ಬೆಂಗಳೂರು : ದುಷ್ಟ ಶಕ್ತಿಗಳಿಂದ ಮುಕ್ತಿ ನೀಡುವ ಹಬ್ಬ ಇದು. ಅನಿಷ್ಟ ರಾಜಕಾರಣಿಯಿಂದ ಆರ್. ಆರ್. ನಗರಕ್ಕೆ ಮುಕ್ತಿ ಸಿಗಬೇಕು.ಇದು ಧರ್ಮಕ್ಕೂ ಅಧರ್ಮಕ್ಕೂ ನಡೆಯುತ್ತಿರೋ ಚುನಾವಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಗ್ಗೆರೆಯಲ್ಲಿ ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಸುಮ ಹನುಮಂತರಾಯಪ್ಪ ಪರ ಭರ್ಜರಿ ಪ್ರಚಾರ ನಡೆಸಿದರು.
ಈ ವೇಳೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ದುಷ್ಟ ಶಕ್ತಿಗಳಿಂದ ಮುಕ್ತಿ ನೀಡುವ ಹಬ್ಬ ಇದು.
ಅನಿಷ್ಟ ರಾಜಕಾರಣಿಯಿಂದ ಆರ್. ಆರ್. ನಗರಕ್ಕೆ ಮುಕ್ತಿ ಸಿಗಬೇಕು. ನಾನೇ ಇವರನ್ನು ಬಿಜೆಪಿಗೆ ಕಳಿಸಿದೆ ಅಂತ ಸೋಮಶೇಖರ್ ಹೇಳ್ತಾರೆ.
ಸುಳ್ಳು ಹೇಳೋದಕ್ಕೆ ಏನಾದ್ರೂ ಲೆಕ್ಕಾಚಾರ ಇರಬೇಕು. ಇದು ಧರ್ಮಕ್ಕೂ ಅಧರ್ಮಕ್ಕೂ ನಡೆಯುತ್ತಿರೋ ಚುನಾವಣೆ ಎಂದರು.
ಮುನಿರತ್ನ ನೋಟು, ಕುಸುಮಾಗೆ ಓಟು ಅಂತ ಹೇಳಿದ್ದೆ. ಹೀಗಾಗಿ ಎಲೆಕ್ಷನ್ ಕಮಿಷನ್ ನವರು ನನಗೆ ನೊಟೀಸ್ ಕೊಟ್ಟಿದ್ರು.
ಮುನಿರತ್ನ ಮನೆ ಮನೆಗೂ ಸೆಟ್ ಟಾಪ್ ಬಾಕ್ಸ್ ಕೊಟ್ಟು ಅವರ ಫೋಟೋ ಬರೋ ತರ ಮಾಡಿದ್ದಾರೆ. ಎಲೆಕ್ಷನ್ ಕಮಿಷನ್ ನವರಿಗೆ ಇದೆಲ್ಲ ಗೊತ್ತಾಗಲ್ವಾ ಎಂದು ಪ್ರಶ್ನಿಸಿದರು.
ಕೇಬಲ್ ಸೆಟ್ ಟಾಪ್ ಬಾಕ್ಸ್ ಗಳನ್ನೆಲ್ಲ ಎತ್ಕೊಂಡು ಹೋಗಿ ಚುನಾವಣೆ ಆಯೋಗದ ಮುಂದೆ ಸುರಿಯೋಣ. ಮುನಿರತ್ನ ದುಡ್ಡು ಕೊಡೋದನ್ನೆಲ್ಲ ಎಲ್ರು ರೆಕಾರ್ಡ್ ಮಾಡ್ಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಕೊಟ್ಟರು.
ಇದನ್ನೂ ಓದಿ : ಆರ್ಎಸ್ಎಸ್ ಸಭೆಯಲ್ಲಿ ಎಸ್.ಎಂ ಕೃಷ್ಣ: RSS ಟೋಪಿ ಧರಿಸಿ ಹಿಂದುತ್ವದ ಭಾಷಣ..!
ಲಗ್ಗೆರೆ ಪ್ರಚಾರ ಸಭೆಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಕುಸುಮಾ.ಎಚ್ ಅವರು ಬೆಂಗಳೂರಿನ ಮೆಜೆಸ್ಟಿಕ್?ನಲ್ಲಿರುವ ನಗರದೇವತೆ ಅಣ್ಣಮ್ಮನ ಗುಡಿಯಲ್ಲಿ ಸಂಜೆ ಪೂಜೆ ಸಲ್ಲಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










