Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….
ಭಾರತದ ಅಗ್ರ ಮತ್ತು ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಡೋಪಿಂಗ್ ಟೆಸ್ಟ್ ನಲ್ಲಿ ನಿಷೇಧಿತ ವಸ್ತು ಸೇವಿಸಿರುವದು ಸಾಬೀತಾದ ಹಿನ್ನಲೆಯಲ್ಲಿ ಅಮಾನತಿಗೆ ಒಳಗಾಗಿದ್ದಾರೆ. 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (FIG) ನಿಷೇಧ ಹೇರಿದೆ.
2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಡೋಪಿಂಗ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೇ ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಸೇರಿಸಿರುವ ಹಿಜನಮೈನ್ (S3 Beta-2 Agonists) ಅಂಶ ಇರುವುದು ಪತ್ತೆಯಾಗಿದೆ. ವರದಿ ಪಾಸಿಟೀವ್ ಬಂದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ (FIG) ದೀಪಾ ಕರ್ಮಾಕರ್‌ಗೆ 21 ತಿಂಗಳ ಕಾಲ ಅಮಾನತು ಶಿಕ್ಷೆ ವಿಧಿಸಿದೆ.
2021 ರ ಅಕ್ಟೋಬರ್‌ನಿಂದ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ದೀಪಾ ಕರ್ಮಾಕರ್‌ಗೆ ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಅವಧಿ ಪೂರೈಸಿದ್ದಾರೆ. 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಈ ಬಗ್ಗೆ ಸ್ವತಃ ದೀಪಾ ಕರ್ಮಾಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನನ್ನ ಕ್ರೀಡಾ ಬದುಕಿನಲ್ಲಿ ನಡೆದ ದೊಡ್ಡ ಹೋರಾಟ ಇದೀಗ ಅಂತ್ಯ ಕಂಡಿದೆ. ಫಲಿತಾಂಶ ಪಾಸಿಟಿವ್ ಬಂದಿದೆ. ಫಲಿತಾಂಶದ ಬಗ್ಗೆ ಯಾವುದೇ ಅನುಮಾನವಿಲ್ಲ. ನನಗೆ ಅರಿವಿಲ್ಲದೆ ನಿಷೇಧಿತ ಪದಾರ್ಥ ಸೇವಿಸಿರಬಹುದು. ಆದರೆ ಭಾರತದ ಕ್ರೀಡಾ ಪ್ರಾಧಿಕಾರದ ಹೆಜ್ಜೆ ಸಂತಸ ತಂದಿದೆ. ಮುಂದಿನ ಜುಲೈನಲ್ಲಿ ಮತ್ತೆ ಜಿಮ್ಯಾಸ್ಟಿಕ್ ಅಂಕಣಕ್ಕೆ ಕಾಲಿಡಲು ಹಾತೊರೆಯುತ್ತಿದ್ದೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
Dipa Karmakar: Positive in doping test – Dipa Karmakar banned for 21 months….