ಹಾಸನದಲ್ಲಿ ಕೊರೊನಾ ಪಾಸಿಟಿವಿಟಿ ದರ ಎಷ್ಟಿದೆ ಗೊತ್ತಾ..?
ಹಾಸನ : ಇಂದಿನಿಂದ ರಾಜ್ಯಾದ್ಯಂತ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಹಿನ್ನಲೆ ಹಾಸನದಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರಲಿದೆ. ವಿನಾಕಾರಣ ಯಾರೂ ಹೊರಗಡೆ ಓಡಾಡಬಾರದು. ಅನಾವಶ್ಯಕ ಓಡಾಟ ಕಂಡು ಬಂದರೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. corona positivity
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಡಿ.30 ರಿಂದ ಜ.2 ರವರೆಗೆ ಶೇ.50 ರಷ್ಟು ಹೋಟೆಲ್ ಬುಕ್ಕಿಂಗ್ ಮಾಡಬೇಕು. ಡಿಜೆ, ಮ್ಯೂಸಿಕ್, ವಿಶೇಷ ಕಾರ್ಯಕ್ರಮಗಳು ನಿಷೇಧಿಸಲಾಗಿದೆ. ಹೋಂಸ್ಟೇ, ರೆಸಾರ್ಟ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೊಲೀಸ್ ಸೂಚನೆ ಮೇರೆಗೆ ಈಗಾಗಲೇ ರೆಸಾರ್ಟ್ ಗಳಲ್ಲಿ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಳೆದ ಏಳು ದಿನಗಳಲ್ಲಿ 0.15 ಪಾಸಿಟಿವಿಟಿ ದರ ಇದೆ, ಹದಿನೈದು ದಿನಗಳಲ್ಲಿ 0.18 ದರ ಇದೆ. ಪ್ರತಿದಿನ 3000 ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.