30% Commission: ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು : ರಾಜಶೇಖರಾನಂದ ಸ್ವಾಮೀಜಿ

1 min read
Rajshekharnand Swamiji Saaksha Tv

ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು : ರಾಜಶೇಖರಾನಂದ ಸ್ವಾಮೀಜಿ

ಉಡುಪಿ: ಸರಕಾರ ಮಠ ಮಾನ್ಯಗಳಿಂದಲೂ 30% ಕಮಿಷನ್  ಪಡೆಯುತ್ತಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪ‌ ಅಪ್ಪಟ ಸುಳ್ಳು ಎಂದು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಿಂಗಾಲೇಶ್ವರ ಸ್ವಾಮಿಜಿ ದಾಖಲೆಗಳ‌ ಸಹಿತ ಸಾಬೀತು ಪಡಿಸಿ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬೇಡಿ. ಅನಗತ್ಯವಾಗಿ ಮಠ ಮಾನ್ಯಗಳಿಂದಲೂ ಕಮಿಷನ್ ಆರೋಪ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೇ ನಮ್ಮ ಮಠಕ್ಕೂ 50 ಲಕ್ಷ ರೂಪಾಯಿ ಬಂದಿದೆ. ನಾವ್ಯಾರು ಒಂದು ನಯಾಪೈಸೆ ಕಮಿಷನ್ ನೀಡಿಲ್ಲ. ನಾವು ಯಾವುದೇ ಹಂತದಲ್ಲಿ ಸರ್ಕಾರದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟಿಲ್ಲ. ಎಲ್ಲೋ ಆದ ಇಂದು ಘಟನೆ ನಮ್ಮಲ್ಲೂ ಆಗಿದೆ ಎನ್ನುವುದು ಸರಿಯಲ್ಲ.ಇಂತಹ ಸುಳ್ಳು ಸಂದೇಶ ಹಬ್ಬಿಸಬಾರದು ಎಂದರು.

ಇನ್ನೂ ನನಗೆ ಗೊತ್ತಿರುವ ಪ್ರಕಾರ ಯಾವುದೇ ಶ್ರೀಗಳು ಕಮಿಷನ್ ಕೊಟ್ಟಿಲ್ಲ. ಗಾಳಿಯಲ್ಲಿ ಗುಂಡು ಹಾರಿಸಿದರೆ ಸರಿಯಲ್ಲ‌. ದಾಖಲೆ ಕೊಡಿ ಎಂದು ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd