ಉಡುಪಿ ಮತ್ತು ದ. ಕ. ಜಿಲ್ಲೆಗಳ ಜನರಿಗೆ ದಿಲ್ಲಿ ಇನ್ನು ಬಲು ದೂರ

1 min read
Direct flight New Delhi Mangaluru

ಉಡುಪಿ ಮತ್ತು ದ. ಕ. ಜಿಲ್ಲೆಗಳ ಜನರಿಗೆ ದಿಲ್ಲಿ ಇನ್ನು ಬಲು ದೂರ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನರು ರಾಷ್ಟ್ರ ರಾಜಧಾನಿಯನ್ನು ತಲುಪಲು ನೇರ ವಿಮಾನ ಸೇವೆ ಅನುಕೂಲದಿಂದ ವಂಚಿತರಾಗಿದ್ದಾರೆ. ಅವರು ಈಗ ನವದೆಹಲಿಗೆ ವಿಮಾನ ಹಿಡಿಯಲು ಮುಂಬೈ ಅಥವಾ ಬೆಂಗಳೂರಿಗೆ ತೆರಳಬೇಕಾಗಿದೆ.

ಇಂಡಿಗೊ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸೇವೆಯನ್ನು ಕಳೆದ ಕೆಲವು ದಿನಗಳಿಂದ ಸ್ಥಗಿತಗೊಳಿಸಲಾಗಿದೆ.
Direct flight New Delhi Mangaluru
ಸ್ಪೈಸ್ ಜೆಟ್ ತನ್ನ ನವದೆಹಲಿ ವಿಮಾನವನ್ನು ಸ್ವಲ್ಪ ಸಮಯದ ಹಿಂದೆ ಸ್ಥಗಿತಗೊಳಿಸಿತ್ತು.

ಲಾಕ್ ಡೌನ್ ನಂತರ ಆರಂಭಗೊಂಡಿದ್ದ ಮಂಗಳೂರು-ಹೊಸದಿಲ್ಲಿ ನೇರ ವಿಮಾನ ಸೇವೆ ಪ್ರಯಾಣಿಕರ ಕೊರತೆಯ ಕಾರಣದಿಂದಾಗಿ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿತ್ತು. ನಂತರ, ಪ್ರಯಾಣಿಕರ ಬೇಡಿಕೆ ಮೇರೆಗೆ ಮತ್ತೆ ಸೇವೆಗಳು ಪ್ರಾರಂಭವಾಗಿತ್ತು. ಹಿಂದೆ, ಬೆಂಗಳೂರು ಮೂಲಕ ನವದೆಹಲಿಗೆ ಮಧ್ಯಾಹ್ನವೂ ವಿಮಾನ ಲಭ್ಯವಿತ್ತು.
Direct flight New Delhi Mangaluru

ಇಂಡಿಗೊ ರಾತ್ರಿಯ ಬದಲು ಹಗಲು ಸಮಯದಲ್ಲಿ ಸಂಚರಿಸಿದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಬಹುದಯ ಎಂದು ಪ್ರಯಾಣಿಕರ ಅಭಿಪ್ರಾಯ. ಪ್ರಯಾಣಿಕರ ಕೊರತೆಯೊಂದಿಗೆ ಕೊರೊನಾವೈರಸ್ ಸೋಂಕಿನ ಸಮಸ್ಯೆಯಿಂದಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಂಡಿಗೊ ಅಧಿಕಾರಿಗಳು ತಿಳಿಸಿದ್ದಾರೆ.

#Directflight #NewDelhi #Mangaluru

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd