ಭಾರತೀಯ ಚಿತ್ರರಂಗ ಕಂಡ ಅದ್ಭುತ ಸಂಗೀತ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಯುಗಾಂತ್ಯವಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ನನ್ನ ಆರೋಗ್ಯ ಉತ್ತಮವಾಗಿದೆ. ಶೀತವೊಂದು ಬಿಟ್ಟರೆ, ನಾನು ಆರೋಗ್ಯವಾಗಿ ಇದ್ದೇನೆ. ಎರಡು-ಮೂರು ದಿನಗಳಿಂದ ಶೀತ ಮತ್ತು ಜ್ವರ ಕೂಡ ಇತ್ತು. ಹಾಗಾಗಿ ಅದನ್ನು ನಿರ್ಲಕ್ಷ್ಯಿಸದೆ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಂಡೆ. ಆಗ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಯಿತು. ಸಣ್ಣ ಪ್ರಮಾಣದಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ ಎಂದು ಆಸ್ಪತ್ರೆಯಿಂದ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದ್ದರು. ಆದರೆ ಅಗಸ್ಟ್ 13ರ ರಾತ್ರಿ ಎಸ್’ಪಿಬಿ ಆರೋಗ್ಯ ಚಿಂತಾಜನಕ ಸ್ಥಿತಿ ತಲುಪಿದೆ. ಐಸಿಯುನಲ್ಲಿ ಈಗ ಅವರಿಗೆ ಚಿಕಿತ್ಸೆ ನಡೆಯುತ್ತಿದೆ ಎಂಬ ಆಘಾತಕಾರಿ ವರದಿ ಹೊರಬಂತು. ನಂತರ ಅಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಜೊತೆಗೆ ಕೊರೋನಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ಕೂಡ ಆಗಿತ್ತು. ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಅವರ ಆರೋಗ್ಯ ಪುನಃ ಗಂಭೀರ ಸ್ಥಿತಿಗೆ ತಲುಪಿತ್ತು. ಅವರ ಆರೋಗ್ಯ ಚೇತರಿಕೆಗಾಗಿ ಸೆಲೆಬ್ರಿಟಿಗಳು ಸೇರಿದಂತೆ ಅವರ ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದರು.
ಎಸ್’ಪಿಬಿ ಗುಣಮುಖರಾಗಿ ಬಂದೇ ಬರುತ್ತಾರೆ ಎಂದು ಎಲ್ಲರೂ ವಿಶ್ವಾಸ ಇಟ್ಟಿದ್ದರು. ಆದರೆ ಎಲ್ಲರ ನಂಬಿಕೆ ವಿಶ್ವಾಸ ಹುಸಿಯಾಗಿದೆ. ಗಾನಸುಧೆ ಎಸ್ ಪಿ ಬಿ ಹಾಡು ನಿಲ್ಲಿಸಿ ಸಪ್ತ ಸ್ವರಗಳಲ್ಲಿ ಲೀನವಾಗಿದ್ದಾರೆ.
74ರ ಹರೆಯದ ಸ್ವರ ಮಾಂತ್ರಿಕ ಎಸ್.ಪಿ. ಬಾಲಸುಬ್ರಮಣ್ಯಂ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ದಕ್ಷಿಣ ಭಾರತದ ಸಿನಿ ರಂಗದಲ್ಲಿ ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಎಸ್ ಪಿಬಿ ಭಾರತೀಯ ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆ ಅನನ್ಯ. 2001ರಲ್ಲಿ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿ ಗೌರವ, 2011ರಲ್ಲಿ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ಗೌರವ, 2016ರಲ್ಲಿ ಭಾರತೀಯ ಸಿನಿ ಲೋಕದ ವರ್ಷದ ಪ್ರಶಸ್ತಿ ಗೌರವಕ್ಕೆ ಅವರು ಭಾಜನರಾಗಿದ್ದಾರೆ. ಗರಿಷ್ಠ ಹಾಡುಗಳನ್ನು ಹಾಡಿ ಗಿನ್ನೆಸ್ ರೆಕಾರ್ಡ್ ಮಾಡಿರುವ ಎಸ್ ಪಿಬಿ ಅವರಿಗೆ ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಲವು ಡಾಕ್ಟರೇಟ್ ಪದವಿಗಳು ಅವರಿಗೆ ಒಲಿದು ಬಂದಿವೆ.
ಕನ್ನಡವೆಂದರೆ ತಲೆ ಬಾಗುತ್ತಿದ್ದ ಎಸ್ ಪಿಬಿ ಜಗ ಮರೆಯದ ನಿಜ ಕಲಾವಿದ
1966ರಲ್ಲಿ ಮರ್ಯಾದ ರಾಮಣ್ಣ ಚಿತ್ರಕ್ಕೆ ಮೊದಲ ಬಾರಿ ಹಾಡಿರುವ ಎಸ್ ಪಿಬಿ, ಬಾಲಿವುಡ್ ಚಲನಚಿತ್ರ ಮೈನೆ ಪ್ಯಾರ್ ಕೀಯಾ ಚಿತ್ರದ ಹಾಡಿನ ಮೂಲಕ ಜನರನ್ನು ಮೋಬಾರದ ಲೋಕಕ್ಕೆ ಗಾನಗಾರುಡಿಗ; ಎಸ್ಪಿಬಿ ಧ್ವನಿಯಾಗಿದ್ದು ಎಷ್ಟು ನಟರಿಗೆ ಗೊತ್ತೇ?ಡಿ ಮಾಡಿದ್ದರು
ತಮಿಳಿನಲ್ಲಿ ಇಳೆಯರಾಜ ಸಂಗೀತ ನಿರ್ದೇಶನದಲ್ಲಿ ಹೆಚ್ಚು ಹಾಡುತ್ತಿದ್ದ ಎಸ್ ಪಿ ಬಿ, ಕನ್ನಡದಲ್ಲಿ ಹಂಸಲೇಖಾ ಜೊತೆ ಪ್ರೇಮಲೋಕದಲ್ಲಿ ಅಭಿಮಾನಿಗಳನ್ನು ತೇಲುವಂತೆ ಮಾಡಿದ್ದರು. ವಿದ್ಯಾಸಾಗರ್, ಎಮ್.ಎಮ್. ಕೀರವಾಣಿ, ಎಸ್.ಎ. ರಾಜ್ ಕುಮಾರ್, ದೇವ ಮತ್ತು ಎ.ಆರ್. ರೆಹಮಾನ್ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದ ಎಸ್ ಪಿ ಬಿ ಅವರು ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಗಾಯಕರಾಗಿದ್ದರು. ಬಾಲಸುಬ್ರಹ್ಮಣ್ಯಂ ಆಕಸ್ಮಿಕವಾಗಿ ಕೆ.ಬಾಲಚಂದರ್ ಅವರ ಚಿತ್ರ ಮನ್ಮಧಾ ಲೀಲಾ ಅದರ ತೆಲುಗು ಆವೃತ್ತಿ ಮನ್ಮಧಾ ಲೀಲೈ ಯಿಂದ ಡಬ್ಬಿಂಗ್ ಕಲಾವಿದರಾದರು.
ಕಮಲ್ ಹಾಸನ್, ರಜನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ. ಭಾಗ್ಯರಾಜ್, ಮೋಹನ್, ಅನಿಲ್ ಕಪೂರ್, ಗಿರೀಶ್ ಕರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್, ಕಾರ್ತಿಕ್, ಮತ್ತು ರಘುವರನ್ ಸೇರಿದಂತೆ ವಿವಿಧ ಕಲಾವಿದರಿಗೆ ಅವರು ಧ್ವನಿ ನೀಡಿದ್ದರು. ದಾಸವತಾರಂನ ತೆಲುಗು ಆವೃತ್ತಿಗೆ, ಕಮಲ್ ಹಾಸನ್ ನಿರ್ವಹಿಸಿದ ಹತ್ತು ಪಾತ್ರಗಳಲ್ಲಿ ಸ್ತ್ರೀ ಪಾತ್ರವನ್ನು ಒಳಗೊಂಡಂತೆ ಏಳು ಪಾತ್ರಗಳಿಗೆ ಧ್ವನಿ ನೀಡಿದ್ದರು. ಅಣ್ಣಮಯ್ಯ ಮತ್ತು ಶ್ರೀ ಸಾಯಿ ಮಹೀಮಾ ಚಿತ್ರಗಳಿಗಾಗಿ ಅತ್ಯುತ್ತಮ ಡಬ್ಬಿಂಗ್ ಕಲಾವಿದರಿಗಾಗಿ ನಂದಿ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು.
ಎಸ್ ಪಿಬಿ ವಿವಿಧ ಭಾಷೆಗಳ ಪರಿಧಿಯಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಮಹಾನ್ ಗಾಯಕ. ಗಾಯನದಲ್ಲಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲಿ ಕೂಡ ಇವರ ಸಾಧನೆ ಅದ್ವಿತೀಯ.