ಪರೋಕ್ಷವಾಗಿಯೂ ʼಅತ್ಯಾಚಾರ ಸಂತ್ರಸ್ತೆʼಯ ಗುರುತು ಬಹಿರಂಗ ಪಡಿಸಬಾರದು: ಮಾಧ್ಯಮಗಳಿಗೆ ನ್ಯಾಯಾಲಯದ ಖಡಕ್ ಸೂಚನೆ..!
ಮುಂಬೈ: ಅತ್ಯಚಾರ –ಪ್ರಕರಣಗಳ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮುಂಬೈ ಹೈಕೋರ್ಟ್
ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಹೊರಡಿಸಿದೆ. ಮುದ್ರಣ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾರ್ವಜನಿಕ ಮಾಧ್ಯಮಗಳನ್ನ ನಿರ್ಬಂಧಿಸಲು ಕ್ರಮ ತೆಗೆದುಕೊಂಡಿದೆ. ಅದರಂತೆ ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡು, ಅತ್ಯಾಚಾರ ಸಂತ್ರಸ್ತೆಯ ಗುರುತನ್ನ ‘ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ’ ಬಹಿರಂಗಪಡಿಸ ಬಲ್ಲ ಮಾಹಿತಿಯನ್ನ ಪ್ರಕಟಿಸದಂತೆ ಖಡಕ್ಕಾಗಿ ಸೂಚಿಸಿದೆ.
ತಾಯಿಯಿಲ್ಲದ ಅಪ್ರಾಪ್ತೆ ಮೇಲೆ ಮೃಗೀಯ ವರ್ತನೆ : ಸಾಮೂಹಿಕ ಅತ್ಯಾಚಾರ..!
ಅತ್ಯಾಚಾರ ಸಂತ್ರಸ್ತೆಯ ಹೆಸರು ಅಥವಾ ಗುರುತನ್ನ ಬಹಿರಂಗಪಡಿಸಬಾರದು ಎಂದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಂಗೀತಾ ಎಂಬಾಕೆ (ಅತ್ಯಾಚಾರ ಸಂತ್ರಸ್ತೆಯ ತಾಯಿ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ.ವಿ.ನಲವಡೆ ಮತ್ತು ನ್ಯಾಯಮೂರ್ತಿ ಎಂ.ಜಿ.ಸೇವಲಿಕರ್ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿ, ಈ ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದೆ ನೀಚ ತಂದೆ
ಗುರುತು ಬಹಿರಂಗ ಪಡಿಸುವುದರಿಂದ ಸಂತ್ರಸ್ತೆ ದೈಹಿಕವಾಗಿ ಮಾತ್ರವಲ್ಲ, ಮಾನಸಿಕಯೂ ಆಘಾತಕ್ಕೂ ಒಳಗಾಗುತ್ತಾಳೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಅಲ್ಲದೇ ಭಾರತೀಯ ದಂಡ ಸಂಹಿತೆಯ 228-ಎ ಕಲಮು 376, 376-ಎ, 376-ಬಿ, 376-ಸಿ, 376-ಡಿ ಅಥವಾ 376-ಇ ಭಾರತೀಯ ದಂಡ ಸಂಹಿತೆಯೂ ಸಂತ್ರಸ್ತೆಯ ಗುರುತನ್ನ ಬಹಿರಂಗಪಡಿಸಬಾರದು ಎಂದು ನ್ಯಾಯಾಲಯ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








