director prem
ಪ್ರೇಮ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಪ್ರೈಸ್ : “ಐ ಆಮ್ ಕಲ್ಕಿ” ಗೆ ನಾಯಕ ಪ್ರೇಮ್..!
ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಪ್ರೇಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಬರ್ತ್ ಡೇ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದ್ರೆ ಪ್ರೇಮ್ ಅವರು ” ಐ ಆಮ್ ಕಲ್ಕಿ” ಚಿತ್ರದಲ್ಲಿ ನಾಯಕನಾಗಿ ಮಿಂಚಲಿದ್ದಾರೆ. ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟರ್ ಸಹ ರಿಲೀಸ್ ಆಗಿದೆ. ಈ ಪ್ರಾಜೆಕ್ಟ್ ಕುರಿತಂತೆ ಈಗಾಗಲೇ ಇಬ್ಬರು ಭೇಟಿ ಮಾಡಿದ್ದು, ಪೂರ್ವ ತಯಾರಿ ನಡೆಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ.
ಇನ್ನೂ ಈ ಚಿತ್ರ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ‘ಆನೆ ಪಟಾಕಿ’ ಚಿತ್ರ ಮಾಡಿದ್ದ ಸುರೇಶ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ತಮಿಳಿನ ಸ್ಟಾರ್ ನಟರೊಬ್ಬರು ಈ ಚಿತ್ರದಲ್ಲಿ ಇರಲಿದ್ದಾರೆ ಎಂದು ಸುಳಿವು ಸಿಕ್ಕಿದೆ. ಆದರೆ, ಯಾರು ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಉಳಿದಿದೆ. ಸದ್ಯ “ಏಕ್ ಲವ್ ಯಾ” ಚಿತ್ರದಲ್ಲಿ ಪ್ರೇಮ್ ಅವರು ಬ್ಯುಸಿಯಾಗಿದ್ದಾರೆ. ಐ ಯಾಮ್ ಕಲ್ಕಿ ಸಿನಿಮಾ ನವೆಂಬರ್ ತಿಂಗಳಿನಲ್ಲಿ ಶುರುವಾಗುವ ಸಾಧ್ಯತೆ ಇದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ದರೆ, ಜೋಗಿ ಪ್ರೇಮ್ ‘ಕಲಿ’ ಎಂಬ ಸಿನಿಮಾ ಮಾಡಬೇಕಿತ್ತು. ಸುದೀಪ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಆದರೆ, ಆ ಪ್ರಾಜೆಕ್ಟ್ ಹಾಗೆಯೇ ಮೂಲೆ ಸೇರಿತ್ತು. ಇದಾದ ನಂತರ ಅದೇ ತೆರಗಪ್ಪಳಿಸಿದ ಈ ಕಾಂಬಿನೇಷನ್ ನ ಸಿನಿಮಾ ದಿ ವಿಲ್ಲನ್. ಸದ್ಯ ಕಲ್ಕಿ ಸಿನಿಮಾ ಲಾಕ್ ಡೌನ್ ಗೂ ಮುನ್ನವೇ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದಾಗಿ ಅದರ ಸುದ್ದಿಯೇ ಇಲ್ಲದಂತಾಗಿತ್ತು. ಇದೀಗ ಧಿಢೀರನೇ ಸಿನಿಮಾ ಅನವನ್ಸ್ ಆಗಿರೋದು ಅಭಿಮಾನಿಗಳಿಗೆ ಸಪ್ರ್ರೈಸ್ ಸಿಕ್ಕಿದೆ.
director prem