ADVERTISEMENT
Tuesday, September 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವೃತ್ತಿ ಆಧಾರಿತ ಕಾರ್ಮಿಕರಿಗೆ 10 ಸಾವಿರ ಸಹಾಯಧನ ನೀಡಿ : ಸರ್ಕಾರಕ್ಕೆ ಡಿಕೆ ಶಿವಕುಮಾರ್ ಒತ್ತಾಯ

admin by admin
April 18, 2020
in Newsbeat, Politics, Samagra karnataka
Share on FacebookShare on TwitterShare on WhatsappShare on Telegram

ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಆಟೋ ರಿಕ್ಷಾ, ಕ್ಯಾಬ್, ಲಾರಿ ಚಾಲಕರು, ಕ್ಲೀನರ್ ಗಳು ಸೇರಿದಂತೆ ವೃತ್ತಿ ಆಧಾರಿತ ಕಾರ್ಮಿಕರಿಗೆ ಮಾಸಿಕ ತಲಾ 10 ಸಾವಿರ ರೂಪಾಯಿ ಸಹಾಯಧನ ನೀಡಬೇಕು ಎಂದು ಸರ್ಕಾರಕ್ಕೆ ಡಿಕೆ ಶಿವಕುಮಾರ್ ಒತ್ತಾಯಿಸಿದರು. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಕಾನಿಕ್ ಗಳು, ಹೋಟೆಲ್ ಸಪ್ಲೈಯರ್, ಹೋಟೆಲ್ ಕ್ಲೀನರ್, ಬೀದಿ ಬದಿ ವ್ಯಾಪಾರಿ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರು, ಹೂವು, ಹಣ್ಣು, ಸೊಪ್ಪು ಮಾರುವವರು, ಹೂವು ಕಟ್ಟುವವರು, ಪಾನಿಪುರಿ ವ್ಯಾಪಾರಿಗಳು, ಬೀದಿ ಬದಿ ಇಡ್ಲಿ, ದೋಸೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದವರು, ಕೆತ್ತನೆ, ಕುಸರಿ ಕೆಲಸ ಮಾಡುವವರು, ಕಮ್ಮಾರರು, ಕಲ್ಲು ಒಡೆಯುವವರು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಲಾರಿಗೆ ಸಾಮಾನು ಲೋಡ್ ಮಾಡುವವರು, ಹಳ್ಳಿಕಡೆ ಏರ್ ಪಿನ್, ಗೊಂಬೆ ಮಾರುವವರು, ಗುಜರಿ ವ್ಯಾಪಾರಿಗಳು ಕೂಡ ಈ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಲಿದ್ದು, ಈ ಎಲ್ಲ ವರ್ಗದವರ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಆದರೆ ಈವರೆಗೂ ಪ್ರಧಾನಿ ಮೋದಿ ಅವರಾಗಲಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಈ ವರ್ಗದ ಬಗ್ಗೆ ಒಂದೇ ಒಂದು ಮಾತು ಆಡದಿರುವುದು, ಅವರ ನೆರವಿಗೆ ಬಾರದಿರುವುದು ತಮಗೆ ಅತೀವ ನೋವು ತಂದಿದೆ. ನಾಳೆಯೇ ಮುಖ್ಯಮಂತ್ರಿಗಳ ಬಳಿಗೆ ಕಾಂಗ್ರೆಸ್ ನಿಯೋಗ ತೆಗೆದುಕೊಂಡು ಹೋಗಿ ಅವರ ಪರವಾಗಿ ಖುದ್ದು ಮನವಿ ಸಲ್ಲಿಸುತ್ತೇನೆ. ಕೊರೊನಾ ಪರಿಸ್ಥಿತಿ ನಿರ್ವಹಣೆ, ಅಗತ್ಯ ಇರವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಿಸಿದ ಪರಿಹಾರ ಸೂಕ್ತ ರೀತಿಯಲ್ಲಿ ಸಿಗದೆ ಜನ ಸಂಕಟಪಡುತ್ತಿರುವುದನ್ನು ನೋಡಲಾಗದೆ ಬಹಳ ಬೇಸರ ಹಾಗೂ ನೋವಿನಿಂದ ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಎಷ್ಟೆಲ್ಲ ಪರಿಪರಿಯಾಗಿ ಹೇಳಿಕೊಂಡರೂ ನಮ್ಮ ಸದ್ಭಾವನೆಯನ್ನು ಎರಡೂ ಸರಕಾರಗಳು ಅರ್ಥ ಮಾಡಿಕೊಳ್ಳಲು ಹೋಗಲಿಲ್ಲ. ನಾನು ಈ ಸಮಯದಲ್ಲಿ ಮಾತನಾಡಬಾರದು, ಒಂದು ತಿಂಗಳು ಆಗಲಿ ಏನು ಮಾಡುತ್ತಾರೆ ನೋಡೋಣ ಅಂತಾ ಸರ್ಕಾರದ ನಿಲುವುಗಳನ್ನು ಗಮನಿಸುತ್ತಿದ್ದೆವು.

ನಮ್ಮ ಸಂವಿಧಾನದಲ್ಲಿ ಸರ್ಕಾರಗಳು ಪ್ರತಿಯೊಂದು ವರ್ಗದ ಜನರ ರಕ್ಷಣೆ ಮಾಡಬೇಕು ಎಂದು ಹೇಳಿದೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ವೃತ್ತಿಪರ ವರ್ಗದ ಕಾರ್ಮಿಕರ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಈ ವರ್ಗದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಕೆತ್ತನೆ ಕೆಲಸ ಮಾಡುವವರು, ಕುಸರಿ ಕೆಲಸ ಮಾಡುವವರು, ಕ್ಷೌರಿಕರು, ದರ್ಜಿಗಳು, ಕುಶಲ ಕರ್ಮಿಗಳು, ಬೀಡಿ ಕಟ್ಟುವವರು, ಹಮಾಲಿಗಳು, ಗಾಣಿಗರು, ಮೀನುಗಾರರು, ಕಸ ಗುಡಿಸುವವರು, ಮೆಕಾನಿಕ್ ಗಳು, ಹೋಟೆಲ್ ಸಪ್ಲೈಯರ್, ಹೋಟೆಲ್ ಕ್ಲೀನರ್, ಮದುವೆ ಮನೇಲಿ ಕೆಲಸ ಮಾಡುವವರು, ಭಟ್ಟರು, ಪೂಜಾರಿಗಳು, ಗುಜರಿ ವ್ಯಾಪಾರಿಗಳು ಸೇರಿದಂತೆ ರಾಜ್ಯದಲ್ಲಿ 1.63 ಕೋಟಿ ಅಸಂಘಟಿತ ವಲಯದ ವೃತ್ತಿಕೌಶಲ್ಯದವರು ಕೆಲಸ ಮಾಡ್ತಾ ಇದ್ದಾರೆ. ಇವರ ಬಗ್ಗೆ ನೀವಾಗಲಿ, ಪ್ರೈಮ್ ಮಿನಿಸ್ಟರ್ ಆಗಲಿ ಒಂದ್ಸಾರಿನಾದ್ರೂ ಯೋಚನೆ ಮಾಡಿದ್ದೀರಾ ಯಡಿಯೂರಪ್ಪನವರೇ? ಒಬ್ಬರಾದರೂ ಅವರ ಬಗ್ಗೆ ಬಾಯಿ ಬಿಟ್ಟಿದ್ದೀರಾ. ಅವರಿಗೆ ಕೆಲಸ ಇಲ್ಲ, ಆಚೆಗೆ ಹೋಗೋವಂಗಿಲ್ಲ. ಸರಕಾರದವರು ಒಂದು ಪೈಸೆ ಪರಿಹಾರನೂ ಕೊಟ್ಟಿಲ್ಲ. ಅವರ ಬದುಕೇನು, ಅವರ ಜೀವನ ಏನು, ಅವರಿಗೆ ಆದಾಯ ಎಲ್ಲಿಂದ ಬರಬೇಕು? ನೀವಾಗಲಿ, ನಿಮ್ಮ ಮಂತ್ರಿಗಳಾಗಲಿ, ಇಲ್ಲ ಅಧಿಕಾರಿಗಳಾಗಲಿ ಇಂಥ ವೃತ್ತಿಪರರು ಎಷ್ಟು ಜನ ಅವ್ರೆ, ಅವರೆಂಗೆ ಜೀವನ ಮಾಡ್ತಾ ಅವ್ರೆ, ಅವರೇನು ಬದುಕಿದ್ದಾರಾ? ಏನಾಗಿದ್ದಾರೆ ಅಂತ ವಿಚಾರಿಸಿದ್ದೀರಾ? ನಾನು ಈಗ ಅವರ ಪರ ಮನವಿ ಮಾಡುತ್ತಾ ಇದ್ದೀನಿ. ಕೊಡಿ ಅವರಿಗೆಲ್ಲ ತಿಂಗಳಿಗೆ 10,000 ರುಪಾಯಿ ಪರಿಹಾರಾನಾ. ಕೊರೊನಾ ಮುಗಿಯುವವರೆಗೆ. ನೀವು ಡೆವಲಪ್ ಮೆಂಟ್ ಪ್ರೋಗ್ರಾಮ್ ನಿಲ್ಸಿ. ಮತ್ತೆ ಸರ್ವಪಕ್ಷ ಸಭೆ ಕರೆಯಿರಿ. ಇಲ್ಲವೇ ವಿಧಾನಸಭೆ ಅಧಿವೇಶನ ಕರೆಯಿರಿ. ನೀವು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಕೈ ಎತ್ತಿ ಸಹಕಾರ ನೀಡುತ್ತೇವೆ. ನಿಮ್ಮ ಬಳಿ ಸರ್ಕಾರ ಇದೆ. ಯಾರು, ಯಾರು ಈ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಶಿಕ್ಷಕರು, ಪಂಚಾಯ್ತಿ ಸಿಬ್ಬಂದಿಗಳ ಮೂಲಕ ಮಾಹಿತಿ ಕಲೆ ಹಾಕಿ, ಅವರ ನೆರವಿಗೆ ಧಾವಿಸಿ. ಈ ವರ್ಗದವರು ದೇಶದ ನಾಗರೀಕರಲ್ಲವೇ? ಭಾರತದ ಬೆಳವಣಿಗೆಯಲ್ಲಿ ಇವರ ಪಾತ್ರ ಇಲ್ಲವೇ? ಇವರೇ ನಮ್ಮ ದೇಶಕ್ಕೆ ಬಲ ತುಂಬುತ್ತಿದರುವವರು. ಅವರ ಬಗ್ಗೆ ನಿಮಗೆ ಕಾಳಜಿ ಇಲ್ಲ ಎಂದರೆ ಏನೆನ್ನಬೇಕು?

Related posts

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

September 7, 2026
ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

September 7, 2026

ಈ ವಿಚಾರವಾಗಿ ನಾವು ರಾಜಕೀಯ ಮಾಡುತ್ತಲ್ಲ. ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಇಂತಹ ಅಸಂಘಟಿತ ಕೂಲಿ ಕಾರ್ಮಿಕರ ಧ್ವನಿಯಾಗಿ ನಾನು ಇಂದು ಧ್ವನಿ ಎತ್ತದಿದ್ದರೆ ಈ ಸ್ಥಾನದಲ್ಲಿ ಕೂರಲು ನನಗೆ ಅರ್ಹತೆ ಇರುವುದಿಲ್ಲ. ನೀವು ಈ ವರ್ಗದವರನ್ನು ಇವರನ್ನು ನರೇಗಾ ಯೋಜನೆಯಡಿ ಸೇರಿಸುತ್ತೀರಾ ಅಥವಾ ಅಸಂಘಟಿತ ವಲಯ ಕಾರ್ಮಿಕರಿಗಾಗಿಯೇ ವಿಶೇಷ ಯೋಜನೆ ಮಾಡುತ್ತೀರೋ ಅದು ನಿಮಗೆ ಬಿಟ್ಟದ್ದು. ಒಟ್ಟಿನಲ್ಲಿ ಅವರಿಗೆ ಸಹಾಯ ಆಗಬೇಕು ಅಷ್ಟೇ. ಇನ್ನೂ ಸರ್ಕಾರ ಬದುಕಿದೆ ಅಂದುಕೊಂಡಿದ್ದೇನೆ. ಯಾವ ರೈತನಿಗೂ ಸಂಕಷ್ಟ ಅನುಭವಿಸಲು ಬಿಡಲ್ಲ. ಚೈನ್ ಸಿಸ್ಟಮ್ ಮಾಡುತ್ತೀನಿ ಅಂತೆಲ್ಲಾ ಸರ್ಕಾರ ಹೇಳಿತ್ತು. ಹಣ್ಣು, ತರಕಾರಿ, ಸೊಪ್ಪು ಜಮಿನಿನಲ್ಲೇ ಹಾಳಾಗುತ್ತಿದೆ. ದಯವಿಟ್ಟು ಹೋಗಿ ರಕ್ಷಿಸಿ ಎಂದು ಕೇಳಿಕೊಂಡೆ. ಆದರೆ 12ನೇ ತಾರೀಖಿನವರೆಗೂ ಯಾವುದೇ ನೋಟಿಫಿಕೇಷನ್ ಹೊರಡಿಸಲಿಲ್ಲ. ಇವತ್ತಿನವರೆಗೂ ತಳಮಟ್ಟದಲ್ಲಿ ತೋಟಗಾರಿಕೆ ಅಧಿಕಾರಿಗಳು ಒಂದು ಅಥವಾ ಎರಡು ಕಡೆ ಮಾತ್ರ ಭೇಟಿ ಕೊಟ್ಟಿರುವುದು ಬಿಟ್ಟರೆ ಬೇರೇನೂ ಆಗಿಲ್ಲ. ನಾನು ಭತ್ತ, ರಾಗಿ, ಕಬ್ಬಿನ ಬಗ್ಗೆ ಮಾತನಾಡಲ್ಲ. ಅವುಗಳು ಒಂದು ತಿಂಗಳಾದರೂ ತಳ್ಳುವ ಅವಕಾಶವಿದೆ. ಆದರೆ ಹಣ್ಣು, ತರಕಾರಿ ಮತ್ತು ಸೊಪ್ಪು ಒಂದು ವಾರ ತಡವಾದರೂ ಕೊಳೆತು ಹೋಗುತ್ತದೆ. ಹೀಗಾಗಿ ನಾನು ನಮ್ಮ ಶಾಸಕರಿಗೆ ನಾಶವಾಗುತ್ತಿರುವ ತರಕಾರಿ, ಹಣ್ಣುಗಳನ್ನು ಖರೀದಿಸಿ, ಬಡವರಿಗೆ ಹಂಚಿ. ಆ ಮೂಲಕ ರೈತರ ನೆರವಿಗೆ ಬನ್ನಿ ಅಂತಾ ಕರೆ ನೀಡಿದೆ. ನಮ್ಮ ದಿನೇಶ್ ಗುಂಡೂರಾಯರು, ಕೃಷ್ಣಭೈರೇಗೌಡರು ಹಾಗೂ ಡಿ.ಕೆ. ಸುರೇಶ್ ಸೇರಿದಂತೆ ನಮ್ಮ ಅನೇಕ ಶಾಸಕರು ಜಮೀನಿಗೆ ಹೋಗಿ ರೈತರಿಂದ ಬೆಳೆ ಖರೀದಿಸುತ್ತಿದ್ದಾರೆ. ತೋಟಗಾರಿಕ ಸಚಿವರ ಕ್ಷೇತ್ರಕ್ಕೆ ಹೋಗಿ ತರಕಾರಿ ಖರೀದಿಸಿದ್ದೇವೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ವ್ಯಾಪಾರ ಮಾಡಿದ್ದೇವೆ. ನಾನು ಕಿವಿಲಿ ಕೇಳಿ, ಸಾಕ್ಷಿ ಇಲ್ಲದೇ ಮಾತನಾಡಲ್ಲ. ದೇಶದ ಕಣ್ಣು ತೆರೆಯುತ್ತಿರುವ ಮಾಧ್ಯಮಗಳು ಮಾಡಿರುವ ವರದಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನೋಡಿ ನಿಂಬೆಹಣ್ಣು, ಮಾವು, ತರಕಾರಿ, ಬಾಳೆಹಣ್ಣು, ಹೂವ ಸೇರಿದಂತೆ ಎಲ್ಲವೂ ಹೊಲದಲ್ಲೇ ಗೊಬ್ಬರವಾಗುತ್ತಿದೆ ಅಂತಾ ಮಾಧ್ಯಮಗಳೇ ಹೇಳುತ್ತಿವೆ. ನಾನು ಇದನ್ನು ಹೇಳುತ್ತಿಲ್ಲ. ನಾವು ಹೇಳಿದರೆ ವಿರೋಧ ಪಕ್ಷ ಟೀಕೆ ಮಾಡುತ್ತಿದೆ ಅಂತೀರಾ. ಮಾಧ್ಯಮಗಳು ಮಾಡಿರುವ ವರದಿಗಳನ್ನು ನೋಡಿ. ಸರ್ಕಾರದ ಘೋಷಣೆ ಶೇ.90 ರಷ್ಟು ಕಾರ್ಮಿಕರಿಗೆ ಸಿಕ್ಕಿಲ್ಲ, ಸಿಗುವುದಿಲ್ಲ ಅಂತಾ ಮಾಧ್ಯಮ ವರದಿ ಹೇಳುತ್ತಿದೆ. ಸರ್ಕಾರದ ಭರವಸೆ ಬಾಯಿ ಮಾತಿಗಷ್ಟೇ ಉಳಿದಿದೆ. ಬಡವರಿಗೆ ಆಹಾರ ಧಾನ್ಯ ತಲುಪಿಲ್ಲ, ಪಡಿತರದಾರರ ಸಮಸ್ಯೆ ಸೇರಿ ಅನೇಕ ಸಂಕಷ್ಟಗಳ ವರದಿಗಳು ಮಾಧ್ಯಮದಲ್ಲಿ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಆ ದೇವರೇ ಕಾಪಾಡಬೇಕು. ಹೀಗಾಗಿ ಈ ರೈತರಿಗೆ ಪರಿಹಾರ ನೀಡಿ. ಇಂದೇ ಹಣ ನೀಡಿ ಎಂದು ಹೇಳುತ್ತಿಲ್ಲ. ನಾಲ್ಕು ದಿನ ತಡವಾಗಿ ನೀಡಿ. ಆದರೆ ತೋಟಗಳಿಗೆ ಹೋಗಿ ವಿಡಿಯೋ ಮಾಡಿ, ಸಮೀಕ್ಷೆ ನಡೆಸಿ ದಾಖಲು ಮಾಡಿಕೊಳ್ಳಿ. ಇದರಲ್ಲಿ ಪಾರದರ್ಶಕತೆ ಬೇಕು. ಯಾವುದೇ ರೈತ ರಾತ್ರೋರಾತ್ರಿ ಬೆಳೆ ತಂದು ಮೋಸ ಮಾಡುವುದಿಲ್ಲ. ಅದು ಅವನಿಗೆ ಗೊತ್ತಿಲ್ಲ. ಆತನನ್ನು ಕಾಪಾಡಿ. ನಮ್ಮ ಕೃಷಿ ಸಚಿವರು ಸಮಸ್ಯೆ ಗಮನಕ್ಕೆ ತನ್ನಿ ಅಂತಾರೆ. ಯಾವ ನಂಬರ್ ನೀಡಿದ್ದೀರಿ ಸ್ವಾಮಿ, ಸಮಸ್ಯೆನಾ ನಿಮ್ಮ ಮುಂದೆ ತಂದಿಡಲು. ಈ ಹೊತ್ತಲ್ಲಿ ನೀವು ಅವರ ಬಳಿ ಹೋಗಿ ಸಮಸ್ಯೆ ಆಲಿಸಬೇಕು. ಅವರು ನಿಮ್ಮ ಬಳಿ ಬರಲು ಆಗುತ್ತಾ? ಈ ಪರಿಸ್ಥಿತಿಯಲ್ಲಿ ರೈತ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನೀವು ಈವರೆಗೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ನಾನು ನಿಮ್ಮನ್ನು ದೂಷಿಸುತ್ತಿಲ್ಲ. ನಿಮ್ಮ ಕಣ್ಣು, ಕಿವಿ ತೆಗಿರಿ. ನಿಮ್ಮ ಸರ್ಕಾರ ರಸ್ತೆಯಲ್ಲಿ ಇರಬೇಕು. ತೋಟದಲ್ಲಿ ಇರಬೇಕು.

ಇನ್ನು ಶಿಕ್ಷಣ ಕ್ಷೇತ್ರ. ಸಚಿವ ಸುರೇಶ್ ಕುಮಾರ್ ಅವರು ಪ್ರಜ್ಞಾವಂತರು ಎಂದು ನಂಬಿದ್ದೇನೆ. ನಿನ್ನೆ ಸಭೆ ನಡೆಸಿ ಒಂದು ಹೇಳಿಕೆ ನೀಡಿದ್ದಾರೆ. ಜೂನ್ ವರೆಗೂ ಶಾಲೆ ಕಾಲೇಜು ತೆರೆಯುವಂತಿಲ್ಲ. ಆನ್ ಲೈನ್ ಅಲ್ಲೇ ಪಾಠ ಮಾಡಿ ಅಂತಾ. ಸ್ವಾಮಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಹೇಗ್ರಿ ಸಿಗುತ್ತೇ? ಅವರಿಗೆ ಲ್ಯಾಪ್ ಟಾಪ್ ಕೊಟ್ಟೀದ್ದೀರಾ? ಅವರಿಗೆ ಅಂತರ್ಜಾಲ ಸಂಪರ್ಕ ಇದೆಯಾ? ಅದನ್ನು ಬಳಸಲು ಅವರಿಗೆ ತಿಳುವಳಿಕೆ ಇದೆಯಾ? ಆನ್ ಲೈನ್ ನಲ್ಲಿ ಪರೀಕ್ಷೆಗೆ ಹೇಗೆ ನೋಂದಾವಣಿ ಮಾಡಿಕೊಳ್ಳಲು ಹೇಳುತ್ತೀರಾ, ಹಳ್ಳಿ ಜನ ಹೇಗೆ ಮಾಡ್ತಾರೆ? ಜನಧನ್ ಅಕೌಂಟ್ ಎಲ್ಲರೂ ಮಾಡಲು ಆಗಿಲ್ಲ. ಅವರಿಗೆ ದುಡ್ಡು ಬಂತೋ ಇಲ್ವೋ ಗೊತ್ತಿಲ್ಲ, ದುಡ್ಡು ಹಾಕಿದ ಮೇಲೆ ಅದನ್ನು ಪಡೆಯಲು ಪಾಪ ಜನರಿಗೆ ಗೊತ್ತಿಲ್ಲ. ತಮ್ಮ ಸ್ವಾಭಿಮಾನದ ಬದುಕಿನಿಂದ ದೇಶವನ್ನು ಕಟ್ಟುತ್ತಿರುವ ಈ ಅಸಂಘಟಿತ ವರ್ಗದ ಕಾರ್ಮಿಕರಿಗೆ ನೀವು 10 ಸಾವಿರ ನೀಡುವ ಒಂದು ಯೋಜನೆ ಘೋಷಣೆ ಮಾಡಲು ಸಾಧ್ಯವಾಗಲಿಲ್ಲವಲ್ಲಾ ಮುಖ್ಯಮಂತ್ರಿಗಳೇ? ನಾನು ಈ ಜನರ ಪರವಾಗಿ ನಿಮ್ಮ ಮುಂದೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಇವರು ಹಿಂದುಳಿದ ವರ್ಗದ ಜನ ಅಲ್ಲ. ನಮ್ಮನ್ನು ಮುಂದುವರೆಯುವಂತೆ ಮಾಡುತ್ತಿರುವ ಜನ. ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಈ ಜನರ ಬಗ್ಗೆ ಕಾಳಜಿ ವಹಿಸಲಿಲ್ಲ ಅಂದರೆ ಈ ಸರ್ಕಾರ ಯಾಕಿರಬೇಕು? ನನಗೆ ಒಂದು ಪ್ರಶ್ನೆ ಕಾಡುತ್ತಿದೆ. ಕೊರೋನಾ ಬಗ್ಗೆ ಐಎಂಆರ್ ಸಿ ಅವರು ಅಂಕಿ-ಸಂಖ್ಯೆಗಳನ್ನು ಯಾಕೆ ನೀಡುತ್ತಿಲ್ಲ? ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಸಚಿವರ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಏನೇ ಇದ್ದರೂ ಸುರೇಶ್ ಕುಮಾರ್ ಅವರನ್ನು ಕೇಳುವಂತ ಪರಿಸ್ಥಿತಿ ಬಂದಿದೆ. ಪ್ರತಿ ದಿನ ಅವರು ಸಂಖ್ಯೆಯನ್ನು ಪ್ರಕಟಿಸಬೇಕು. ವಿಶ್ವ ಆರೋಗ್ಯ ಸಂಸ್ಥೆ 10 ಲಕ್ಷ ಜನಕ್ಕೆ 10 ಸಾವಿರ ಪರೀಕ್ಷೆ ಮಾಡಿ ಅಂತಾರೆ. ನಮ್ಮಲ್ಲಿ ಎಷ್ಟಾಗುತ್ತಿದೆ? ಯಾರು ಮಾಡುತ್ತಿದ್ದಾರೆ? ಡೋರ್ ಟು ಡೋರ್ ಪರೀಕ್ಷೆ ನಡೆಯುತ್ತಿಲ್ಲ. ಪಾರದರ್ಶಕತೆ ಇಲ್ಲವೇ ಇಲ್ಲ. ವೈದ್ಯರಿಗೆ 50 ಲಕ್ಷ ರುಪಾಯಿ ವಿಮೆ ಘೋಷಿಸಿದ್ದೀರಿ. ಅದು ಸರಿಯಾಗಿದೆ. ಅದೇ ರೀತಿ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಯಾಕೆ ವಿಮೆ ಸೌಲಭ್ಯವಿಲ್ಲ? ಅವರೂ ಕೂಡ ಹಗಲಿರುಳು ನಮಗಾಗಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೂ 25 ಅಥವಾ 50 ಲಕ್ಷ ವಿಮೆ ನೀಡಿ. ನಾವು ಬೆಂಗಳೂರು ಹಾಲು ಒಕ್ಕೂಟದ ಮೂಲಕ ಅವರಿಗೆ ತಲಾ 3 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಅವರಿಗೆ ಸರ್ಕಾರದಿಂದ 5 ಸಾವಿರವನ್ನೇ ನೀಡಿ. ಆಶಾ ಕಾರ್ಯಕರ್ತೆಯರ ಜತೆ ಅಂಗನವಾಡಿ ಕಾರ್ಯಕರ್ತೆಯರಿಗೂ ವಿಶೇಷ ಪ್ಯಾಕೇಜ್ ನೀಡಿ. ಈಗ ಇವರ ಸೇವೆ ಮಹತ್ವದ್ದಾಗಿಲ್ಲವೇ? ಇನ್ನು ಅನೇಕ ವಿಚಾರಗಳಿವೆ. ವಿರೋಧ ಪಕ್ಷದ ನಾಯಕರೂ ಕೂಡ ಅನೇಕ ಮಾಹಿತಿ ಪಡೆದುಕೊಂಡಿದ್ದಾರೆ. ನಮ್ಮ ಪಕ್ಷದ ಪರವಾಗಿ ಅವರಿಗೂ ಒಂದಷ್ಟು ಮಾಹಿತಿ ನೀಡಿದ್ದೇವೆ. ನಾನು ಮೂರು ಬಾರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಅವೆಲ್ಲವನ್ನೂ ಮುಂದೆ ಬಿಚ್ಚಿಡುತ್ತೇನೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಕಾಪಾಡಬೇಕು ಎಂದಷ್ಟೇ ಪ್ರಧಾನಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Tags: DK Shivakumar
ShareTweetSendShare
Join us on:

Related Posts

aravinda-avengers-wins-bz-cup-media-cricket-trophy

ಅರವಿಂದ ಅವೇಂಜರ್ಸ್‌ಗೆ ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿ

by admin
September 7, 2026
0

ಬೆಂಗಳೂರು: ಅಮೋಘ ಆಟ ಪ್ರದರ್ಶಿಸಿದ ಅರವಿಂದ ಅವೇಂಜರ್ಸ್ ತಂಡವು ಬಿ ಝೆಡ್ ಕಪ್ ಮೀಡಿಯಾ ಕ್ರಿಕೆಟ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 9ಡ್ರೀಮ್ಸ್ ಸಂಸ್ಥೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ...

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವುದು ಗ್ಯಾರಂಟಿ: ಶ್ರೀರಾಮುಲು ಸ್ಫೋಟಕ ಭವಿಷ್ಯ

by Shwetha
September 7, 2026
0

ಬಳ್ಳಾರಿ: ಕೆಪಿಎಸ್‌ಸಿ ಹುದ್ದೆ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಶುರುವಾಗಿದೆ. ಈ ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡವಿದೆ...

ಅಹಿಂದ ಕಾಂಗ್ರೆಸ್ ನ ಸ್ವತ್ತು,ವಿಪಕ್ಷಗಳು ಯಾವ ಬಾಂಬ್ ಬೇಕಾದರೂ ಸಿಡಿಸಲಿ, ನಾನು ಆತುರದಲ್ಲಿಲ್ಲ: ಪ್ರಿಯಾಂಕ್ ಖರ್ಗೆ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್

ಅಹಿಂದ ಕಾಂಗ್ರೆಸ್ ನ ಸ್ವತ್ತು,ವಿಪಕ್ಷಗಳು ಯಾವ ಬಾಂಬ್ ಬೇಕಾದರೂ ಸಿಡಿಸಲಿ, ನಾನು ಆತುರದಲ್ಲಿಲ್ಲ: ಪ್ರಿಯಾಂಕ್ ಖರ್ಗೆ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್

by Shwetha
September 7, 2026
0

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಬ್ಬರದ ತಿರುಗೇಟು ನೀಡಿದ್ದಾರೆ. ವಿಪಕ್ಷಗಳು...

ಹೆಲಿಕಾಪ್ಟರ್ ನಲ್ಲಿ ಓಡಾಡುವವರು ಪ್ರಜಾಸೇವಕರಾಗಲು ಸಾಧ್ಯವೇ?ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸರ್ಕಾರಕ್ಕೆ ಮನುಷ್ಯತ್ವ ಇದೆಯೇ?:ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ

ಹೆಲಿಕಾಪ್ಟರ್ ನಲ್ಲಿ ಓಡಾಡುವವರು ಪ್ರಜಾಸೇವಕರಾಗಲು ಸಾಧ್ಯವೇ?ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸರ್ಕಾರಕ್ಕೆ ಮನುಷ್ಯತ್ವ ಇದೆಯೇ?:ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ

by Shwetha
September 7, 2026
0

ಗಂಗಾವತಿ: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಮುಖ್ಯಮಂತ್ರಿಗಳ ನಡವಳಿಕೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿ ಚಲೋ...

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

by Shwetha
September 7, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸ್ವಚ್ಛತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೀಡಿದ್ದ ಖಡಕ್ ಹೇಳಿಕೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram