ನಿಗೂಢತೆಗೆ ಕಾರಣವಾಗಿದೆ ದಿಶಾ ಸಾಲಿಯನ್
ಮರಣದ ನಂತರ ಸಕ್ರಿಯವಾಗಿದ್ದ ಅವರ ಫೋನ್ !
ಮುಂಬೈ, ಅಗಸ್ಟ್24: ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ಫೋನ್ ಅನ್ನು ಜೂನ್ 9 ಮತ್ತು ಜೂನ್ 17 ರ ನಡುವೆ ಯಾರೋ ಬಳಸಿದ್ದರು ಎಂದು ಹೇಳಲಾಗಿದೆ. ಅವರು ಜೂನ್ 8, 2020 ರಂದು ನಿಧನರಾಗಿದ್ದರು ಮತ್ತು ಅದೇ ದಿನ ರಿಯಾ ಚಕ್ರವರ್ತಿ, ಸುಶಾಂತ್ ಅವರ ಮನೆಯಿಂದ ಹೊರಬಂದಿದ್ದರು.
ವರದಿಗಳ ಪ್ರಕಾರ, ದಿಶಾ ಸಾಲಿಯನ್ ಫೋನ್ ಜೂನ್ 9, ಜೂನ್ 10, ಜೂನ್ 15 ರಂದು ಮತ್ತು ಕೊನೆಯದಾಗಿ ಜೂನ್ 17 ರಂದು ಇಂಟರ್ನೆಟ್ ಪ್ರವೇಶಕ್ಕಾಗಿ ಬಳಸಲ್ಪಟ್ಟಿದೆ. ಜೊತೆಗೆ ಫೋನ್‌ನಿಂದ ಕೆಲವು ಕರೆಗಳನ್ನು ಸಹ ಮಾಡಲಾಗಿದೆ.
ಆಕೆಯ ಫೋನ್ ಮುಂಬೈ ಪೊಲೀಸರ ಬಳಿ ಅಥವಾ ಅವರ ಕುಟುಂಬದವರ ಬಳಿ ಇರಲಿಲ್ಲ ಎಂದು ವರದಿಯಾಗಿದೆ.
ಸಿಬಿಐ ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದೆ.