ಭೈರತಿ ರಣಗಲ್ ಸಿನಿಮಾ ನೋಡಿದ ರುಕ್ಮಿಣಿ ವಸಂತ್ ( Rukmini Vasanth ) ಅಭಿಮಾನಿಗಳು ತೀವ್ರ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. “ಮತ್ತೆ ಅದೇನಾ?” ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಇದಕ್ಕೆ ಕಾರಣ, ರುಕ್ಮಿಣಿ ನಟಿಸಿರುವ ಬಹುತೇಕ ಸಿನಿಮಾಗಳಲ್ಲಿ ಆಕೆಯ ಪಾತ್ರವು ದುಃಖದ ಅಂತ್ಯವನ್ನು ಕಾಣುತ್ತಿದೆ.
ಇತ್ತೀಚಿನ ರಣಗಲ್ ಚಿತ್ರದಲ್ಲೂ, ವೈಶಾಲಿಯ ಪ್ರೀತಿ ಯಶಸ್ವಿಯಾಗದ ಕಾರಣ ಅಭಿಮಾನಿಗಳ ಹೃದಯಕ್ಕೆ ನೋವಾಗಿದೆ. “ನಮ್ಮ ರುಕ್ಕು ಯಾರಿಗೂ ಸಿಗೋದಿಲ್ಲವಾ? ಇವಳು ಮಾಯಾ ಜಿಂಕೆನಾ?” ಎಂಬಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬೇಸರದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಅಭಿಮಾನಿಗಳ ಈ ಬೇಸರವನ್ನು ಪ್ರೀತಿಯಿಂದ ಸ್ವೀಕರಿಸಿರುವ ರುಕ್ಮಿಣಿ, ಮುಂದಿನ ಚಿತ್ರಗಳಲ್ಲಿ ಹೊಸತೇನಾದರೂ ತರುವ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.