ದಕ್ಷಿಣ ಕನ್ನಡದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಲು ಕಾರಣವಾಗಿರುವ ಸೋಂಕಿನ ಮೂಲ ಪತ್ತೆಗೆ ಮತ್ತಷ್ಟು ಕಾಲಾವಕಾಶ ಬೇಕೆಂದು ತಜ್ಞ ವೈದ್ಯರ ತಂಡ ತಿಳಿಸಿದೆ. ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹಲವು ರೋಗಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿನ ಮೂಲ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಜನರು ಆತಂಕಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜನರಲ್ಲಿ ಸಂಶಯ ನಿವಾರಣೆ ಅಗತ್ಯವಿರುವುದರಿಂದ, ಮತ್ತಷ್ಟು ವಿವರಣೆಗಳೊಂದಿಗೆ ಆದಷ್ಟು ಬೇಗ ಸೋಂಕಿನ ಮೂಲ ಪತ್ತೆ ಹಚ್ಚಲು ಆದೇಶಿಸಿದ್ದರು. ಆದರೆ ತಜ್ಞ ವೈದ್ಯರ ತಂಡ ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ತನಿಖಾ ವರದಿ ಜಿಲ್ಲಾಡಳಿತದ ಕೈಸೇರುವುದು ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ತಜ್ಞರ ವರದಿ ಸೋಮವಾರ ಕೈ ಸೇರಬಹುದು ಎಂದು ಈ ಮೊದಲು ಹೇಳಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಜ್ಞ ವೈದ್ಯಕೀಯ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದು, ಸಭೆಯಲ್ಲಿ ತಜ್ಞರ ತಂಡ ಇನ್ನಷ್ಟು ಕಾಲಾವಕಾಶ ಕೇಳಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತನಾಡಿ ಬಂಟ್ವಾಳ, ಫಸ್ಟ್ ನ್ಯೂರೋ ಹಾಗೂ ಬೋಳೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 1000 ಕ್ಕೂ ಹೆಚ್ಚಿನ ಜನರ ಗಂಟಲ ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 17 ಪ್ರಕರಣಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಕೂಡ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕೇರಳದ ಹಲವಾರು ಮಂದಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದು, ಕೇರಳ ಸರಕಾರವನ್ನು ಸಂಪರ್ಕಿಸಿ ಅವರ ಗಂಟಲ ದ್ರವ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿದ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಹಬ್ಬ…ಶಿವಣ್ಣ, ಕಿಚ್ಚ ಸಾಥ್
ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್..ತೆಲುಗು ಚಿತ್ರರಂಗದ ಟ್ರೆಂಡಿಂಗ್ ಮ್ಯೂಸಿಕ್ ಡೈರೆಕ್ಟರ್. ಆರ್ಯ', 'ಬನ್ನಿ, 'ಆರ್ಯ 2', 'ಜುಲಾಯಿ', 'ಇದ್ದಿರಮ್ಮಾಯಿಲತೋ', 'ಸನ್ ಆಫ್ ಸತ್ಯಮೂರ್ತಿ', ರಂಗಸ್ಥಳಂ, ಇತ್ತೀಚಿಗೆ...