ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಜನಪ್ರಿಯ ಸ್ಪರ್ಧಿಯಾಗಿ ಗುರುತಿಸಿಕೊಂಡಡಿದ್ದ ದಿವ್ಯಾ ಸುರೇಶ್ ಇದೀಗ ಜಿ ರಸ್ತೆಯಲ್ಲಿ ಕುಡಿದು ರಂಪಾಟ ಮಾಡಿರುವುದು ಬೆಳಕಿಗೆ ಬಂದಿದೆ..
ಹೌದು.. ನಿನ್ನೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾದ ಮೊದಲ ದಿನವಾಗಿದ್ದ ಹಿನ್ನೆಲೆ , MG ರೋಡ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.. ಇದೇ ವೇಳೆ ದಿವ್ಯಾ ಸುರೇಶ್ ಕುಡಿದ ಮತ್ತಿನಲ್ಲಿ ಸ್ನೇಹಿತರ ಜೊತೆಗೂಡಿ ರಂಪಾಟ ಮಾಡಿರುವುದು ಗೊತ್ತಾಗಿದೆ..
ಕುಡಿದ ಮತ್ತಿನಲ್ಲಿ ಗಲಾಟೆ ಮಾಡ್ತಿದ್ದ ವಿಚಾರ ಗೊತ್ತಾಗ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.. ಆದ್ರೆ ಪೊಲೀಸರ ಜೊತೆಗೆ ದಿವ್ಯಾ ಸುರೇಶ್ ಒಕುಡಿದ ಮತ್ತಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.. ನೈಟ್ ಕರ್ಫ್ಯೂ ಜಾರಿಯಲ್ಲಿದೆ ಮನೆಗೆ ತೆರಳಿ ಎಂದು ಪೊಲೀಸರು ದಿವ್ಯಾ ಸುರೇಶ್ ಗೆ ಸೂಚಿಸಿದ್ದಾರೆ.. ಆದ್ರೆ ದಿವ್ಯಾ ಸುರೇಶ್ ಪೊಲೀಸರ ಜೊತೆಗೆ ಕಿರಿಕ್ ತೆಗೆದಿದ್ದಾರೆ.. ಜೊತೆಗೆ ಅಲ್ಲಿಗೆ ಬಮದಿದ್ದ ಮಾಧ್ಯಮದವರ ಕ್ಯಾಮೆರಾಗಳನ್ನ ಕೂಡ ಕಿತ್ತು ಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.. ಬಳಿಕ ಸ್ನೇಹಿತರ ಜೊತೆಗೆ ಆಟೋ ಹತ್ತಿ ಮನೆ ಕಡೆಗೆ ಹೆಜ್ಜೆ ಹಾಕಿದ್ದಾರಂತೆ..
ಡಿಸೆಂಬರ್ 28 ರಿಂದ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.. 10 ದಿನಗಳ ಕಾಲ ನೈಟ್ ಕರ್ಫ್ಯೂ ವಿಧಿಸಲಾಗಿದೆ.. ರಾಜ್ಯದಲ್ಲಿ ಕೋವಿಡ್ ಜೊತೆಗೆ ಒಮಿಕ್ರಾನ್ ಆತಂಕವೂ ಹೆಚ್ಚಿರುವ ಪರಿಣಾಮ ಸರ್ಕಾರ ಕ್ರಮ ತೆಗೆದುಕೊಂಡಿದೆ..