ಡಿಜಿಟಲ್ ಪಾವತಿ : e-RUPIಗೆ ನಾಳೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ವಿಡಿಯೋ ಕಾನರೆನ್ಸ್ ಮೂಲಕ ನಗದುರಹಿತ ಡಿಜಿಟಲ್ ಪಾವತಿ ವ್ಯವಸ್ಥೆ e-RUPIಗೆ ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ಪೂರ್ಣ ಪ್ರಮಾಣದಲ್ಲಿ ತಲುಪಲು ಡಿಜಿಟಲ್ ಪಾವತಿ ಸೂಕ್ತ ಕ್ರಮ ಎಂದು ಹೇಳುತ್ತಾ ಬಂದಿದೆ.
ಉತ್ತಮ ಆಡಳಿತದ ದೃಷ್ಟಿಕೋನವನ್ನು ಮುಂದುವರಿಸಿಕೊಂಡು ಹೋಗಲು ಎಲೆಕ್ಟ್ರಾನಿಕ್ ವೋಚರ್ ಪರಿಕಲ್ಪನೆ ಮುಖ್ಯವಾಗುತ್ತದೆ. ಇ-ರುಪಿ ನಗದುರಹಿತ ಮತ್ತು ಸಂಪರ್ಕರಹಿತ ಡಿಜಿಟಲ್ ಪಾವತಿ ವಿಧಾನವಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಕಾರದ ಸಹಯೋಗದಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಇ-ರುಪಿಯನ್ನು ಅಭಿವೃದ್ಧಿಪಡಿಸಿದೆ.
ಇ-ರುಪಿ ಉಪಕ್ರಮವು ಸರ್ಕಾರ ಮತ್ತು ಫಲಾನುಭವಿಗಳ ನಡುವೆ ನೇರ ಸಂಪರ್ಕ ಸಾಸಲು ಮತ್ತು ಸರ್ಕಾರದ ಉದ್ದೇಶಿತ ಸೇವೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಸಹಕಾರಿಯಾಗಿದೆ.ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಟಿಬಿ ನಿರ್ಮೂಲನೆ ಕಾರ್ಯಕ್ರಮಗಳು, ಔಷಧಗಳು ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳು, ಮತ್ತು ರಸಗೊಬ್ಬರ ಸಬ್ಸಿಡಿಗಳ ಅಡಿಯಲ್ಲಿ ಪೌಷ್ಟಿಕಾಂಶದ ಬೆಂಬಲವನ್ನು ಒದಗಿಸುವ ಯೋಜನೆಗಳಡಿ ಸೇವೆಗಳನ್ನು ತಲುಪಿಸಲು ಬಳಸಬಹುದಾಗಿದೆ.
ಕೆನಡಾದಲ್ಲಿ ಕೋವಿಡ್ ನಿಯಮ ಸಡಿಲಗೊಳಿಸಿದ್ದೇ ಆದ್ರೆ 4ನೇ ಅಲೆ ಖಚಿತ..!
ಕಾರ್ಯ ವಿಧಾನ
ಡಿ-ಡಿಜಿಟಲ್ ರೀತಿಯಲ್ಲಿ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಇ-ರೂಪಿ ಸೇವೆಗಳ ಪ್ರಾಯೋಜಕರ ನಡುವೆ ಸಂಪರ್ಕ ಏರ್ಪಡಿಸಿ ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿ ಮಾಡಲಾಗಿರುವುದನ್ನು ಇದು ಖಚಿತಪಡಿಸುತ್ತದೆ.
ಇದು ಯಾವುದೇ ಮಧ್ಯವರ್ತಿಯ ಒಳಗೊಳ್ಳದೆಯೇ ಸೇವಾ ಪೂರೈಕೆದಾರರಿಗೆ ಸಕಾಲಿಕ ಪಾವತಿಯನ್ನು ನೀಡುತ್ತದೆ. ಇ-ರೂಪಿನ ಒಂದು-ಬಾರಿ ಪಾವತಿ ಕಾರ್ಯವಿಧಾನವು ಬಳಕೆದಾರರಿಗೆ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಪ್ರವೇಶವಿಲ್ಲದೆ ವೋಚರ್‍ನ್ನು ರಿಡೀಮ್ ಮಾಡಲು ಸೇವಾ ಪೂರೈಕೆದಾರರಲ್ಲಿ ಅನುಮತಿಸುತ್ತದೆ.
ಕ್ಯು ಆರ್ ಕೋಡ್ ಅಥವಾ ಎಸ್ ಎಂಎಸ್ ಗೆರೆಯಾಧಾರಿತ ಇ-ವೋಚರ್ ಫಲಾನುಭವಿಗಳ ಮೊಬೈಲ್ ಗೆ ಬರುತ್ತದೆ. ಈ ತಡೆರಹಿತ ಏಕ ಕಾಲದ ಪಾವತಿ ಕಾರ್ಯವಿಧಾನದ ಬಳಕೆದಾರರ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಇಲ್ಲದೆ ವೋಚರ್ ಅನ್ನು ರಿಡೀಮ್ ಮಾಡಲು ಸೇವೆ ಒದಗಿಸುವವರಲ್ಲಿ ಸಾಧ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.