ರಾಮನಗರ: ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ತಲೆನೋವು ಶುರುವಾಗಿದೆ. ಹೀಗಾಗಿ ಅವರ ರಾಜೀನಾಮೆಗೆ ಬಿಜೆಪಿ ಹಾಗೂ ಜೆಡಿಎಸ್ ಪಟ್ಟು ಹಿಡಿದಿವೆ.
ಈ ಮಧ್ಯೆ ಕಾಂಗ್ರೆಸ್ ನ ಕೆಲವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಈಗ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬುವುದು ಅವರ ಮಾತುಗಳಿಂದ ತಿಳಿದು ಬರುತ್ತಿದೆ.
ಸಂತೆಕೋಡಿಹಳ್ಳಿ ಬಳಿ ಮುಸ್ಲಿಂ ಸಮುದಾಯದ (Muslim Community) ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ಆಗ್ತಿದೆ. ಈಗ ಮಾತಾಡಿದ್ರೆ ಮಾಧ್ಯಮಗಳು ವಿವಿಧ ರೀತಿಯಲ್ಲಿ ಬಿಂಬಿಸ್ತವೆ.
ಸದ್ಯ ನಾನು ಇಲ್ಲಿ ಡಿಸಿಎಂ (DCM) ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ ಎಂದಿದ್ದಾರೆ. ಈ ಮಾತು ಗಮನಿಸಿದರೆ, ಅವರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿರುವುದು ಬಹಿರಂಗವಾಗುತ್ತಿದೆ. ಈ ಹೇಳಿಕೆಯನ್ನು ಹಲವರು ವಿರೋಧಿಸುತ್ತಿದ್ದಾರೆ.