ಬೈರೂತ್: ಇಸ್ರೇಲ್-ಹಿಜ್ಬುಲ್ಲಾ (Israel vs Hezbollah) ನಡುವೆ ಮತ್ತೆ ಯುದ್ಧದ ಜ್ವಾಲೆ ಹೊತ್ತಿಕೊಂಡಿದ್ದು, ಹಿಜ್ಬುಲ್ಲಾ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ಭೀಕರ ವಾಯು ದಾಳಿ ನಡೆಸಿದೆ. ಇಸ್ರೇಲ್‌ನ ಹೈಫಾ ನಗರವನ್ನ (Haifa City) ಗುರಿಯಾಗಿಸಿಕೊಂಡು 150 ರಾಕೆಟ್ ಗಳ ದಾಳಿ ನಡೆಸಿದೆ.
ಹಿಜ್ಬುಲ್ಲಾ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ಹಲವಾರು ನಾಗರಿಕರು ಗಾಯಗೊಂಡಿದ್ದಾರೆ. ಮಗು ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಹಲವು ವಾಹನಗಳು, ಕಟ್ಟಡಗಳು ಹಾನಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ (Iran) ನಡೆಸಿದ ಕ್ಷಿಪಣಿ ದಾಳಿಗೆ ಇಸ್ರೇಲ್ (Israel) ಪ್ರತೀಕಾರವಾಗಿ ಕಳೆದ ಅಕ್ಟೋಬರ್ 25ರಂದು 100ಕ್ಕೂ ಹೆಚ್ಚು ಯುದ್ಧ ವಿಮಾನಗಳ (Air Strike) ಮೂಲಕ ಇರಾನ್‌ನ 20ಕ್ಕೂ ಹೆಚ್ಚು ಮಿಲಿಟರಿ ಸ್ಥಳಗಳಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ ನಡೆಸಿತ್ತು. ಆನಂತರ ದಾಳಿಗಳು ಕ್ಷೀಣವಾಗಿದ್ದವು. ಆದರೆ, ಇಂದು ಮತ್ತೆ ಹಿಜ್ಬುಲ್ಲಾ ದಾಳಿ ಮಾಡಿದೆ.








