ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಗೆ ಮಾತೃ ವಿಯೋಗ… ಇಂದು ಸಂಜೆ ಅಂತ್ಯಕ್ರಿಯೆ…
ದಿಯಾ ಚಿತ್ರದ ಮೂಲಕ ಬೆಳಕಿಗೆ ಬಂದಿದ್ದ ಕನ್ನಡದ ಯುವ ಪ್ರತಿಭೆ ಪೃಥ್ವಿ ಅಂಬರ್ ಅವರ ತಾಯಿ ಆರೋಗ್ಯದ ಅಸೌಖ್ಯದಿಂದ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪೃಥ್ವಿ ಅಂಬರ್ ಅವರ ತಾಯಿ ಸುಜಾತಾ ವೀರಪ್ಪ ಅಂಬರ್ ಆದರೆ ಕಳೆದ ರಾತ್ರಿ ಅವರು ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಸುಜಾತ ಅಂಬರ್ ಅವರು RSS ಹಿರಿಯ ನಾಯಕರಾದ ವೀರಪ್ಪ ಅಂಬಾರ್ ಅವರ ಧರ್ಮಪತ್ನಿಯಾಗಿದ್ದರು. ಸುಜಾತಾ ಅಂಬರ್ ಅವರು ದುರ್ಗಾಪರಮೇಶ್ವರಿ ಮಹಿಳಾ ಸಂಘದ ಕಾರ್ಯದರ್ಶಿಯಾಗಿದ್ದು, ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕಾಗಿ ದುಡಿಯುತ್ತಿದ್ದರು. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.
ಸುಜಾತಾ ಅಂಬರ್ ಅವರ ಅಂತ್ಯಕ್ರಿಯೆ ಇಂದು ಮಂಗಳೂರಿನ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಕೆಲ ದಿನಗಳ ಹಿಂದೆಯಷ್ಟೆ ಪೃಥ್ವಿ ಅಂಬರ್ ನಟನೆಯ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರಗಳು ಬಿಡುಗಡೆಯಾಗಿದ್ದು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಮ್ಮ ತಾಯಿಯನ್ನ ಕಳೆದುಕೊಂಡಿದ್ದಾರೆ.