37 ದಿನಗಳಲ್ಲಿ 3 ಬಾರಿ ಡೈವೋರ್ಸ್ ಕೊಟ್ಟು 4ನೇ ಬಾರಿಯೂ ಮತ್ತೆ ಅವಳನ್ನೇ ಮದುವೆಯಾದ..!
ತೈವಾನ್ : ಜನರು ರಜೆಗಳಿಗೆ ಏನೇನೋ ಜುಗಾಡ್ ಗಳನ್ನ ಮಾಡಿರುವುದನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಭೂಪ ಕೇವಲ ಹೆಚ್ಚು ದಿನಗಳ ರಜೆಗಳಿಗೋಸ್ಕರ 3 ಬಾರಿ ಒಂದೇ ಹುಡುಗಿಗೆ ಡಿವೋರ್ಸ್ ನೀಡಿ ಇದೀಗ 4ನೇ ಬಾರಿಗೆ ಅದೇ ಹುಡುಗಿಯನ್ನೇ ವಿವಾಹವಾಗಿದ್ದಾರೆ. ಹೌದು.. ಈ ಘಟನೆ ನಡೆದಿರೋದು ತೈವಾನ್ ನಲ್ಲಿ. ಈತ 37 ದಿನಗಳಲ್ಲಿ ಒಬ್ಬಳೇ ಮಹಿಳೆಗೆ ಮೂರು ಬಾರಿ ಡೈವರ್ಸ್ ಕೊಟ್ಟು ಆ ಮೂರೂ ಬಾರಿಯೂ ಆಕೆಯನ್ನೇ ಮದುವೆಯಾಗಿ ಕಡೆಗೆ 4 ನೇ ಬಾರಿಯೂ ಅವಳನ್ನೇ ಮದುವೆಯಾಗಿದ್ದಾನೆ.
ಪ್ರಕರಣದ ಹಿನ್ನೆಲೆ
ಅಂದ್ಹಾಗೆ ಈ ವ್ಯಕ್ತಿಯು ತೈವಾನ್ ನ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಈತ ಮೊದಲನೇ ಬಾರಿ 2020ರ ಏಪ್ರಿಲ್ 6 ರಂದು ಮದುವೆಯಾಗಿದ್ದಾಗ 8 ದಿನಗಳ ರಜೆ ನೀಡಲಾಗಿತ್ತು. 8 ದಿನಗಳು ಕಳೆಯುತ್ತಿದ್ದಂತೆ ರಜಾ ಅವಧಿ ಮುಗಿಯುತ್ತಿದ್ದಂತೆ ಮತ್ತೆ ಪತ್ನಿಗೆ ಡೈವೋರ್ಸ್ ನೀಡಿ ಮರು ಮದುವೆ ಮಾಡಿಕೊಳ್ಳಲು ಮತ್ತೆ 8 ದಿನಗಳ ಕಾಲ ರಜೆ ಪಡೆದುಕೊಂಡಿದ್ದ. ಈ ರಜಾ ಅವಧಿಯೂ ಮುಗಿಯುತ್ತಿದ್ದಂತೆ ಮತ್ತೆ ಅದನ್ನೇ ರಿಪೀಟ್ ಮಾಡಿದ್ದಾನೆ. ಬಳಿಕ ಅದೇ ಹುಡುಗಿಯನ್ನ 4ನೇ ಬಾರಿಯೂ ಮದುವೆಯಾಗಿದ್ದಾನೆ. ಹೀಗೆ 4 ಮದುವೆಗಾಗಿ ಒಟ್ಟು 32 ದಿನಗಳ ರಜೆ ತೆಗೆದುಕೊಂಡಿದ್ದಾನೆ. ಆದ್ರೆ ಹೇಗೋ ಏನೋ ಬ್ಯಾಂಕ್ ಗೆ ಈತನ ಕಳ್ಳಾಟ ಗೊತ್ತಾಗಿಬಿಟ್ಟಿದೆ. ಬಳಿಕ ಹೆಚ್ಚಿನ ರಜೆ ನೀಡಲು ನಿರಾಕರಿಸಿದೆ. ಬ್ಯಾಂಕ್ ರಜೆ ನೀಡಲು ನಿರಾಕರಿಸಿದಕ್ಕೆ ಈತ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯವು ಬ್ಯಾಂಕ್ ಗೆ 20, 000 ರೂಪಾಯಿಗಳ ದಂಡ ವಿಧಿಸಿದೆ.
ಅಂದ್ಹಾಗೆ ಈತ ತೈವಾನಿನ ಕಾನೂನನ್ನ ದುರ್ಬಳಕೆ ಮಾಡಿಕೊಂಡಿದ್ದ. ತೈವಾನಿನ ಆರ್ಟಿಕಲ್ 2 ರ ಅನ್ವಯ ಒಬ್ಬ ವ್ಯಕ್ತಿ ಮದುವೆಗೆ 8 ದಿನಗಳ ಕಾಲ ರಜೆ ಪಡೆಯಬಹುದಾಗಿದೆ. ಆದ್ರೆ ಈತ ಇದೇ ಕಾನೂನನ್ನ ದುರ್ಬಳಕೆ ಮಾಡಿಕೊಂಡಿದ್ದಾನೆ. ನ್ಯಾಯಾಲಯದಲ್ಲಿ ಬ್ಯಾಂಕ್ ಮದುವೆಗೆ ರಜೆ ನೀಡದೇ ಆರ್ಟಿಕಲ್ 2 ರ ಉಲ್ಲಂಘನೆ ಮಾಡಿದ್ದಾರೆಂದು ದಾವೆ ಹೂಡಿದ್ದ. ಇದರ ವಿಚಾರಣೆ ನಡೆಸಿರುವ ಕೋರ್ಟ್ ಕೇವಲ ಬ್ಯಾಂಕ್ ಗೆ ಮಾತ್ರವೇ ಶಿಕ್ಷೆ ವಿಧಿಸಿ 20,000 ದಂಡ ವಿಧಿಸಿ , ರಜೆ ನೀಡುವಂತೆಯೂ ಆದೇಶಿಸಿದೆ.
ಕಿಚ್ಚನ ಫ್ಯಾನ್ಸ್ ಫುಲ್ ಖುಷ್… ರಿವೀಲ್ ಆಯ್ತು ‘ವಿಕ್ರಾಂತ್ ರೋಣ’ನ ರಿಲೀಸ್ ಡೇಟ್..!
ವಾಹನಗಳನ್ನ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದವರ ಬಂಧನ
ಕೊರೊನಾ ಹೆಚ್ಚಳ : ಕೊಡಗಿನಲ್ಲಿ ಫೀಲ್ಡಿಗಿಳಿದ ಜಿಲ್ಲಾಧಿಕಾರಿ







