ಕರ್ನಾಟಕ ರಾಜ್ಯದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಚೇತರಿಸಿಕೊಳ್ಳಲಾಗದಂತಹ ಕಹಿ ಸುದ್ದಿ ನೀಡಿದೆ. ಮುಂಬರುವ ಮೇ 1 ರಿಂದ ರಾಜ್ಯಾದ್ಯಂತ ಹೊಸ ಅಬಕಾರಿ ನೀತಿಯು ಜಾರಿಗೆ ಬರಲಿದ್ದು ಇದರ ನೇರ ಪರಿಣಾಮವಾಗಿ ಮದ್ಯದ ಬೆಲೆಯಲ್ಲಿ ಶೇಕಡಾ 20 ರಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಮದ್ಯಪ್ರಿಯರ ಜೇಬಿಗೆ ಭಾರಿ ಕತ್ತರಿ ಬೀಳಲಿದೆ.
ಹೊಸ ನೀತಿಯ ಅನ್ವಯ ಇನ್ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಅಂದರೆ ಎಐಬಿ ಆಧಾರದ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಮದ್ಯದಲ್ಲಿ ಆಲ್ಕೋಹಾಲ್ ಅಂಶ ಎಷ್ಟು ಹೆಚ್ಚಿರುತ್ತದೋ ಅಷ್ಟೇ ಪ್ರಮಾಣದಲ್ಲಿ ತೆರಿಗೆಯೂ ಅಧಿಕವಾಗಲಿದೆ. ಈ ಹೊಸ ನಿಯಮದಿಂದಾಗಿ ಸಾಮಾನ್ಯ ಜನರು ಅತಿ ಹೆಚ್ಚಾಗಿ ಬಳಸುವ ಕಡಿಮೆ ಬೆಲೆಯ ಬ್ರಾಂಡ್‌ಗಳ ಬೆಲೆಯು ಒಂದು ಕ್ವಾರ್ಟರ್‌ಗೆ ಸುಮಾರು 15 ರಿಂದ 25 ರೂಪಾಯಿಗಳಷ್ಟು ದುಬಾರಿಯಾಗಲಿದೆ.
ವಿಶೇಷವಾಗಿ ರಾಜ್ಯದ ಅಬಕಾರಿ ಆದಾಯಕ್ಕೆ ಅತಿ ಹೆಚ್ಚು ಅಂದರೆ ಶೇಕಡಾ 80 ರಷ್ಟು ಕೊಡುಗೆ ನೀಡುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ವಿಸ್ಕಿ ರಮ್ ಬ್ರಾಂಡಿ ಮತ್ತು ಜಿನ್ ಪ್ರಿಯರು ಇನ್ಮುಂದೆ ಹೆಚ್ಚಿನ ಹಣವನ್ನು ತೆರಬೇಕಾಗುತ್ತದೆ. ಒಂದು ಫುಲ್ ಬಾಟಲ್ ಮದ್ಯದ ಮೇಲೆ ಕನಿಷ್ಠ 50 ರಿಂದ 100 ರೂಪಾಯಿಗಳಷ್ಟು ದರ ಹೆಚ್ಚಳವಾಗುವ ಅಂದಾಜಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಹೋಗುವವರಿಗೆ ಸರ್ವಿಸ್ ಚಾರ್ಜ್ ಸೇರಿದರೆ ಈ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.
ದರ ಏರಿಕೆಯ ಅಂದಾಜು ಪಟ್ಟಿ ಹೀಗಿದೆ
ಸ್ಲ್ಯಾಬ್ 1 ರ ಮದ್ಯದ ಬೆಲೆ 80 ರೂಪಾಯಿಯಿಂದ 95 ರೂಪಾಯಿಗೆ ಏರಿಕೆಯಾಗಲಿದೆ ಅಂದರೆ 15 ರೂಪಾಯಿ ಹೆಚ್ಚಳ
ಸ್ಲ್ಯಾಬ್ 2 ರ ಮದ್ಯದ ಬೆಲೆ 95 ರೂಪಾಯಿಯಿಂದ 110 ರೂಪಾಯಿಗೆ ಏರಿಕೆಯಾಗಲಿದೆ ಅಂದರೆ 15 ರೂಪಾಯಿ ಹೆಚ್ಚಳ
ಸ್ಲ್ಯಾಬ್ 3 ರ ಮದ್ಯದ ಬೆಲೆ 120 ರೂಪಾಯಿಯಿಂದ 135 ರೂಪಾಯಿಗೆ ಏರಿಕೆಯಾಗಲಿದೆ ಅಂದರೆ 15 ರೂಪಾಯಿ ಹೆಚ್ಚಳ
ಸ್ಲ್ಯಾಬ್ 4 ರ ಮದ್ಯದ ಬೆಲೆ 150 ರೂಪಾಯಿಯಿಂದ 170 ರೂಪಾಯಿಗೆ ಏರಿಕೆಯಾಗಲಿದೆ ಅಂದರೆ 20 ರೂಪಾಯಿ ಹೆಚ್ಚಳ
ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಮದ್ಯಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಮದ್ಯದ ದರವನ್ನು ಪದೇ ಪದೇ ಏರಿಸುತ್ತಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ. ಅಬಕಾರಿ ಸುಂಕದ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಮೇ 1 ರಿಂದ ಮದ್ಯ ಖರೀದಿ ಮಾಡುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿರುವುದು ಗ್ಯಾರಂಟಿ.







