ಕಿಚ್ಚನ ಫ್ಯಾನ್ಸ್ ಫುಲ್ ಖುಷ್… ರಿವೀಲ್ ಆಯ್ತು ‘ವಿಕ್ರಾಂತ್ ರೋಣ’ನ ರಿಲೀಸ್ ಡೇಟ್..!  

1 min read

ಕಿಚ್ಚನ ಫ್ಯಾನ್ಸ್ ಫುಲ್ ಖುಷ್… ರಿವೀಲ್ ಆಯ್ತು ‘ವಿಕ್ರಾಂತ್ ರೋಣ’ನ ರಿಲೀಸ್ ಡೇಟ್..!

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷೆ ವಿಕ್ರಾಂತ್ ರೋಣ ಸಿನಿಮಾ ತಂಡ ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.

ವಿಕ್ರಾಂತ್ ರೋಣ ಆಗಸ್ಟ್ 19ಕ್ಕೆ ರಿಲೀಸ್ ಆಗಲಿದೆ. ಈ ಬಗ್ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ, ‘ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಿದ್ಧತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ. ವಿಕ್ರಾಂತ್ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ವಿಕ್ರಾಂತ್ ರೋಣ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ.  ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಜ್ಯಾಕ್  ಮಂಜು ಬಂಡವಾಳ ಹೂಡಿದಿದ್ದಾರೆ.

ಪರ್ವೀನ್ ಬಾಬಿ ಬಾಲ್ಯದಿಂದಲೇ ಮಾನಸಿಕ ಅಸ್ವಸ್ಥರಾಗಿದ್ದರು – ಕಬೀರ್ ಬೇಡಿ

https://twitter.com/i/status/1382570021843390466

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd