ಬೆಂಗಳೂರು: ಒಂದು ಕಾಲದಲ್ಲಿ ಕಾಂಗ್ರೆಸ್‍ನ ಕಟ್ಟಾಳು, ತಮ್ಮ ರಾಜಕೀಯ ಜೀವನದ ಕೊನೆಯ ದಿನಗಳವರೆಗೂ ಕಾಂಗ್ರೆಸ್ ತಮ್ಮ ಉಸಿರು ಎಂದು ಭಾವಿಸಿದ್ದವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ. ಕೆಳಹಂತದಿಂದ ತಮ್ಮ ರಾಜಕೀಯ ಜೀವನದಲ್ಲಿ ಅತ್ಯುನ್ನತ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಅಲಂಕರಿಸಿದ್ದ ಎಸ್.ಎಂ ಕೃಷ್ಣ ಅವರು, ಬದಲಾದ ರಾಯಕೀಯ ಪರಿಸ್ಥಿತಿಯಲ್ಲಿ ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.
ಬಿಜೆಪಿ ಸೇರಿದ್ದರೂ ಆರ್‍ಎಸ್‍ಎಸ್‍ನಿಂದ ದೂರವೇ ಇದ್ದ ಎಸ್.ಎಂ ಕೃಷ್ಣ, ನಾಡಹಬ್ಬ ದಸರಾ ಆಚರಣೆ ಅಂಗವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಹಿಂದುತ್ವ ಮತ್ತು ದೇಶಭಕ್ತಿಯ(Hindutva speech) ಕುರಿತು ಸುದೀರ್ಘ ಉಪನ್ಯಾಸ ನೀಡಿದ್ದಾರೆ.
ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಆರ್.ಎಸ್.ಎಸ್ ಸಭೆಯಲ್ಲಿ ಭಾಗವಹಿಸಿ ಆರ್‍ಎಸ್‍ಎಸ್ ಟೋಪಿ ಧರಿಸಿ ಹಿಂದುತ್ವದ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ರಾಷ್ಟ್ರಭಕ್ತಿಯ ಲಸಿಕೆ ಕೊಡಬೇಕು..
ಜಾಗತಿಕ ಮಟ್ಟದಲ್ಲಿ ಭಾರತದತ್ತ ತಿರುಗಿನೋಡುವಂತಹ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಮಾಡಿದ ಭಾಷಣ ಭಾರತದಲ್ಲಿ ರಾಷ್ಟ್ರೀಯತೆ ಹಾಗೂ ದೇಶಭಕ್ತಿ ಜಾಗೃತರಾಗುವಂತೆ ಮಾಡಿತ್ತು. ವಿವೇಕಾನಂದರ ಈ ಸಾಧನೆಯ ಹಿಂದೆ ಇದ್ದದ್ದೇ ಆರ್‍ಎಸ್‍ಆರ್ ಸಂಘಟನೆ ಎಂದು ಬಣ್ಣಿಸಿದ ಮಾಜಿ ಸಿಎಂ ಎಸ್.ಎಂ ಕೃಷ್ಣ, ದೇಶದಲ್ಲಿರುವ 134 ಕೋಟಿ ಜನರಿಗೆ ದೇಶಭಕ್ತಿ ಹಾಗೂ ರಾಷ್ಟ್ರಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದಿದ್ದಾರೆ.
ಎಂಜಿನಿಯರ್ ಆಗಿದ್ದವರೊಬ್ಬರು ತಮ್ಮ ಜೀವನವನ್ನೇ ಎಸ್‍ಎಸ್‍ಎಸ್‍ಗೆ ಮುಡಿಪಾಗಿಟ್ಟಿದ್ದಾರೆಂಬ ವಿಷಯ ತಿಳಿಯಿತು. ಇದನ್ನು ನೋಡಿದರೆ ನಾವು ಪುಟ್ಟಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ರಾಷ್ಟ್ರಭಕ್ತಿಯ ಲಸಿಕೆ ಕೊಡುವ ಅಗತ್ಯವಿದೆ. ಇದರಿಂದ ಇಂದಿನ ಪೀಳಿಗೆಗೆ ರಾಷ್ಟ್ರಭಕ್ತಿಯ ಅರಿವು ಬರಲಿದೆ ಎಂದು ಎಸ್.ಎಂ ಕೃಷ್ಣ ಪ್ರತಿಪಾದಿಸಿದ್ದಾರೆ.
ಅಧಿಕಾರದ ಎಲ್ಲಾ ಮೆಟ್ಟಿಲು ಹತ್ತಿಸಿದ್ದು ಕಾಂಗ್ರೆಸ್..
ಎಸ್.ಎಂ ಕೃಷ್ಣ ಅವರಿಗೆ ತಮ್ಮ ರಾಜಕೀಯ ಜೀವನದಲ್ಲಿ ಅತ್ಯುನ್ನತ ಹುದ್ದೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಶಾಸಕನಾಗಿ, ಸಂಸದನಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಲೋಕಸಭೆ ಉಪಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ..ಹೀಗೆ ಉನ್ನತ ಹುದ್ದೆಗಳನ್ನು ಕಾಂಗ್ರೆಸ್‍ನಲ್ಲಿದ್ದುಕೊಂಡೇ ಏರಿದವರು ಎಸ್.ಎಂ ಕೃಷ್ಣ.
ಇಂದಿರಾಗಾಂಧಿ ಕಾಲದಿಂದ ಸೋನಿಯಾಗಾಂಧಿವರೆಗೆ ಎಸ್.ಎಂ ಕೃಷ್ಣ ಗಾಂಧಿ ಕುಟುಂಬದ ಜತೆ ನಿಕಟ ಹೊಂದಿದ್ದವರು. ಹೀಗಾಗಿ ಕಾಂಗ್ರೆಸ್ ಇಲ್ಲದ ಎಸ್.ಎಂ ಕೃಷ್ಣ ಅವರನ್ನು ನೆನೆಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನು ಮುಡಿಪಾಗಿಸಿಕೊಂಡಿದ್ದರು.
ಆದರೆ, 2014ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‍ನಿಂದ ದೂರವೇ ಉಳಿದಿದ್ದ ಎಸ್.ಎಂ ಕೃಷ್ಣ, ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ ಬಿಜೆಪಿ ಪಕ್ಷವನ್ನು ಸೇರುವ ಮೂಲಕ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದ್ದರು. ಬಿಜೆಪಿ ಸೇರಿದ್ದರೂ, ಅದರ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಿಂದ ದೂರವೇ ಇದ್ದ ಕೃಷ್ಣ ಅವರು, ಆರ್‍ಎಸ್‍ಎಸ್ ಸಭೆಯಲ್ಲಿ ಹಿಂದುತ್ವದ ಭಾಷಣ ಮಾಡಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel