ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಾಜಕಾರಣಿಗಳ ಜೊತೆ ಗುಂಡು ಹೊಡೆಯದವನು ಪತ್ರಕರ್ತನೇ ಅಲ್ಲ: ಸಿಎಂ ಗುಂಡು ಪಾರ್ಟಿ ವಿವಾದಕ್ಕೆ ದಿನೇಶ್ ಅಮಿನ್ ಮಟ್ಟು ನೀಡಿದ್ರು ಸಮರ್ಥನೆ

Shwetha by Shwetha
March 10, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಪತ್ರಕರ್ತರಿಗಾಗಿ ಆಯೋಜಿಸಿದ್ದರು ಎನ್ನಲಾದ ‘ಬಜೆಟ್ ಪೂರ್ವ ಗುಂಡು ಪಾರ್ಟಿ’ ರಾಜ್ಯ ರಾಜಕಾರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿವಾದದ ಕುರಿತು ಇದೀಗ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಸ್ಫೋಟಕ ಪ್ರತಿಕ್ರಿಯೆ ನೀಡಿದ್ದು, ಇಂತಹ ಪಾರ್ಟಿಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಪತ್ರಕರ್ತರಿಗೆ ಸತ್ಯ ಸಿಗುವುದೇ ಪಾರ್ಟಿಗಳಲ್ಲಿ

Related posts

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

March 10, 2026
ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 10, 2026

ರಾಜಕಾರಣಿಗಳ ಮತ್ತು ಪತ್ರಕರ್ತರ ನಡುವಿನ ಈ ರೀತಿಯ ಪಾರ್ಟಿಗಳ ನಂಟು ಇಂದಿನದಲ್ಲ, ಇದು ಎರಡೂ ವೃತ್ತಿಗಳು ಆರಂಭವಾದ ದಿನದಿಂದಲೂ ನಡೆದುಕೊಂಡು ಬಂದಿದೆ. ಕುಡಿಯುವ ಅಭ್ಯಾಸ ಇರುವ ಯಾವುದೇ ಕಾರ್ಯನಿರತ ಪತ್ರಕರ್ತ ತಾನು ರಾಜಕಾರಣಿಗಳ ಜೊತೆ ಗುಂಡು ಹಾಕಿಲ್ಲ ಎಂದರೆ ಆತ ಪತ್ರಕರ್ತನೇ ಅಲ್ಲ ಎಂದು ಮಟ್ಟು ಖಡಕ್ ಆಗಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಗಳಲ್ಲಿ ಕೇವಲ ಅಧಿಕೃತ ಸುದ್ದಿಗಳು
ಮಾತ್ರ ಸಿಗುತ್ತವೆ. ಆದರೆ ಸುದ್ದಿಯ ಹಿಂದಿನ ಅಸಲಿ ಸತ್ಯಗಳು, ಒಳಮರ್ಮಗಳು ಹೊರಬೀಳುವುದು ಇಂತಹ ಊಟ, ತಿಂಡಿ ಹಾಗೂ ಮದ್ಯದ ಪಾರ್ಟಿಗಳಲ್ಲಿಯೇ. ಮದ್ಯ ಸೇವಿಸಿದಾಗ ಮನುಷ್ಯ ಸ್ವಲ್ಪ ಭಾವುಕ ಹಾಗೂ ಪ್ರಾಮಾಣಿಕನಾಗುತ್ತಾನೆ. ಆ ಸಮಯದಲ್ಲಿ ಆತನಿಂದ ಹೊರಬೀಳುವ ಹಳೆಯ ನೆನಪುಗಳು ಮತ್ತು ಸತ್ಯ ಸಂಗತಿಗಳು ಕಸುಬುದಾರ ವರದಿಗಾರನಿಗೆ ಅತ್ಯಮೂಲ್ಯ ಮಾಹಿತಿಯಾಗಿರುತ್ತವೆ. ಕೇವಲ ಚಹಾ ಅಥವಾ ನಿಂಬೆಹಣ್ಣಿನ ರಸ ಹಿಡಿದುಕೊಂಡು ಇಂತಹ ಆಳವಾದ ವಿಷಯಗಳನ್ನು ಕಲೆಹಾಕಲು ಸಾಧ್ಯವಿಲ್ಲ ಎಂದು ಅವರು ತಮ್ಮ ವೃತ್ತಿಜೀವನದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಇದು ಸಿದ್ದರಾಮಯ್ಯನವರಿಂದ ಶುರುವಾದದ್ದಲ್ಲ

ಗುಂಡು ಪಾರ್ಟಿ ಸಂಸ್ಕೃತಿ ಸಿದ್ದರಾಮಯ್ಯನವರಿಂದ ಆರಂಭವಾಗಿಲ್ಲ ಎಂದು ಇತಿಹಾಸವನ್ನು ಕೆದಕಿರುವ ಮಟ್ಟು, ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಕೂಡ ಹಿರಿಯ ಪತ್ರಕರ್ತರನ್ನು ಕರೆದು ದುಬಾರಿ ಮದ್ಯದೊಂದಿಗೆ ಊಟ ಮಾಡಿಸಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರು ದೆಹಲಿಯಲ್ಲಿ ಪತ್ರಕರ್ತರಿಗೆ ಗುಂಡು ಪಾರ್ಟಿ ಆಯೋಜಿಸುತ್ತಿದ್ದರಾದರೂ, ತಾವು ಮಾತ್ರ ನಿಂಬೆಹಣ್ಣಿನ ರಸ ಹಿಡಿದು ಕೂರುತ್ತಿದ್ದರು ಎಂಬ ಸ್ವಾರಸ್ಯಕರ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯನವರಿಗೆ ಕುಡಿತದ ವ್ಯಾಮೋಹವಿಲ್ಲ

ತಾವು ನೋಡಿದಂತೆ ಸಿದ್ದರಾಮಯ್ಯನವರಿಗೆ ಮದ್ಯದ ಬಗ್ಗೆ ಅತಿಯಾದ ವ್ಯಾಮೋಹವಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ಕಾಲದಲ್ಲಿ ಅವರು ಮದ್ಯಸೇವನೆ ಮಾಡುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕುಡಿತದ ಬಗ್ಗೆ ಅವರಲ್ಲಿದ್ದ ಮಡಿವಂತಿಕೆ ಕಡಿಮೆಯಾಗಿದ್ದು, ಬಜೆಟ್ ಪೂರ್ವದ ಇಂತಹ ಪಾರ್ಟಿಗಳಲ್ಲಿ ಸಣ್ಣ ಪೆಗ್ ಹಾಕುತ್ತಾರೆ. ನಂತರ ಎಲ್ಲರನ್ನೂ ಮಾತನಾಡಿಸಿ ತೆರಳುತ್ತಾರೆ. ಅಷ್ಟಕ್ಕೂ ಇಂತಹ ಪಾರ್ಟಿಗಳಿಗೆ ಸರ್ಕಾರದ ಬೊಕ್ಕಸದಿಂದ ಹಣ ಹೋಗುವುದಿಲ್ಲ, ಬದಲಾಗಿ ಯಾವುದಾದರೂ ಸಚಿವರು ಬಿಲ್ ಪಾವತಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫೋಟೋ ಹರಿಬಿಟ್ಟ ಪತ್ರಕರ್ತನ ನಡವಳಿಕೆಗೆ ತೀವ್ರ ಖಂಡನೆ

ತಮ್ಮ ಅಧಿಕಾರಾವಧಿಯಲ್ಲಿ ಇಂತಹ ಪಾರ್ಟಿಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಗ್ಲಾಸ್ ಗಳು ಕ್ಯಾಮೆರಾ ಕಣ್ಣಿಗೆ ಬೀಳದಂತೆ ತಾವು ಮತ್ತು ಪ್ರಭಾಕರ್ ಅವರು ಎಚ್ಚರಿಕೆ ವಹಿಸುತ್ತಿದ್ದೆವು. ಮುಖ್ಯಮಂತ್ರಿಗಳು ಪಾರ್ಟಿ ಆಯೋಜಿಸುವುದು ಯಾವುದೇ ಅಪರಾಧವಲ್ಲ. ಆದರೆ, ಅಲ್ಲಿ ಭಾಗವಹಿಸಿದ್ದ ಪತ್ರಕರ್ತನೊಬ್ಬ ಆ ಆಪ್ತ ಕ್ಷಣಗಳ ಫೋಟೋ ತೆಗೆದು ಬೇಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಅಪರಾಧವಲ್ಲದಿದ್ದರೂ, ಅದು ಖಂಡಿತವಾಗಿಯೂ ಸಜ್ಜನಿಕೆಯ ನಡವಳಿಕೆಯಲ್ಲ ಎಂದು ದಿನೇಶ್ ಅಮಿನ್ ಮಟ್ಟು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ShareTweetSendShare
Join us on:

Related Posts

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

ಪ್ರಾದೇಶಿಕ ಪಕ್ಷ ಸ್ಥಾಪನೆ ಸುಳಿವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಣೆ

by Shwetha
March 10, 2026
0

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವಂತಹ ಮಹತ್ವದ ಘೋಷಣೆ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷವನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 10, 2026
0

ದಿನ ಭವಿಷ್ಯ: 10-03-2026 * ಮೇಷ ರಾಶಿ ಇಂದು ನಿಮ್ಮ ಕುಂಡಲಿಯಲ್ಲಿ ಸೂರ್ಯನ ಪ್ರಭಾವ ಉತ್ತಮವಾಗಿರುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ನೀವು ತೆಗೆದುಕೊಳ್ಳುವ ದಿಟ್ಟ...

guru raghavendra

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.

by admin
March 9, 2026
0

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ. ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್‌ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಬೃಂದಾವನ...

team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

by admin
March 9, 2026
0

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ...

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

by Shwetha
March 9, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯಿಂದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಬರೋಬ್ಬರಿ 1,069 ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram