ಬೆಂಗಳೂರಿನ ಕೆ ಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಇನ್ನೂ ಶಾಸಕರ ಮನೆಗೆ ಬೆಂಕಿ ಹಚ್ಚಿ ಪುಂಡರು ಪುಂಡಾಟ ಮೆರೆದಿದ್ದು, ಹಿಂಸಾಚಾರ ತಾರಕಕ್ಕೇರಿದ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗೋಲೀಬಾರ್ ನಡೆಸಬೇಕಾಯಿತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಗಳನ್ನು ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರು ಪಡಿಸಲು ಪೊಲೀಸರು ಸಿದ್ದತೆ ನಡೆಸಿಕೊಂಡಿದ್ದಾರೆ. ಈಗಾಗಲೇ ಪ್ರಕರಣದಲ್ಲಿ 150 ಕ್ಕೂ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲಿದ್ದಾರೆ. ಇನ್ನೂ 150 ಆರೋಪಿಗಳ ಪೈಕಿ ಕೆಲವು ಪ್ರಮುಖ ಆರೋಪಿಗಳನ್ನ ಗುರುತಿಸಿರುವ ಪೊಲಿಸರು ಅವರನ್ನು ಕಸ್ಟಡಿಗೆ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ನನ್ನ ಐದು ದಶಕಗಳ ರಾಜಕೀಯ ಬದುಕು ತೆರೆದ ಪುಸ್ತಕ ಅಸತ್ಯದ ಸಂತೆಗಿಂತ ಸತ್ಯವೇ ದೊಡ್ಡದು: ಸ್ಟಿಂಗ್ ಆಪರೇಷನ್ ವಿಡಿಯೋ ಎಂಬ ಕಿಡಿಗೇಡಿತನಕ್ಕೆ ಸಿದ್ದರಾಮಯ್ಯ ಕಿಡಿ ಚಾರಿತ್ರ್ಯಹನನ ತಡೆಯಲು ನ್ಯಾಯದ ಅಂಗಳಕ್ಕೆ ಮಾಜಿ ಸಿಎಂ
ಕರ್ನಾಟಕ ರಾಜಕೀಯದ ದೈತ್ಯ ನಾಯಕ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ವ್ಯವಸ್ಥಿತ ಸಂಚು ನಡೆದಿದೆಯೇ ಎನ್ನುವ ಪ್ರಶ್ನೆ ಈಗ ರಾಜ್ಯದ ಜನರನ್ನು ಕಾಡುತ್ತಿದೆ. ಕಳೆದ ಕೆಲ...








