UPI : 12 ಲಕ್ಷ ಕೋಟಿ ವಹಿವಾಟು ನಡೆಸಿ ದಾಖಲೆ ಬರೆದ UPI…
ಜನಪ್ರಿಯ ಆನ್‌ಲೈನ್ ಬ್ಯಾಂಕಿಂಗ್ ತಂತ್ರಜ್ಞಾನ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ UPI ಈಗ ಮತ್ತೊಂದು ಮಹತ್ವದ ದಾಖಲೆಯನ್ನು ಸೃಷ್ಟಿಸಿದೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ UPI ಮೂಲಕ ದಾಖಲೆಯ 12.82 ಟ್ರಿಲಿಯನ್ ಅಂದರೆ ಸುಮಾರು 12.82 ಲಕ್ಷ ಕೋಟಿ ರೂಪಾಯಿ ಮೌಲ್ಯದ 7.82 ಬಿಲಿಯನ್ ವಹಿವಾಟು ನಡೆದಿದೆ. ಈ ಮೂಲಕ ಕಳೆದ ನವೆಂಬರ್‌ನಲ್ಲಿ ದಾಖಲಾಗಿದ್ದ 11.90 ಲಕ್ಷ ಕೋಟಿ ರೂ. ಮೌಲ್ಯದ 730.9 ಕೋಟಿ ವಹಿವಾಟುಗಳ ತನ್ನದೇ ದಾಖಲೆಯನ್ನು UPI ಅಳಿಸಿಹಾಕಿದೆ.
2016 ರಿಂದ ಆರಂಭವಾಗಿರುವ UPI ಪ್ಲಾಟ್‌ಫಾರ್ಮ್‌ನಲ್ಲಿ ಈ ವರೆಗೂ ಒಟ್ಟು 782 ಕೋಟಿ ವಹಿವಾಟುಗಳು ನಡೆದಿವೆ ಎಂದು ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ.
digital payments achieve new milestone by doing 782 crore UPI transactions in December