ಬೆಂಗಳೂರು : ರಾತ್ರೋ ರಾತ್ರಿ ಇಡೀ ಬೆಂಗಳೂರು ಮಾತ್ರವಲ್ಲದೇ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದ್ದ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆಗಗೆ ಸಂಬಂಧಿಸಿದಂತೆ ಈಗಾಗಲೇ 300ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಆರೋಪಿಗಳ ವಿಚಾರೌನೆ ವೇಳೆ ಬೆಚ್ಚಿ ಬೀಳಿಸುವಂತ ವಿಚಾರವೊಂದು ಬಹಿರಂಗವಾಗಿದೆ.
ಹೌದು ಪೊಲೀಸರ ಬಂಧನಕ್ಕೊಳಪಟ್ಟಿರುವ ಆರೋಪಿಗಳ ಪೈಕಿ ಮೂವರಿಗೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳ ಒತೆಗೆ ನಂಟಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಕುರಿತಾಗಿ ಎನ್‍ಐಎ ಅಧಿಕಾರಿಗಳು ಕರ್ನಾಟಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.
ಕೋಮುಗಲಭೆಯ ಪ್ರಮುಖ ಆರೋಪಿಗಳೆಂದೇ ಹೇಳಲಾಗುತ್ತಿರುವ ಎಸ್‍ಡಿಪಿಐ ಕಾರ್ಯಕರ್ತ ಸಮೀವುದ್ದೀನ್, ಡಿಚ್ಚಿ ಮುಬಾರಕ್ ಹಾಗೂ ಜೈದ್ ಎಂಬ ಮೂವರು ಶಂಕಿತರು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಹಾಗೂ ಭಾರತಕ್ಕೆ ಬೇಕಾಗಿರುವ ಕೆಲವು ಉಗ್ರರ ಜೊತೆ ನಿರಂತವಾಗಿ ಸಂಪರ್ಕ ಇಟ್ಟುಕೊಂಡಿರುವುದು ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.
ಭಾರತದಲ್ಲಿ ನಿಷೇದಕ್ಕೊಳಪಟ್ಟಿರುವ ಆಲ್- ಹಿಂದ್ ಉಗ್ರಗಾಮಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಸಮೀವುದ್ದೀನ್ ದಕ್ಷಿಣ ಭಾರತದಲ್ಲಿ ಸಂಘಟನೆಯ ಹೊಣೆಹೊತ್ತುಕೊಂಡಿದ್ದ. ತನ್ನ ಮೇಲೆ ಯಾರ ಅನುಮಾನಪಾಡಬಾರದೆಂಬ ಕಾರಣಕ್ಕಾಗಿಯೇ ಎಸ್ ಡಿಪಿಐ ಸಂಘಟನೆಯ ಸದಸ್ಯನಾಗಿದ್ದ. ಸಮಾಜ ಸೇವೆ ಮುಖವಾಡ ಹಾಕಿದ್ದ ಈತ ಹೆಚ್.ಎಸ್,ಬಿ ಆರ್ ಲೇಔಟ್ ನಲ್ಲಿ ನಾರಿ ಎಂಬ ಎನ್ ಜಿಒ ನಡೆಸುತ್ತಿದ್ದ.
ಪಾಕಿಸ್ತಾನಕ್ಕೆ ಹೋಗುತ್ತಿದ್ದ ಸಮೀವುದ್ದೀನ್ ಭಾರತದ ಕೆಲವು ಪ್ರಮುಖ ನಗರಗಳಲ್ಲಿ ವಿದ್ವಂಸಕ ಕೃತ್ಯ ನಡೆಸಲು ಕೆಲವು ಉಗ್ರರಿಂದ ತರಬೇತಿಯನ್ನು ಪಡೆದಿದ್ದ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈತ ಡಿಜೆ ಹಳ್ಳಿ, ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಸಲು ಕೆಲವು ಪುಂಡರಿಗೆ ಹಣಕಾಸಿನ ನೆರವು ನೀಡಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.
ಇನ್ನು ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿರುವ ಜೈದ್ ಪಾಕ್ ಉಗ್ರಗಾಮಿ ಸಂಘಟನೆ ಹಾಗೂ ಉಗ್ರರ ಜೊತೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುವುದು ದೃಡಪಟ್ಟಿದೆ.
ಅಷ್ಟೇ ಅಲ್ಲ ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಟೋಟದ ಪ್ರಮುಖ ರೂವಾರಿಯಾಗಿ ಸದ್ಯ ಎನ್ ಐ ಎ ವಶದಲ್ಲಿರುವ ಶಂಕಿತ ಉಗ್ರ ಅಫ್ರೀದಿ ಜೊತೆಗೂ ಈತನಿಗೆ ನಂಟಿರುವುದು ಗೊತ್ತಾಗಿದೆ. ಇನ್ನೂ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯಾಗಿರುವ ಡಿಚ್ಚಿ ಮುಬಾರಕ್ ಗೂ ಉಗ್ರರ ನಂಟಿರುವುದು ದೃಡಪಟ್ಟಿದೆ.