ದೇಶದ ಮೊದಲ ವಿಮಾನಯಾನ ಸಂಸ್ಥೆಗೆ ಏರ್ ಇಂಡಿಯಾ ಎಂದು ಹೆಸರು ಬಂದಿದ್ದು ಹೇಗೆ ಗೊತ್ತಾ ?
ದೇಶದ ಮೊದಲ ವಿಮಾನಯಾನ ಸಂಸ್ಥೆಗೆ ಏರ್ ಇಂಡಿಯಾ ಎಂದು ಹೆಸರು ಬಂದಿದ್ದು ಹೇಗೆ ಎನ್ನುವುದನ್ನ ಟಾಟಾ ಸಂಸ್ಥೆ ಟ್ವಿಟರ್ ನಲ್ಲಿ ಹಂಚಿಕೊಡಿದೆ.
75 ವರ್ಷಗಳ ಹಿಂದೆ ಟಾಟಾ ಸಂಸ್ಥೆ ಉದ್ಯೋಗಿಗಳ ನಡುವೆ ಅಭಿಪ್ರಾಯ ಸಂಗ್ರಹಣೆ ನಡೆಸಿತ್ತು. ಇದರಲ್ಲಿ ದೇಶದ ಮೊದಲ ವಿಮಾನಯಾನ ಸಂಸ್ಥೆಗೆ ಹೆಸರನ್ನ ಆಯ್ಕೆ ಮಾಡಲು 4 ಹೆಸರುಗಳನ್ನ ಸೂಚಿಸಿತ್ತು. ಈ ಅಭಿಪ್ರಾಯದ ಪಲಿತಾಂಶದ ಆಧಾರದ ಮೇಲೆ ಏರ್ ಇಂಡಿಯಾ ಎಂದು ನಾಮಕಾರಣ ಮಾಡಲಾಗಿತ್ತು..
ಇತ್ತೀಚೆಗೆ, ಏರ್ ಇಂಡಿಯಾವನ್ನು ಅಧಿಕೃತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ಟಾಟಾ ಸಮೂಹವು ಈ ಏರ್‌ಲೈನ್‌ನ ಇತಿಹಾಸಕ್ಕೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ಹಂಚಿಕೊಂಡಿದೆ.
ಸಾಲದ ಸುಳಿಗೆ ಸಿಲುಕಿರುವ ಏರ್ ಇಂಡಿಯಾವನ್ನು ಸರ್ಕಾರ ಜನವರಿ 27 ರಂದು ಟಾಟಾ ಸಮೂಹಕ್ಕೆ ಹಸ್ತಾಂತರಿಸಿತ್ತು. ಅಂದಹಾಗೆ, ಸುಮಾರು ಏಳು ದಶಕಗಳ ನಂತರ ಏರ್ ಇಂಡಿಯಾ ಮತ್ತೊಮ್ಮೆ ಟಾಟಾ ಸಮೂಹದ ನಿಯಂತ್ರಣಕ್ಕೆ ಬಂದಿದೆ.
1946 ರಲ್ಲಿ ಟಾಟಾ ಏರ್ ಲೈನ್ಸ್ ಅನ್ನ ಕಂಪನಿಯಾಗಿ ವಿಸ್ತರಿಸಿದಾಗ ಅದಕ್ಕೆ ಹೆಸರನ್ನ ಆಯ್ಕೆ ಮಾಡಬೇಕಿತ್ತು.. ಆಗ “ಇಂಡಿಯನ್ ಏರ್‌ಲೈನ್ಸ್, ಪ್ಯಾನ್-ಇಂಡಿಯನ್ ಏರ್‌ಲೈನ್ಸ್, ಟ್ರಾನ್ಸ್-ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ದೇಶದ ಮೊದಲ ಏರ್‌ಲೈನ್‌ಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು.
ಇದಕ್ಕಾಗಿ ಟಾಟಾ ಉದ್ಯೋಗಿಗಳಿಗೆ ಮತಪತ್ರಗಳನ್ನು ವಿತರಿಸಲಾಯಿತು ಮತ ಎಣಿಕೆಯಲ್ಲಿ ಏರ್ ಇಂಡಿಯಾ 64 ಮತಗಳನ್ನು ಪಡೆದರೆ, ಟ್ರಾನ್ಸ್-ಇಂಡಿಯನ್ ಏರ್‌ಲೈನ್ಸ್ 28 ಮತ್ತು ಪ್ಯಾನ್-ಇಂಡಿಯನ್ ಏರ್ಲೈನ್ಸ್ 19 ಮತಗಳನ್ನು ಪಡೆದವು. ಏರ್ ಇಂಡಿಯಾ 72 ಮತ್ತು ಇಂಡಿಯನ್ ಏರ್ಲೈನ್ಸ್ 58 ಮತಗಳನ್ನು ಪಡೆದುಕೊಂಡಿತು. ಇದರ ನಂತರ ದೇಶದ ಮೊದಲ ವಿಮಾನಯಾನ ಸಂಸ್ಥೆಗೆ ಏರ್ ಇಂಡಿಯಾ ಎಂದು ಹೆಸರಿಸಲಾಯಿತು.