ಮೊಹಮ್ಮದ್ ಯೂಸೂಪ್ ಖಾನ್ ನಿಂದ ದಿಲೀಪ್ ಕುಮಾರ್ ಆಗಿ ಬದಲಾಗಿದ್ದು ಯಾಕೆ..? ನಡೆದು ಬಂದ ಹಾದಿ
ಮುಂಬೈ: ಬಾಲಿವುಡ್ ನ ಲೆಜೆಂಡರಿ ನಟ ದಿಲೀಪ್ ಕುಮಾರ್ ಅವರು ಇಂದು ವಿಧಿವಶರಾಗಿದ್ದಾರೆ.. ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟ್ರ್ಯಾಜಿಡಿ ಕಿಂಗ್ , ಚಿಕಿತ್ಸೆ ಫಲಕಾರಿಯಾಗದೇ ತಮ್ಮ 98ನೇ ವಯಸ್ಸಿನಲ್ಲಿ ಬದುಕಿನ ಪಯಣ ಮುಗಿಸಿದ್ದಾರೆ.
ವಯೋಸಹಜ ಕಾಯಿಲೆ ಇಂದ ಬಳಲುತ್ತಿದ್ದ ನಟ ದಿಲೀಪ್ ಕುಮಾರ್ ಜೂನ್ 29ರಂದು ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಟ ಕೊನೆಯುಸಿರೆಳೆದರು.
ಇನ್ನೂ ಹಿರಿಯ ನಟನ ನಿಧನಕ್ಕೆ ಬಾಲಿವುಡ್ ಅನೇಕ ಮಂದಿ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಮಂತ್ರ ನರೇಂದ್ರ ಮೋದಿ ಅವರು ಸಹ ಅಗಲಿದ ಹಿರಿಯ ನಟನಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಡಿಸೆಂಬರ್ 11, 1922ರಲ್ಲಿ ಪೇಶಾವರದಲ್ಲಿ ಜನಿಸಿದ್ದರು. ದಿಲೀಪ್ ಕುಮಾರ್ ಅವರ ಮೂಲ ಹೆಸರು ಮೊಹಮ್ಮದ್ ಯೂಸೂಪ್ ಖಾನ್. ರಾಜ್ ಕಪೂರ್ ಅವರ ಸಮಕಾಲೀನರವರಾಗಿದ್ದರು. ಬಣ್ಣದ ಲೋಕಕ್ಕೆ ದಿಲೀಪ್ ಕುಮಾರ್ ಹೆಸರಿನಿಂದ ಎಂಟ್ರಿ ಪಡೆದುಕೊಂಡಿದ್ದರು. 22ನೇ ವಯಸ್ಸಿನಲ್ಲಿ ಬಣ್ಣ ಹೆಚ್ಚಿದ ದಿಲೀಪ್ ಕುಮಾರ್ ಅವರ ಮೊದಲ ಚಿತ್ರ ‘ಜ್ವಾರಾ ಭಾಟ’ 1944ರಲ್ಲಿ ತೆರಕಂಡಿತ್ತು.
ಮುಘಲ್-ಎ-ಅಜಮ್ , ರಾಮ್ ಔರ್ ಶ್ಯಾಮ್ , ಕೋಹಿನೂರ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಐದು ದಶಕದಲ್ಲಿ ಸುಮಾರು 60ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ.
ಆದ್ರೆ ದಿಲೀಪ್ ಕುಮಾರ್ ಅವರು ಮೊಹಮ್ಮದ್ ಯೂಸೂಪ್ ಖಾನ್ ನಿಂದ ದಿಲೀಪ್ ಕುಮಾರ್ ಆಗಿ ಬದಲಾಗಿದ್ದು ಯಾವಾಗ..? ಯಾಕೆ..?
ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗಲೇ ಮಹಮ್ಮದ್ ಯೂಸುಫ್ ಖಾನ್, ದಿಲೀಪ್ ಕುಮಾರ್ ಆಗಿ ಬದಲಾಗಿದ್ದರು. ಅಂದಹಾಗೆ ದಿಲೀಪ್ ಕುಮಾರ್ ಹೆಸರು ಬದಲಾಯಿಸಿಕೊಂಡಿದ್ದೇಕೆ. ಮುಸ್ಲಿಂ ಆಗಿದ್ದವರು ಹಿಂದೂ ಹೆಸರಿನ ಮೂಲಕ ಗುರುತಿಸಿಕೊಂಡಿದ್ದೇಕೆ ಎಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ.. ಅದಕ್ಕೆ ಉತ್ತರ ಇಲ್ಲಿದೆ.
ನಟ ದಿಲೀಪ್ ಕುಮಾರ್ ಮೂಲತಃ ಪಾಕ್ ನವರು.. ಹೌದು ಅವರು ಜನಿಸಿದ್ದು 1922 ಡಿಸೆಂಬರ್ 11ರಂದು, ಪಾಕಿಸ್ತಾನದ ಪೇಶಾವರದ ಕಿಸ್ಸಾ ಖವಾನಿ ಬಜಾರ್ ಪ್ರದೇಶದಲ್ಲಿ. ತಂದೆ ಲಾಲಾ ಗುಲಾಮ್ ಸರ್ವಾರ್ ಅಲಿ ಖಾನ್. ದೊಡ್ಡ ಭೂಮಾಲಿಕರಾಗಿದ್ದರು. ನಾಸಿಕ್ ನ ಬಾರ್ನೆಸ್ ಶಾಲೆಯಲ್ಲಿ ದಿಲೀಪ್ ಕುಮಾರ್ ಶಿಕ್ಷಣ ಮಾಡಿದರು.
ಆದ್ರೆ 1940ರಲ್ಲಿ ತಮ್ಮ ತಂದೆಯೊಂದಿಗೆ ವಾಗ್ವಾದ ನಡೆಸಿ 20 ವರ್ಷದ ವಯಸ್ಸಿನಲ್ಲಿ ದಿಲೀಪ್ ಕುಮಾರ್ ಮನೆ ಬಿಟ್ಟು ಪುಣೆಗೆ ಓಡಿಬಂದಿದ್ದರು. ಪುಣೆಗೆ ಬಂದ ದಿಲೀಪ್ ಕುಮಾರ್ ಕ್ಯಾಂಟೀನ್ ಗುತ್ತಿಗೆದಾರನ್ನು ಭೇಟಿಯಾಗಿ, ಕ್ಯಾಂಟೀನ್ ನಲ್ಲಿ ಸ್ಯಾಂಡ್ ವಿಚ್ ಸ್ಟಾಲ್ ಸ್ಥಾಪಿಸಿದ್ದರು.
1942ರಲ್ಲಿ ಡಾ. ಮಸಾನಿಯನ್ನು ಭೇಟಿಯಾದ ದಿಲೀಪ್ ಕುಮಾರ್ ನಂತರ ಮಲಾಡ್ನ ಬಾಂಬೆ ಟಾಕೀಸ್ ಗೆ ತೆರಳಿದರು.. ಅಲ್ಲಿ ಬಾಂಬೆ ಟಾಕೀಸ್ ಮಾಲಿಕರಾಗಿದ್ದ ನಟಿ ದೇವಿಕಾ ರಾಣಿಯನ್ನು ಭೇಟಿಯಾದರು. ಉರ್ದು ಭಾಷೆಯಲ್ಲಿನ ಪ್ರಾವೀಣ್ಯತೆಯಿಂದ ದಿಲೀಪ್ ಕಥೆ ಮತ್ತು ಬರವಣಿಗೆ ವಿಭಾಗದಲ್ಲಿ ಬಾಂಬೆ ಟಾಕೀಸ್ನಲ್ಲಿ ಕೆಲಸಕ್ಕೆ ಸೇರಿದರು. ತಿಂಗಳಿಗೆ 1,250 ರೂ. ಸಂಬಳ ಪಡೆಯುತ್ತಿದ್ದರು.
ಹೀಗೆ 2 ವರ್ಷಗಳ ಬಳಿಕ, ನಟಿ ದೇವಿಕಾ ರಾಣಿ, ದಿಲೀಪ್ ಕುಮಾರ್ ಎಂದು ಹೆಸರು ಬದಲಾಯಿಸುವಂತೆ ಮನವಿ ಮಾಡಿದ್ದರು.. ಅದ್ರಂತೆ ಹೆಸರು ಬದಲಾದ ನಂತರ ದಿಲೀಪ್ ಕುಮಾರ್ 1944ರಲ್ಲಿ ಜ್ವಾರ್ ಭಾಟ ಚಿತ್ರದಲ್ಲಿ ನಟಿಸಿದರು. ಪ್ರೇಕ್ಷಕರಿಗೆ ಸಂಬಂಧ ಹೊಂದಲು ಇದು ತುಂಬಾ ಸೂಕ್ತವಾದ ಹೆಸರು. ರೊಮ್ಯಾಂಟಿಕ್ ಸಿನಿಮಾಗೆ ಹೊಂದಾಣಿಕೆಯಾಗುತ್ತೆ. ದಿಲೀಪ್ ಕುಮಾರ್ ಒಳ್ಳೆಯ ಹೆಸರು ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಸೂಕ್ತವಾದ ಹೆಸರಿನ ಬಗ್ಗೆ ಯೋಚಿಸುತ್ತಿದ್ದಾಗ ಈ ಹೆಸರು ನನ್ನ ಮನಸ್ಸಿಗೆ ಮೂಡಿತು.
ನಿಮಗೆ ಹೇಗೆ ಎನಿಸುತ್ತೆ ಎಂದು ದೇವಿಕಾ ಹೇಳಿದ್ದಾಗಿ , ಹೆಸರು ಬದಲಾವಣೆಗೊಂಡಿದ್ದ ಬಗ್ಗೆ ನಟ ದಿಲೀಪ್ ಕುಮಾರ್ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಹೌದು.. “ಯೂಸುಫ್, ನಾನು ನಿಮ್ಮನ್ನು ನಟನಾಗಿ ಲಾಂಚ್ ಮಾಡಬೇಕೆಂದು ಯೋಚಿಸುತ್ತಿದ್ದೆ. ಸ್ಕ್ರೀನ್ ಹೆಸರನ್ನು ಪಡೆದುಕೊಳ್ಳುವುದು ಕೆಟ್ಟ ಆಲೋಚನೆಯಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ದೇವಿಕಾ ಹೇಳಿದ್ದ ಬಗ್ಗೆ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.








