ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence Day) ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡುವ ವಿಶಿಷ್ಟ ಸೇವಾ ಪದಕ (Distinguished Service Medal) ಹಾಗೂ ಸಾರ್ಥಕ ಸೇವಾ ಪದಕಕ್ಕೆ (Meritorious Service) ರಾಜ್ಯದ 19 ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ (Police Department) ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ, ಕೇಂದ್ರ ಗೃಹ ಸಚಿವಾಲಯ ಪದಕ ಘೋಷಿಸಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಮಾಡಲಾಗುತ್ತದೆ. ಈ ವರ್ಷ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಪದಕ ಘೋಷಿಸಲಾಗಿದೆ.
ವಿಶಿಷ್ಟ ಸೇವಾ ಪದಕಕ್ಕೆ ಎಂ.ಚಂದ್ರಶೇಖರ್, ಐಎಸ್‌ಡಿ, ಎಡಿಜಿಪಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ 18 ಅಧಿಕಾರಿಗಳು ಸಾರ್ಥಕ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ, ಶ್ರೀನಾಥ್ ಎಂ. ಜೋಷಿ, ಲೋಕಾಯುಕ್ತ ಎಸ್‌ಪಿ, ಸಿ.ಕೆ ಬಾಬಾ, ಬೆಂಗಳೂರು ಗ್ರಾಮಾಂತರ ಎಸ್‌ಪಿ, ರಾಮಗೊಂಡ ಬೈರಪ್ಪ, ಕರ್ನಾಟಕ ಎಎಸ್‌ಪಿ, ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ, ಪಿ. ಮುರಳೀಧರ್, ಡಿಎಸ್‌ಪಿ, ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ಬಸವರಾಜು ಕಮ್ತಾನೆ, ಡಿಎಸ್‌ಪಿ, ರವೀಶ್ ನಾಯಕ್, ಎಸಿಪಿ, ಶರತ್ ದಾಸನಗೌಡ, ಎಸ್‌ಪಿ, ಪ್ರಭಾಕರ್ ಗೋವಿಂದಪ್ಪ, ಎಸಿಪಿ, ಗೋಪಾಲ್ ರೆಡ್ಡಿ, ಡಿಸಿಪಿ ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್, ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್, ಹರೀಶ್ ಹೆಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್, ಎಸ್. ಮಂಜುನಾಥ, ಇನ್ಸ್‌ಪೆಕ್ಟರ್, ಗೌರಮ್ಮ ಜಿ. ಎಎಸ್ಐ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ