೆ ವ್ಯತ್ಯಾಸವೇನು: ರಾಹುಲ್ ಗಾಂಧಿಗೆ ಸವಾಲು ಎಸೆದ ಗುಜರಾತ್ ಸಿಎಂ ರೂಪಾನಿ
ಗುಜರಾತ್, ಡಿಸೆಂಬರ್09: ರೈತರ ಪ್ರತಿಭಟನೆಯ ನಡುವೆ ಪ್ರತಿಪಕ್ಷಗಳ ನಿಲುವನ್ನು ಟೀಕಿಸುವಾಗ ಕೊತ್ತಂಬರಿ ಮತ್ತು ಮೆಂತೆ ನಡುವಿನ ವ್ಯತ್ಯಾಸವನ್ನು ಹೇಳಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ರೈತರ ಹೆಸರಿನಲ್ಲಿ ಆಂದೋಲನ ನಡೆಸಲು ಮತ್ತು ಜನರನ್ನು ದಾರಿ ತಪ್ಪಿಸಲು ಹೊರಟಿದೆ ಎಂದು ರೂಪಾನಿ ಹೇಳಿದರು.
ರಾಹುಲ್ ಗಾಂಧಿ, ನಿಮಗೆ ಸಾಧ್ಯವಾದರೆ, ಕೊತ್ತಂಬರಿ ಮತ್ತು ಮೆಂತೆ ನಡುವಿನ ವ್ಯತ್ಯಾಸವೇನು ಎಂದು ಉತ್ತರಿಸಿ. ಇಲ್ಲದಿದ್ದರೆ, ನಿಮ್ಮ ಜ್ಞಾನದ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ರೂಪಾನಿ ಹೇಳಿರುವುದಾಗಿ ವರದಿ ಹೇಳಿದೆ. ಮೆಹ್ಸಾನದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ರೂಪಾನಿ ಈ ಹೇಳಿಕೆ ನೀಡಿದ್ದಾರೆ.
ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರವನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ.
ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ಐಐಟಿ-ಕಾನ್ಪುರದ ಹಳೆಯ ವಿದ್ಯಾರ್ಥಿ
ರೈತರ ಸಮಸ್ಯೆಗಳನ್ನು ಬಗೆಹರಿಸಲು ಮೋದಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ, ಆದರೆ ರೈತರ ಹೆಸರಿನಲ್ಲಿ ರಾಜಕೀಯ ಮೈಲೇಜ್ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ರೂಪಾನಿ ಹೇಳಿದರು.
ರೈತ ಸಂಘಗಳು ಕರೆ ನೀಡಿದ ಭಾರತ್ ಬಂದ್ ಗೆ
ಕಾಂಗ್ರೆಸ್ ಬೆಂಬಲ ನೀಡಿತ್ತು . ಗುಜರಾತ್ ನಲ್ಲಿ ಮಧ್ಯಾಹ್ನದವರೆಗೆ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್ ಳನ್ನು ಸುಡುವ ಮೂಲಕ ಕೆಲವು ಸ್ಥಳಗಳಲ್ಲಿ ಹೆದ್ದಾರಿಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ರಾಜ್ಯದ ಕೆಲವು ಸ್ಥಳಗಳನ್ನು ಹೊರತುಪಡಿಸಿ, ಎಲ್ಲಾ ಮಾರುಕಟ್ಟೆಗಳು, ಅಂಗಡಿಗಳು, ಬ್ಯಾಂಕುಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು.
ಬಸ್ಸುಗಳ ಸಂಚಾರವಿದ್ದುದರಿಂದ ಪ್ರಮುಖ ನಗರಗಳಲ್ಲಿನ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಲಿಲ್ಲ. ಗುಜರಾತ್ನ ಅಹಮದಾಬಾದ್, ರಾಜ್ಕೋಟ್ ಮತ್ತು ಸೂರತ್ನಲ್ಲಿ ಬಿಆರ್ಟಿಎಸ್ (ಬಸ್ ರಾಪ್ಡ್ ಟ್ರಾನ್ಸಿಟ್ ಸಿಸ್ಟಮ್) ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಿದೆ ಎಂದು ವರದಿ ತಿಳಿಸಿದೆ.

ಬಂದ್ ಕರೆ ರಾಜ್ಯದಲ್ಲಿ ಯಾವುದೇ ದೊಡ್ಡ ಪರಿಣಾಮವನ್ನು ಬೀರಿಲ್ಲ. ಯಾವುದೇ ಹಿಂಸಾಚಾರ ಅಥವಾ ಯಾವುದೇ ಅನಗತ್ಯ ಘಟನೆಗಳ ಬಗ್ಗೆ ಯಾವುದೇ ವರದಿಗಳಿಲ್ಲ. ಬಂದ್ ಕರೆಯಿಂದ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರಲಿಲ್ಲ ಎಂದು ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336360172843749377?s=19
https://twitter.com/SaakshaTv/status/1336360541544058880?s=19








