ಇತ್ತೀಚೆಗಷ್ಟೇ ನಮ್ಮನ್ನೆಲ್ಲ ಅಗಲಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಟನೆಯ ಕೊನೆಯ ಚಿತ್ರವಾದ ‘ದಿಲ್ ಬೇಚಾರಾ’ ಈಗಾಗಲೇ ಹಲವಾರು ರೆಕಾರ್ಡ್ಗಳನ್ನು ಧೂಳಿಪಟ ಮಾಡಿದೆ. ಒಂದು ವೇಳೆ ಚಿತ್ರಮಂದಿರಗಳಲ್ಲಿ ಈ ಸಿನೆಮಾ ತೆರೆಕಂಡಿದ್ದರೆ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವುದರಲ್ಲಿ ಯಾವುದೇ ಡೌಟ್ ಇರುತ್ತಿರಲಿಲ್ಲ. ಏಕೆಂದರೆ ಸುಶಾಂತ್ ರ ದಿಲ್ ಬೇಚಾರಾ ಚಿತ್ರದ ಟ್ರೇಲರ್ ಇಲ್ಲಿಯವರೆಗೂ ವಿಶ್ವದ ಯಾವ ಚಿತ್ರವೂ ಮಾಡದ ದಾಖಲೆಯನ್ನು ಮಾಡಿದೆ. 
ಈ ಟ್ರೇಲರ್ ರಿಲೀಸ್ ಆದ 24 ಗಂಟೆಗಳಲ್ಲೇ ಬರೋಬ್ಬರಿ 23 ಮಿಲಿಯನ್ ವೀವ್ಸ್ ಆಗಿದ್ದು, 5.1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಪ್ರಸ್ತುತ 78 ಮಿಲಿಯನ್ ವೀವ್ಸ್ ಹಾಗೂ 10 ಮಿಲಿಯನ್ ಲೈಕ್ಸ್ ಗಳನ್ನು ಪಡೆದು ರೇಕಾರ್ಡ್ ಬ್ರೇಕರ್ ಎನಿಸಿಕೊಂಡಿದೆ. ಈ ಸಾಧನೆಯನ್ನು ಇಡೀ ಜಗತ್ತಿನಲ್ಲೇ ಯಾವ ಚಿತ್ರದ ಟ್ರೇಲರ್ ಸಹ ಮಾಡಿರಲಿಲ್ಲ. ಚಿತ್ರಕ್ಕೆ ಎ ಆರ್ ರೆಹಮಾನ್ ಸಾರಥ್ಯದ ಸಾಂಗ್ಸ್ ಇದ್ದು, ಕುಲ್‌ಕೆ ಜೀನೇ ಕಾ ಹಾಡು ಭಾನುವಾರವಷ್ಟೇ ಬಿಡುಗಡೆಯಾಗಿದೆ. ಈ ಹಾಡು ರಿಲೀಸ್ ಆದ ಕೇವಲ ಎರಡೇ ಗಂಟೆಯಲ್ಲಿ 5 ಲಕ್ಷ ವೀವ್ಸ್ ಪಡೆದುಕೊಂಡಿದೆ. ಇನ್ನೂ ಈಗಾಗಲೇ ಬಿಡುಗಡೆಯಾಗಿದ್ದ ಟೈಟಲ್ ಸಾಂಗ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, 55 ಮಿಲಿಯನ್ ವೀಕ್ಷಣೆ ಹಾಗೂ 5 ಮಿಲಿಯನ್ ಲೈಕ್ಸ್ ಗಳಿಸಿದೆ. ಇನ್ನೂ ದಿಲ್ ಬೇಚಾರಾ ಚಿತ್ರ ಜುಲೈ 24ರಂದು ಡಿಜಿಟಲ್ ಪ್ಲಾಟ್ ಫಾರ್ಮ್ಗೆ ಲಗ್ಗೆ ಇಡಲಿದ್ದು, ಅಭಿಮಾನಿಗಳು ಉತ್ಸುಕರಿಂದ ಕಾಯುತ್ತಿದ್ದಾರೆ.
fifaworldcup -ಕ್ರೀಡಾಪತ್ರಕರ್ತ ಬಿತ್ತಿದ್ದ ಫಿಫಾ ಬೀಜ..! ಫಿಫಾ ವಿಶ್ವಕಪ್ ಟ್ರೋಫಿಯ ಮೂಲಕ ಹೆಮ್ಮರವಾಗಿ ಬೆಳೆಸಿದ್ದ ವಕೀಲ..! ಫುಟ್ಬಾಲ್ ಕ್ರೀಡೆಯ ಇತಿಹಾಸವನ್ನೇ ಬದಲಾಯಿಸಿದ್ದ #229ರ ರೋಚಕ ಕಥೆ..!
fifa founders first meeting # 229...! ಇದು ಪ್ಯಾರಿಸ್ ನಗರದ ಐತಿಹಾಸಿಕ ರೂ ಸೇಂಟ್ - ಹೋನೋರೆ ರಸ್ತೆಯಲ್ಲಿರುವ ಹೆಸರಿಲ್ಲದ ಹಳೆಯ ಕಟ್ಟಡದ ಡೋರ್...








