ಉಡುಪಿ ಮತ್ತು ದ. ಕ. ಜಿಲ್ಲೆಗಳ ಜನರಿಗೆ ದಿಲ್ಲಿ ಇನ್ನು ಬಲು ದೂರ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರು ರಾಷ್ಟ್ರ ರಾಜಧಾನಿಯನ್ನು ತಲುಪಲು ನೇರ ವಿಮಾನ ಸೇವೆ ಅನುಕೂಲದಿಂದ ವಂಚಿತರಾಗಿದ್ದಾರೆ. ಅವರು ಈಗ ನವದೆಹಲಿಗೆ ವಿಮಾನ ಹಿಡಿಯಲು ಮುಂಬೈ ಅಥವಾ ಬೆಂಗಳೂರಿಗೆ ತೆರಳಬೇಕಾಗಿದೆ.
ಇಂಡಿಗೊ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸೇವೆಯನ್ನು ಕಳೆದ ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿದೆ.

ಸ್ಪೈಸ್ ಜೆಟ್ ತನ್ನ ನವದೆಹಲಿ ವಿಮಾನವನ್ನು ಸ್ವಲ್ಪ ಸಮಯದ ಹಿಂದೆ ಸ್ಥಗಿತಗೊಳಿಸಿತ್ತು.
ಲಾಕ್ ಡೌನ್ ನಂತರ ಆರಂಭಗೊಂಡಿದ್ದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸೇವೆ ಪ್ರಯಾಣಿಕರ ಕೊರತೆಯ ಕಾರಣದಿಂದಾಗಿ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿತ್ತು. ನಂತರ, ಪ್ರಯಾಣಿಕರ ಬೇಡಿಕೆ ಮೇರೆಗೆ ಮತ್ತೆ ಸೇವೆಗಳು ಪ್ರಾರಂಭವಾಗಿತ್ತು. ಹಿಂದೆ, ಬೆಂಗಳೂರು ಮೂಲಕ ನವದೆಹಲಿಗೆ ಮಧ್ಯಾಹ್ನವೂ ವಿಮಾನ ಲಭ್ಯವಿತ್ತು.

ಇಂಡಿಗೊ ರಾತ್ರಿಯ ಬದಲು ಹಗಲು ಸಮಯದಲ್ಲಿ ಸಂಚರಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಬಹುದಯ ಎಂದು ಪ್ರಯಾಣಿಕರ ಅಭಿಪ್ರಾಯ. ಪ್ರಯಾಣಿಕರ ಕೊರತೆಯೊಂದಿಗೆ ಕೊರೊನಾವೈರಸ್ ಸೋಂಕಿನ ಸಮಸ್ಯೆಯಿಂದಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೊ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನ ಜೊತೆಗೆ 2 ಲವಂಗ ಸೇವಿಸುವುದರ ಆರೋಗ್ಯ ಪ್ರಯೋಜನಗಳು#healthtips #Saakshatv #cloves https://t.co/zhOlMmGq64
— Saaksha TV (@SaakshaTv) April 8, 2021
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಏಕೆ ದೇವತೆಗಳಿಗೆ ಅರ್ಪಿಸುವುದಿಲ್ಲ ?#onion #garlic #god https://t.co/Gn1XSs80Eg
— Saaksha TV (@SaakshaTv) April 8, 2021
ಮಾವಿನಕಾಯಿಯ ಜ್ಯೂಸ್#Saakshatv #cookingrecipe #RawMango https://t.co/TjPjQ0fVzh
— Saaksha TV (@SaakshaTv) April 8, 2021
ಆವತೀಯತೆ:#Saakshatv #vishwasbharadwaj #ಆವತೀಯತೆ https://t.co/iYwrmxVGZg
— Saaksha TV (@SaakshaTv) April 11, 2021
#Directflight #NewDelhi #Mangaluru








