ಬ್ರಿಟನ್: ಯುಕೆ ಪ್ರಧಾನಿ (UK PM) ಕೀರ್ ಸ್ಟಾರ್ಮರ್ ಅವರು ತಮ್ಮ ಮನೆಯಲ್ಲಿ ದೀಪಾವಳಿ (Diwali Party) ಹಬ್ಬದ ಹಿನ್ನೆಲೆಯಲ್ಲಿ ಹಿಂದೂಗಳನ್ನು ಆಹ್ವಾನಿಸಿ, ಹಬ್ಬ ಆಚರಿಸಿದ್ದರು. ಈ ವೇಳೆ ಮಾಂಸ, ಮದ್ಯ ಕಂಡು ಬ್ರಿಟಿಷ್ ಹಿಂದೂಗಳು ಶಾಕ್ ಆಗಿದ್ದಾರೆ.
ಪ್ರಧಾನ ಮಂತ್ರಿ ಅಧಿಕೃತ ನಿವಾಸದಲ್ಲಿ ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣ ಇತ್ತು. ಕೆಲವರು ಬ್ರಿಟಿಷ್ ಹಿಂದೂಗಳು, ಊಟದ ಮೆನುವಿನಲ್ಲಿ ಮದ್ಯ ಮತ್ತು ಮಾಂಸಾಹಾರಿ ಭಕ್ಷ್ಯಗಳನ್ನು ಒಳಗೊಂಡಿರುವುದನ್ನು ಕಂಡು ಶಾಕ್ ಆಗಿದ್ದರು. ಲ್ಯಾಂಬ್ ಕಬಾಬ್, ಬಿಯರ್ ಮತ್ತು ವೈನ್ ನ್ನು ಅತಿಥಿಗಳಿಗೆ ನೀಡಲಾಗಿದೆ ಎನ್ನಲಾಗಿದೆ.
ಕಳೆದ ವರ್ಷ ರಿಷಿ ಸುನಕ್ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಊಟದ ಮೆನುವಿನಲ್ಲಿ ಮಾಂಸ ಮತ್ತು ಮದ್ಯ ಇರಲಿಲ್ಲ. ಇದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.