ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಲು ಸಾಲು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿಯಾದ ಸಿರಾಜ್ ನ ಬೆನ್ನು ಬಿದ್ದಿದ್ದಾರೆ.ಠಾಣೆ ಮುಂದೆ ನಿಂತು ಗಲಭೆಗೆ ಪ್ರಚೋದನೆ ನೀಡಿದ್ದ ಸಿರಾಜ್ ಬೇಟೆಗೆ ಬಲೆ ಬೀಸಿದ್ದಾರೆ.
ಮತ್ತೊಂದೆಡೆ ಪೊಲೀಸರು ಪ್ರಕರಣದಲ್ಲಿ ಬಂಧಿತನಾಗಿರುವ ಯೂಸುಪ್ ವಿಚಾರಣೆಯನ್ನೂ ನಡೆಸಿದ್ದಾರೆ. ನವೀನ್ ಮನೆಗೆ ನುಗ್ಗಿ ಮೊದಲು ದಾಂಧಲೆ ಆರಂಭಿಸಿದ್ದ ಯೂಸುಫ್ ನನ್ನೆ ನಿನ್ನೆಯಷ್ಟೇ ಬಂಧಿಸಿದ್ದ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ತಡರಾತ್ರಿ ಎಸಿಪಿ ರವಿ ಪ್ರಸಾದ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ.