ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿರುವ ಕೃಷ್ಣ ಅಂಡ್ ಹಿಸ್ ಲೀಲಾ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರ ನೋಡಿದವರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಸಿನಿಮಾದ ಕೆಲ ದೃಶ್ಯಗಳು ಸಾಕಷ್ಟು ವಿವಾದವನ್ನು ಸೃಷ್ಠಿಸಿವೆ. ಅಲ್ಲದೇ ಈ ಚಿತ್ರ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತೆ ಇದೆ ಎಂದು ಆರೋಪಿಸಲಾಗುತ್ತಿದೆ.
ಇದರ ಮಧ್ಯೆ ಇದೀಗ ಕೃಷ್ಣ ಅಂಡ್ ಹಿಸ್ ಲೀಲಾ ಸಿನಿಮಾದ ನಿರ್ದೇಶಕ ರವಿಕಾಂತ್ ಪೆರೆಪು ಹಾಗೂ ನಾಯಕ ಸಿಧು ಜೊನ್ನಲಗದ್ದ ನಡುವಿನ ಲಿಪ್ ಲಾಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ವಾರದಿಂದ ಈ ಫೋಟೋ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದ್ದು, ಭಾರಿ ಟೀಕೆಗೆ ಒಳಗಾಗಿದೆ. 
ನೀವಿಬ್ಬರೂ ಸಲಿಂಗ ಕಾಮಿಗಳೇ..? ಜಾಲತಾಣದಲ್ಲಿ ಇಂತಹ ಫೋಟೊ ಹಾಕುವ ಮುನ್ನ ಸಾಮಾಜಿಕ ಬದ್ಧತೆಯ ಬಗ್ಗೆ ಯೋಚಿಸಬೇಕಲ್ಲವೇ..? ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದೀಗ ಈ ಫೋಟೋ ಬಗ್ಗೆ ನಿರ್ದೇಶಕ ರವಿಕಾಂತ್ ಸ್ಪಷ್ಟೀಕರಣ ನೀಡಿದ್ದಾರೆ.
‘ಇದು ಪಬ್ಲಿಸಿಟಿಗಾಗಿ ಮಾಡಿದ ಫೋಟೊವಲ್ಲ. ಮೂರು ವರ್ಷಗಳ ಕಠಿಣ ಶ್ರಮ ಕೊನೆಗೂ ಹೊರಬರುತ್ತಿರುವುದರ ಸಂಭ್ರಮವಷ್ಟೇ. ಇಷ್ಟ ಸಮಯ ಕಷ್ಟಪಟ್ಟಿದ್ದ ಇಬ್ಬರಿಗೂ ಭಾವುಕ ಸಮಯವಾಗಿತ್ತು. ಆಗ ಖುಷಿಯ ನಡುವೆ ಈರೀತಿ ಚುಂಬಿಸಿದ್ದು. ಇದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ರವಿಕಾಂತ್.








