Kanishka soni – ತನ್ನನ್ನ ತಾನೇ ಮದುವೆಯಾದ ಬಾಲಿವುಡ್ ನಟಿ ಕನಿಷ್ಕಾ ಸೋನಿ
ಗುಜರಾತಿನಲ್ಲಿ ಕ್ಷಮಾ ಬಿಂದು ಎನ್ನುವ ಯುವತಿ ತನ್ನನ್ನು ತಾನು ಮದುವೆಯಾಗುವ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ಸಿನಮಾ ಮಾಧ್ಯಮದಲ್ಲೂ ಇಂಥಹ ಟ್ರೆಂಡ್ ಮುಂದುವರೆಯುತ್ತಿದೆ. ‘ದಿಯಾ ಔರ್ ಬಾತಿ ಹಮ್’ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ತನ್ನನ್ನು ಮದುವೆಯಾಗಿದ್ದಾರೆ, ಈ ವಿಷಯವನ್ನು ಅವರು ತಮ್ಮ ಸೊಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾನಿಷ್ಕಾ ಇನ್ಸ್ಟಾಗ್ರಾಮ್ನಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಕನಿಷ್ಕಾ ಸೋನಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಫೋಟೋ ಪ್ರಕಾರ ಕುತ್ತಿಗೆಯಲ್ಲಿ ಮಂಗಳಸೂತ್ರ ಮತ್ತು ಹಣೆಯಲ್ಲಿ ಸಿಂಧೂರ ಧರಿಸಿರುವುದನ್ನ ನೋಡಬಹುದು. ಇದರೊಂದಿಗೆ ಕಾನಿಷ್ಕ ಸುದೀರ್ಘ ಸಂದೇಶವನ್ನ ಬರೆದಿದ್ದಾರೆ. ನಟಿಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ.
ಕನಿಷ್ಕಾ ಹಂಚಿಕೊಂಡಿರುವ ಸಂದೇಶದಲ್ಲಿ ‘ನಾನು ನನ್ನನ್ನು ಮದುವೆಯಾಗಿದ್ದೇನೆ. ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿದ್ದೇನೆ ಮತ್ತು ನನ್ನನ್ನು ನಾನು ಪ್ರೀತಿಸುವ ಏಕೈಕ ವ್ಯಕ್ತಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ನನಗೆ ಗಂಡು ಬೇಕಾಗಿಲ್ಲ. ನನ್ನ ಗಿಟಾರ್ನೊಂದಿಗೆ ಏಕಾಂಗಿಯಾಗಿರಲು ನಾನು ಯಾವಾಗಲೂ ಸಂತೋಷಪಡುತ್ತೇನೆ … ನಾನು ದೇವತೆ, ಬಲಶಾಲಿ ಮತ್ತು ಶಕ್ತಿಶಾಲಿ. ಶಿವ ಮತ್ತು ಶಕ್ತಿ ಎಲ್ಲವೂ ನನ್ನೊಳಗೆ ಇದೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇನ್ನೂ ಕಾನಿಷ್ಕಾ ಬಗ್ಗೆ ಮಾತನಾಡುವುದಾದರೆ.. ‘ದಿಯಾ ಔರ್ ಬಾತಿ ಹಮ್’, ‘ಪವಿತ್ರ ರಿಷ್ಟ’, ‘ದೇವಿ ಆದಿ ಪರಾಶಕ್ತಿ’ ಮುಂತಾದ ಅನೇಕ ಶೋಗಳಲ್ಲಿ ನಟಿಸಿದ್ದಾರೆ. ಇದರಿಂದ ಅವರು ಮನೆ ಮನೆಗೆ ಪರಿಚಯವಾಗಿದ್ದಾರೆ. ಸದ್ಯ ಟಿವಿ ಉದ್ಯಮವನ್ನು ತೊರೆದಿರುವ ನಟಿ ಈಗ ಹಾಲಿವುಡ್ ಪಾದಾರ್ಪಣೆಗೆ ತಯಾರಿ ನಡೆಸುತ್ತಿದ್ದಾರೆ.