ADVERTISEMENT
Monday, May 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕುಡುಕರನ್ನು ಹೀಯಾಳಿಸುವ ಅಥವಾ ಬಯ್ಯುವ ನೈತಿಕತೆ ನಮಗಿದೆಯೇ?

admin by admin
May 13, 2020
in Marjala Manthana, Newsbeat, Samagra karnataka, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ನಾನಿರುವ ವಿದ್ಯಾಪೀಠ ವಾರ್ಡ್ ನ ಶ್ರೀನಿವಾಸ ನಗರದ ಸುತ್ತಮುತ್ತ ಸುಮಾರು ಕನಿಷ್ಟ ಹತ್ತು ಎಂಆರ್ಪಿ ಔಟ್ ಲೆಟ್ ಗಳಿವೆ. ಹನುಮಂತ ನಗರದ ಗಣೇಶ ಭವನ ಹಿಂಭಾಗ, ಮಾರುತಿ ಸರ್ಕಲ್, 80 ಫೀಟ್ ರಸ್ತೆಯ ಜಂಕ್ಷನ್ ಸಮೀಪ. ಹಳೇ ಮೀನಾಕ್ಷಿ ಆಸ್ಪತ್ರೆಯಿಂದ ಕೊಂಚ ಕೆಳಗೆ, ಅವಲಹಳ್ಳಿ ಮುಖ್ಯರಸ್ತೆಯಲ್ಲಿ 100 ಮೀಟರ್ ಅಂತರದಲ್ಲೇ ಎರಡು ಔಟ್ ಲೆಟ್ ಮಳಿಗೆಗಳು, ಕತ್ರಗುಪ್ಪೆ ಮುಖ್ಯ ರಸ್ತೆಯಲ್ಲಿ ಎರಡು, ಹೊಸಕೆರೆಹಳ್ಳಿ ಸರ್ಕಲ್ ಹತ್ತಿರ ಎದುರು ಬದುರಲ್ಲೇ ಎರಡು ಔಟ್ ಲೆಟ್ ಗಳಿವೆ. ಇಲ್ಲೆಲ್ಲಾ ಕನಿಷ್ಟ 500 ಮೀಟರ್ ಉದ್ದದ ಕ್ಯೂ ಮಧ್ಯಾಹ್ನದ ವರೆಗೂ ಇತ್ತಂತೆ. ಶ್ರಿನಿವಾಸ ನಗರ ಮುಖ್ಯ ರಸ್ತೆಯ ಪ್ರಮುಖ ಔಟ್ ಲೆಟ್ ಮಧುಶಾಲಾದಲ್ಲಿ ಮಧ್ಯಾಹ್ನಕ್ಕೂ ಮೊದಲೇ ಮದ್ಯ ಖಾಲಿಯಾಯ್ತಂತೆ.

ಜನರಲ್ಲಿ ಈ ಮಟ್ಟದ ಮದ್ಯದಾಹ ಹೆಚ್ಚಾಗಲು ಯಾರು ಕಾರಣ? ಸರ್ಕಾರಗಳೇ ಅಲ್ಲವೆ? ಎಲ್ಲಾ ವೈನ್ ಶಾಪ್ ಗಳ ಮುಂದೆ ನಿಂತಿದ್ದ ಜನರಲ್ಲಿ ಸಾಮಾಜಿಕ ಅಂತರ ಅನ್ನುವ ಅಂಶವೇ ಇರಲಿಲ್ಲ. ಏನಾದರೂ ನಾಳೆ ಇವರಿಂದ ಕರೋನಾ ಸೋಂಕು ಹಂಚಿಕೆಯಾದರೆ ಅದಕ್ಕೆ ನೇರ ಕಾರಣ ಸರ್ಕಾರವೇ ಆಗುತ್ತದೆ. ಅಂದರೆ ಸರ್ಕಾರ ಈಗ ವೈನ್ ಶಾಪ್ ತೆರೆಯಲು ಅನುಮತಿ ಕೊಟ್ಟಿದೆ ಅಂತಲ್ಲ. ಮೊದಲು ತಾರ್ಕಿಕ ಕಾರಣಗಳೇ ಇಲ್ಲದೇ ವೈನ್ ಶಾಪ್ ಗಳನ್ನು ಮುಚ್ಚಿದ್ದು ಇದಕ್ಕೆ ಕಾರಣ. ಈ ಮಟ್ಟದ ಹಪಿಹಪಿತನ ಅವರಲ್ಲಿ ಉತ್ತೇಜನಗೊಳ್ಳಲು ವೈನ್ ಶಾಪ್ ಬಂದ್ ಆಗಿದ್ದೇ ಕಾರಣ. ಬೇಕಿದ್ದರೆ ಯಾರಾದರೂ ಮನಃಶಾಸ್ತ್ರಜ್ಞರ ಅಭಿಪ್ರಾಯ ಕೇಳಿ ನೋಡಿ.

Related posts

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

May 18, 2026
ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

May 17, 2026

ವೈನ್ ಶಾಪ್ ಗಳು ಸಹ ತರಕಾರಿ ದಿನಸಿ ಅಂಗಡಿಗಳಂತೆ ತೆರದಿದ್ದರೆ ಜನರು ಈ ಮಟ್ಟಿಗೆ ಹುಚ್ಚರಂತೆ ಮೂರ್ಖರಂತೆ ಬೆಳ್ಳಂಬೆಳಿಗ್ಗೆ ಸರತಿಯಲ್ಲಿ ನಿಲ್ಲುವ ಪ್ರಮೆಯ ಬರುತ್ತಿರಲಿಲ್ಲ. ಮದ್ಯದಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ ಎಂದು ಆಚಾರ ಹೇಳುವ ಹಲವರು ಇಂದು ಕ್ಯೂನಲ್ಲಿ ನಿಂತಿದ್ದರು. ಮದ್ಯ ಮುಕ್ತ ಸಮಾಜ ಮಾಡಬೇಕು ಅಂತ ಬೊಂಬ್ಡಿ ಬಡಿದುಕೊಳ್ಳುವ ಬಹಳಷ್ಟು ಜನರು ಶುದ್ಧ ಅವಕಾಶವಾದಿಗಳು. ಅಂತವರು ಕೆಲವರು ನನ್ನ ಸ್ನೇಹ ವಲಯದಲ್ಲಿದ್ದಾರೆ.

ಇನ್ ಫ್ಯಾಕ್ಟ್ ಹೆಚ್ಚಾಗಿ ಮಡಿವಂತ ಬ್ರಾಹ್ಮಣರೇ ವಾಸಿಸುವ ವಿದ್ಯಾಪೀಠ ಶ್ರೀನಿವಾಸ ನಗರ, ಹನುಮಂತನಗರ, ಗಿರಿನಗರ, ಬ್ಯಾಂಕ್ ಕಾಲೋನಿಗಳಲ್ಲೇ ಇಷ್ಟು ಎಂಆರ್ಪಿ ವೈನ್ ಶಾಪ್ ಗಳು ತಲೆ ಎತ್ತಿದ್ದಾಗ ಯಾರಾದರೂ ಪ್ರಶ್ನೆ ಮಾಡಿದರಾ? ಎಂಆರ್ಪಿ ಔಟ್ ಲೆಟ್ ಗಳನ್ನು ಹೊರತುಪಡಿಸಿದ ಖಾಸಗಿ ವೈನ್ ಶಾಪ್, ಬಾರ್ ಗಳ ಸಂಖ್ಯೆ ಬೇರೆ ಇದೆ. ಇವತ್ತು ಅವು ತೆರೆದಿಲ್ಲ. ಸಾಲು ಸಾಲಾಗಿ ವೈನ್ ಸ್ಟೋರ್ ಓಪನ್ ಆಗುವ ನಿಮ್ಮ ಪ್ರಜ್ಞಾವಂತಿಕೆ ಮಣ್ಣು ತಿನ್ನುತ್ತಿತ್ತಾ? ಇವತ್ತಿಗೆ ತಪ್ಪು ಎಂದರೆ ಅವತ್ತಿಗೂ ತಪ್ಪೇ ಆಗಿತ್ತಲ್ಲವೇ. ಅವತ್ತಿಗೆ ಅದು ಸಮಾಜದ ಒಪ್ಪಿತ ವ್ಯಸನವಾಗಿತ್ತಾದರೇ ಇವತ್ತೇಕೆ ಇಲ್ಲ?

ಇನ್ನು 40 ದಿನ ಎಣ್ಣೆ ಬಿಟ್ಟಿದ್ದ ಜನರು ಚಟ ಮುಕ್ತರಾಗುವ ಹೊತ್ತಿಗೆ ಎಣ್ಣೆ ಅಂಗಡಿ ತೆರೆದಿದ್ದೂ ವಾಸ್ತವದಲ್ಲಿ ತಪ್ಪೇ ನಿಜ. ಆದರೆ ಬೆಳಗಿನಿಂದಲೂ ನಮ್ಮ ಸಂವೇದನೆ ಸತ್ತ ನ್ಯೂಸ್ ಚಾನೆಲ್ ಗಳು ಮೇಲಿಂದ ಮೇಲೆ ಎಣ್ಣೆ ಅಂಗಡಿಗಳ ನೂಕು ನುಗ್ಗಲು ತೋರಿಸಿ ಮನೆಯಲ್ಲಿದ್ದ ಮದ್ಯಪ್ರಿಯರನ್ನು ಬೀದಿಗಿಳಿಸಿದ್ದು ಯಾರಾದರೂ ಒಪ್ಪಲು ಸಾಧ್ಯವೇ? ಮದ್ಯ ವ್ಯಸನಿ ಗಟ್ಟಿ ಪ್ರತಿಜ್ಞೆ ಮಾಡಿದ್ದವರೂ ಸಹ ಎಣ್ಣೆ ಅಂಗಡಿಗಳತ್ತ ನುಗ್ಗಿದ್ದು ಸುದ್ದಿ ವಾಹಿನಿಗಳ ವರದಿ ಫಲಶೃತಿಯೇ ಅಲ್ಲವಾ? ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಈಗ ಸದ್ಯದ ಸರಕಾರಿ ಆದಾಯ ಅಬಕಾರಿ ಮಾತ್ರವೇ. ಆ ನಿಟ್ಟಿನಲ್ಲಿ ನೋಡುವುದಾದ್ರೆ ಯಾವುದೇ ರಾಜ್ಯ ಸರ್ಕಾರಗಳದ್ದೂ ಇದರಲ್ಲಿ ತಪ್ಪಿಲ್ಲ. ಕೇಂದ್ರ ಸರ್ಕಾರ ಮದ್ಯದಂಗಡಿ ಕ್ಲೋಸ್ ಮಾಡಲೇಬೇಕು ಎಂದು ಅಪ್ಪಣೆ ಹೊರಡಿಸದಿದ್ದರೆ ಇಷ್ಟರಲ್ಲಾಗಲೇ ಬಹುತೇಕ ರಾಜ್ಯಗಳಲ್ಲಿ ವೈನ್ ಮಾರಾಟ ಶುರುವಾಗಿರುತ್ತಿತ್ತು. ಹಾಗೊಂದು ವೇಳೆ ರಾಜ್ಯ ಸರ್ಕಾರಗಳು ವಿವೇಚನೆಯಿಂದ ಯೋಚಿಸಿದ್ದಿದ್ದರೆ ದಿನ ಬಿಟ್ಟು ದಿನ ಮಾರಾಟ ಮಾಡುವುದೋ, ಆನ್ ಲೈನ್ ನಲ್ಲಿ ಮಾರುವುದೋ, ಸಮಯ ನಿಗದಿ ಮಾಡಿ ಮಾರಾಟಕ್ಕೆ ಅನುಮತಿ ಕೊಡುವುದೋ ಮಾಡುತ್ತಿದ್ದವು. ಆಗ ಈ ಪರಿಸ್ಥಿತಿ ಇರುತ್ತಿರಲಿಲ್ಲ.

ಇವತ್ತು ಒಂದೇ ದಿನದಲ್ಲಿ ರಸ್ತೆಗಿಳಿದ ವಾಹನಗಳ ಪ್ರಮಾಣ ಕಳೆದ 40 ದಿನಗಳ ಪ್ರಮಾಣದ ಮುಕ್ಕಾಲುವಾಸಿ. ಅವರಲ್ಲಿ ಬಹುಪಾಲು ಜನರು ಬೀದಿಗೆ ಇಳಿದಿದ್ದೇ ಎಣ್ಣೆ ಖರೀದಿಗೆ. ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ ಎಂದು ಖಂಡಿತಾ ಅನ್ನಿಸುತ್ತಿಲ್ಲ.

ಅಯ್ಯಾ ಸುದ್ದಿ ವಾಹಿನಿಗಳ ಔಟ್ ಪುಟ್ ನಿರ್ಧರಿಸುವ ಮಹಾನುಭಾವರಾ! ನಿಮ್ ಯೋಗ್ಯತೆಗಿಷ್ಟು ಬೆಂಕಿ ಬೀಳಾ! ಇವತ್ತು ನಿಮ್ಮ ಜರ್ನಲಿಸಂ ಎಥಿಕ್ಸ್ ಅನ್ನು ಮನೆಯ ತಿಜೋರಿಯಲ್ಲಿಟ್ಟು ಕೀಲಿ ಜಡಿದು ಕಚೇರಿಗೆ ಬಂದ್ರಾ? ಎಂಆರ್ಪಿ ಔಟ್ ಲೆಟ್ ಮುಂದೆ ಕ್ಯೂನಲ್ಲಿ ನಿಂತ ಮಹಿಳೆಯರನ್ನು ಜೂಮ್ ಮಾಡಿ ಮಾಡಿ ತೋರಿಸ್ತೀರಲ್ಲ ನಿಮಗೆ ಕನಿಷ್ಟ ಕಾಮನ್ ಸೆನ್ಸ್ ಇದ್ಯಾ? ಕೆಲವು ವಾಹಿನಿಗಳಲ್ಲಂತೂ ಎಣ್ಣೆ ಖರೀದಿಗೆ ಬಂದ ಹುಡುಗಿಯರದ್ದೇ ಸುದ್ದಿ. ಇನ್ನು ಕೆಲವು ಕ್ಯಾಮರಾಮನ್ ಅವಿವೇಕಿಗಳು ಬಿಸಿಲೆಂದು ಚಡ್ಡಿ ಮಿಡಿ ತೊಟ್ಟು ಬಂದಿದ್ದ ಯುವತಿಯರ ಸೊಂಟವನ್ನೇ ಜೂಮ್ ಮಾಡಿ ತೋರಿಸುತ್ತಿದ್ದರು. ಈ ಔಟ್ ಪುಟ್ ಹೆಡ್ ಗಳೆಂಬ ಹೆಡ್ಡರು ಅದನ್ನೇ ರಿಪೀಟ್ ಆಗಿ ತೋರಿಸುತ್ತಿದ್ದರು. ನೀವಿಂದು ಕೆಲಸ ಮಾಡುವ ಮಾಧ್ಯಮದಲ್ಲೇ ಈಗೊಂದು ವರ್ಷದ ಹಿಂದೆತನಕ ನಾನು ಕೆಲಸ ಮಾಡಿದ್ದೇನೆ. ಈಗೊಂದು ವರ್ಷದಲ್ಲಿ ಇಷ್ಟೊಂದು ಗತಿಗೆಟ್ಟುಬಿಡ್ತಾ ಎಲೆಕ್ಟ್ರಾನಿಕ್ ಮೀಡಿಯಾ!

ಮಹಿಳಾ ಸಮಾನತೆಯ ಬಗ್ಗೆ ಪುಂಕಾನುಪುಂಕವಾಗಿ ಚರ್ವಿತ ಚರ್ವಣ ಪುಂಗಿ ಊದುವ ಸಂಪಾದಕ ಮಹಾಶಯರು ಈಗೇನು ಹೇಳ್ತಾರೆ? ಕುಡುಕರಲ್ಲ ಈ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು. ಮಾಧ್ಯಮದ ಮನೆಯಲ್ಲಿ ಕುಳಿತ ನಿಮ್ಮಂತ ಆಶಾಡಭೂತಿಗಳಿಂದ ಸಮಾಜ ಹಾಳಾಗುತ್ತಿವೆ. ಇಲ್ಲಿ ವರದಿಗಾರರ ತಪ್ಪಿಲ್ಲ; ಅವರು ತಮಗೆ ಹಾಕಿದ ಅಸೈನ್ ಮೆಂಟ್ ನಿರ್ವಹಿಸುತ್ತಾರೆ ಅಷ್ಟೆ. ಆ್ಯಂಕರ್ ಗಳದ್ದೂ ತಪ್ಪಿಲ್ಲ ಬುಲೇಟಿನ್ ಪ್ರೊಡ್ಯೂಸರ್ ಟಿಪಿಯಲ್ಲಿ ಹಾಕಿದ ಬುಲೆಟಿನ್ ಬ್ರೇಕಿಂಗ್ ಪಾಯಿಂಟ್ಸ್ ಓದಿ ರ್ಯಾಪ್ ಅಪ್ ಮಾಡುತ್ತಾರೆ. ಅಸೈನ್ ಮೆಂಟ್ ಹಾಕುವ ಇನ್ ಪುಟ್ ಹೆಡ್ ಗಳಿಗೆ ಯಾವ ರೋಗ ಅಮರಿಕೊಂಡಿದೆ? ಎಣ್ಣೆ ಬಿಟ್ಟರೆ ಆದ್ಯತೆ ನೀಡಬೇಕಾದ ಕರೋನ ಸಂಕಷ್ಟದ ಬೇರೆ ಜ್ವಲಂತ ಸಮಸ್ಯೆಗಳಿಲ್ಲವೇ? ಇನ್ನೆ ಆ ಮಹಾನುಭಾವ ಕನ್ನಡದ ಮಹಾನ್ ಕವಿ ನಿಸಾರ್ ದೇಹತ್ಯಾಗ ಮಾಡಿದ್ರು. ಅವರ ಸಾಧನೆಯನ್ನು ತೋರಿಸಲು ಎಷ್ಟು ಕಾಲ ಮೀಸಲಿಟ್ರಿ. ಎಣ್ಣೆ ಅಂಗಡಿ ತೆರೆದಿದ್ದನ್ನು ತೋರಿಸಲು ಎಷ್ಟು ಬುಲೇಟಿನ್ ನಲ್ಲಿ ಜಾಗ ಕೊಟ್ರಿ. ಕೆಲವು ವಾಹಿನಿಗಳಲ್ಲಿ ಎಣ್ಣೆ ಅಂಗಡಿಗಳನ್ನು ತೆರೆಯುವ ಕುರಿತು ಕೌಂಟ್ ಡೌನ್ ಸಹ ಇತ್ತು. ನಿಮ್ಮ ಆದ್ಯತೆಯೇನು? ವೈನ್ ಶಾಪ್ ತೆರೆಯುವ ಬಗ್ಗೆ ನಿಮ್ಮ ನಿಲುವೇನು? ಪರವೋ ವಿರೋಧವೋ? ನೀವು ಸಮಯಸಾಧಕರಲ್ಲವೇ?

ಕರೋನಾ ಅಲ್ಲ ನಿಮಗೆ ಹಿಡಿದಿರುವ ರೋಗವನ್ನು ಭಗವಂತನಿಂದಲೂ ವಾಸಿ ಮಾಡಲು ಸಾಧ್ಯವಿಲ್ಲ. ಈಗ ಹೇಳಿ ಕುಡುಕರನ್ನು ಬಯ್ಯುವ ಹೀಯಾಳಿಸುವ ನೈತಿಕತೆ ನಮಗಿದೆಯೇ?

-ವಿಭಾ

Tags: GaneshaVibhaVidyapeeth
ShareTweetSendShare
Join us on:

Related Posts

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 18, 2026
0

ದಿನ ಭವಿಷ್ಯ : 18-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಲಿವೆ. ನಿಮ್ಮ ಕಾರ್ಯಕ್ಷಮತೆಯಿಂದ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ವ್ಯಾಪಾರಸ್ಥರಿಗೆ ಹಳೆಯ...

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

by Shwetha
May 17, 2026
0

ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮಷಿನ್ ಮತ್ತು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯ...

ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್  ವಾಗ್ದಾಳಿ

ಎಸ್‌ಐಆರ್ ಎಂಬ ಗುಪ್ತ ಅಸ್ತ್ರದ ಬಗ್ಗೆ ಎಚ್ಚರ: ಪ್ರಧಾನಿ ಮೋದಿ ವೈಫಲ್ಯಗಳ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ

by Shwetha
May 17, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕ ವೈಫಲ್ಯಗಳ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ....

ನಾನೇ ಖುದ್ದಾಗಿ ಪಕ್ಷದ ಆಫೀಸ್ ಗೆ ಪೇಂಟ್ ಮಾಡ್ತೀನಿ : ಹೋಗುವವರು ಹೋಗಲಿ ಎಂದು ಗುಡುಗಿದ ದೀದಿ

ನಾನೇ ಖುದ್ದಾಗಿ ಪಕ್ಷದ ಆಫೀಸ್ ಗೆ ಪೇಂಟ್ ಮಾಡ್ತೀನಿ : ಹೋಗುವವರು ಹೋಗಲಿ ಎಂದು ಗುಡುಗಿದ ದೀದಿ

by Shwetha
May 17, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದಂತಹ ಭಾರಿ ಹಿನ್ನಡೆಯನ್ನು ತೃಣಮೂಲ ಕಾಂಗ್ರೆಸ್ ಅನುಭವಿಸಿದೆ. ಬಂಗಾಳದ ಅಧಿಪತಿ ಎಂದೇ ಕರೆಯಲ್ಪಡುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈಗ...

ಮೇ 26ಕ್ಕೆ ಕೇರಳ ಪ್ರವೇಶಿಸಲಿದೆ ಮುಂಗಾರು

ಮೇ 26ಕ್ಕೆ ಕೇರಳ ಪ್ರವೇಶಿಸಲಿದೆ ಮುಂಗಾರು

by Shwetha
May 17, 2026
0

ದೇಶದ ಕೃಷಿ ಚಟುವಟಿಕೆಗಳಿಗೆ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram