Dinner : ಊಟದ ವಿಚಾರಕ್ಕೆ ತಾಯಿ ಮಗನ ನಡುವೆ ಗಲಾಟೆ – ಇಬ್ಬರೂ ಆತ್ಮಹತ್ಯೆಗೆ ಶರಣು
ರಾಮನಗರ : ಊಟದ ವಿಚಾರಕ್ಕೆ ತಾಯಿ ಮಗನ ನಡುವೆ ನಡೆದ ಗಲಾಟೆ ಕೊನೆಗೆ ಇಬ್ಬರ ಸಾವಿನಲ್ಲಿ ಅಂತ್ಯವಾಗಿರುವಂತಹ ದಾರುಣ ಘಟನೆ ರಾಮನಗರದಲ್ಲಿ ನಡೆದಿದೆ..
ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. 50 ವರ್ಷದ ವಿಜಯಲಕ್ಷ್ಮಿ , 25 ವರ್ಷದ ಹರ್ಷ ಮೃತರಾಗಿದ್ದಾರೆ.
ತಾಯಿ ವಿಜಯಲಕ್ಷ್ಮಿ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದಾನೆ. ಮಗನ ಮಾತುಗಳಿಂದ ಮನನೊಂದ ವಿಜಯಲಕ್ಷ್ಮಿ ಅವರು ಮನೆಯ ಬಳಿ ಸಂಪಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಯಿ ಮೃತಪಟ್ಟ ನಂತರ ತೀವ್ರ ಮನನೊಂದ ಹರ್ಷ ತನ್ನಿಂದಲೇ ತನ್ನ ತಾಯಿ ಮೃತಪಟ್ಟಿದ್ದು ಎಂದು ಕೊರಗಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಐಜೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Dinner , mother and son fight for dinner and later commits suicide