ಯಾವನೋ ಈಶ್ವರಪ್ಪ ಅಂತೆ ತೆಲೆಕೆಟ್ಟ ಈಶ್ವರಪ್ಪ: ಡಿ.ಕೆ.ಶಿವಕುಮಾರ Saaksha Tv
ಗದಗ: ಯಾವನೋ ಈಶ್ವರಪ್ಪ ಅಂತೆ ತೆಲೆಕೆಟ್ಟ ಈಶ್ವರಪ್ಪ. ಸಿಎಂ ಬೊಮ್ಮಾಯಿ, ಗವರ್ನರ್ ಇಟ್ಟುಕೊಂಡು ಕುಂತವರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ, ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಇದ್ದಿದ್ದರೇ 10 ನಿಮಿಷದಲ್ಲಿ ಅವನ ರಾಜೀನಾಮೆ ಪಡೆಯುತ್ತಿದ್ದೇವು. ಸಿಎಂ ಬೊಮ್ಮಾಯಿ ಒಂದು ಮಾತನ್ನೂ ಆಡಿಲ್ಲ ಬಾಯಿಗೆಎ ಹೊಲಿಗೆ ಹಾಕಿಕೊಂಡಿದ್ದಾರೆ ಎಂದು ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಈಶ್ವರಪ್ಪ ಅವರ ಮಾತಿನಗೆ ಕಿಡಿಕಾರಿದ್ದಾರೆ.
ಅಲ್ಲದೇ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಬೇಕು. ಸಂಪುಟದಿಂದ ಈಶ್ವರಪ್ಪ ಅವರನ್ನು ತೆಗೆಯಬೇಕು ಎಂದು ಡಿ. ಕೆ. ಶಿವಕುಮಾರ ಹೇಳಿದರು.
ಮುಂದುವರೆದು ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಹೊರತು ಸರಕಾರಿ ನೌಕರರಾಗಿ ಕೆಲಸ ಮಾಡುತ್ತಿಲ್ಲ. ದೊಡ್ಡ ಅಧಿಕಾರಿಯೇ ಇರಲಿ, ಸಣ್ಣವರೇ ಇರಲಿ ಎಲ್ಲರ ವರ್ತನೆ ಗಮನಿಸುತ್ತಿದ್ದೇನೆ ಎಂದು ಹೇಳಿದರು.
ಹಿಜಾಬ್ – ಕೇಸರಿ ಶಾಲು ವಿವಾದ ತಾರಕಕ್ಕೆ ಏರಿ ವಿದ್ಯಾರ್ಥಿಗಳಿಗೆ ಶಿಕ್ಷಣವಿಲ್ಲದೆ ತೊಂದರೆಯಾಗುತ್ತಿದೆ. ಕೊರೊನಾದಿಂದ ಶಾಲೆ-ಕಾಲೇಜುಗಳು ಬಂದ್ದಾಗಿದ್ದವು, ಈಗ ಈ ವಿವಾದಿಂದ ಬಂದಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ಈ ಮಧ್ಯೆ ರಾಜಕೀಯ ನಾಯಕರು ತಮ್ಮ ರಾಜಕೀಯ ಕೆಸರು ಎರೆಚಾಟ ಮುಂದುವರೆಸಿದ್ದು ಕೇದರದ ಸಂಗತಿ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.