ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ನಟಿ ಐಂದ್ರಿತಾ ರೇ ಮತ್ತು ದಿಗಂತ್ ದಂಪತಿಗೆ ಸಿಸಿಬಿಯಿಂದ ನೋಟೀಸ್ ಜಾರಿ ಮಾಡಲಾಗಿತ್ತು. ಅದರಂತೆ ಈ ಜೋಡಿ ಇಂದು ವಿಚಾರಣೆಗೆ ಹಾಜರಾಗಿದೆ. ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಕ್ಯಾಸಿನೋಗೆ ಭೇಟಿ ನೀಡುವ ವಿಡಿಯೋ ಆಧಾರದ ಮೇಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್ಗೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು ಎಂದು ಹೇಳಲಾಗ್ತಿದೆ. ಅಲ್ಲದೇ ರಾಗಿಣಿ ಜೊತೆಗೆ ಐಂದ್ರಿತಾ ಆತ್ಮೀತಯೇ ಮುಳುವಾಯ್ತಾ ಎಂಬ ಮಾತುಗಳು ಸಹ ಕೇಳಿಬರ್ತಿವೆ.
ಆದರೆ ಈ ಜೋಡಿ ಬೆಂಗಳೂರಿನಲ್ಲಿಯೇ ಇಲ್ಲ. ಸಿಸಿಬಿ ವಿಚಾರಣೆಗೆ ಹಾಜರಾಗದೇ ಎಸ್ಕೇಪ್ ಆಗ್ತಾರೆ ಎಂಬ ಮಾತುಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಇದಕ್ಕೆ ಗುಳಿ ಕೆನ್ನೆ ಬೆಡಗಿ ಐಂದ್ರಿತಾ ಸಾಮಾಜಿಕ ಜಾಲತಾಣದ ಮೂಲಕ ುತ್ತರಿಸಿದ್ದರು. ನಾವು ಇಲ್ಲೇ ಇದ್ದೇವೆ. ವಿಚಾರಣೆಗೆ ಹಾಜರಾಗುತ್ತೇವೆ. ಸಿಸಿಬಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.